ಬಸ್‌ ಮೇಲ್ಛಾವಣಿ ಸೋರಿಕೆ : ಛತ್ರಿ ಹಿಡಿದುಕೊಂಡು ಡ್ರೈವಿಂಗ್‌ ಮಾಡಿದ ಚಾಲಕ | ವೀಕ್ಷಿಸಿ

ಮಳೆಯ ಸಮಯದಲ್ಲಿ ವಾಹನದ ಮೇಲ್ಛಾವಣಿ ಸೋರಿಕೆಯಾಗುತ್ತಿರುವುದರಿಂದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್‌ಆರ್‌ಟಿಸಿ) ಬಸ್ ಚಾಲಕರೊಬ್ಬರು ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಆಹೇರಿ ಡಿಪೋದಲ್ಲಿನ ಶಿಥಿಲಗೊಂಡ ಬಸ್‌ಗಳ ಸಮಸ್ಯೆಯ ಬಗ್ಗೆ ಮತ್ತೊಮ್ಮೆ … Continued

ಚಂದ್ರಯಾನ-3 : ಇಸ್ರೋ ಮಹಿಳಾ ವಿಜ್ಞಾನಿಗಳೊಂದಿಗೆ ಬೆರೆತ ಪ್ರಧಾನಿ ಮೋದಿ | ವೀಕ್ಷಿಸಿ

ಬೆಂಗಳೂರು: ಯಶಸ್ವಿ ಚಂದ್ರಯಾನ-3 ಮಿಷನ್‌ನ ಭಾಗವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಮಹಿಳಾ ವಿಜ್ಞಾನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ (26 ಆಗಸ್ಟ್) ಸಂವಾದ ನಡೆಸಿದರು. ‘ನಾರಿ ಶಕ್ತಿ’ ಭಾರತದ ಚಂದ್ರನ ಲ್ಯಾಂಡಿಂಗ್ ಮಿಷನ್‌ನ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ … Continued

ಅಪಘಾತದಲ್ಲಿ ಸ್ಫೋಟಗೊಳ್ಳುವ ಮೊದಲು ವಿಶ್ವ ದಾಖಲೆ ಸ್ಥಾಪಿಸಿದ ರಿಮೋಟ್-ನಿಯಂತ್ರಿತ ಕಾರು | ವೀಕ್ಷಿಸಿ

ಬ್ರಿಟಿಷ್ ವ್ಯಕ್ತಿಯ ಜೆಟ್ ಇಂಜಿನ್‌ನಿಂದ ಚಾಲಿತವಾದ ರಿಮೋಟ್-ನಿಯಂತ್ರಿತ ಕಾರು ತನ್ನ ಆರಂಭಿಕ ಪ್ರಯತ್ನದಲ್ಲಿಯೇ ವೇಗವಾಗಿ ಓಡಿದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದೆ. ಆದರೆ, ಮೂರನೇ ಪ್ರಯತ್ನದಲ್ಲಿ ಕಾರು ಸ್ಫೋಟಗೊಂಡಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಜೇಮ್ಸ್ ವೊಮ್ಸ್ಲೆ (ಯುಕೆ), ತನ್ನ ” ಏರೋಸ್ಪೇಸ್ ಇಂಜಿನಿಯರಿಂಗ್” ಯೂಟ್ಯೂಬ್ ಚಾನೆಲ್ ಪ್ರಾಜೆಕ್ಟ್ ಏರ್‌ಗೆ ಹೆಸರುವಾಸಿಯಾಗಿದ್ದು, ರಿಮೋಟ್ ಕಂಟ್ರೋಲ್ಡ್ (ಆರ್‌ಸಿ) … Continued

ಚಂದ್ರಯಾನ-3 ಮಿಷನ್‌ : 3 ಉದ್ದೇಶಗಳಲ್ಲಿ ಎರಡನ್ನು ಸಾಧಿಸಲಾಗಿದೆ, ಮೂರನೇ ಉದ್ದೇಶದ ಪ್ರಯೋಗಗಳು ನಡೆಯುತ್ತಿವೆ ; ಇಸ್ರೋ

ಬೆಂಗಳೂರು : ಚಂದ್ರಯಾನ-3 ಮಿಷನ್ ಮೂರು ಉದ್ದೇಶಗಳಲ್ಲಿ ಎರಡನ್ನು ಸಾಧಿಸಲಾಗಿದೆ ಮತ್ತು ಮೂರನೇ ಉದ್ದೇಶದ ವೈಜ್ಞಾನಿಕ ಪ್ರಯೋಗಗಳು ನಡೆಯುತ್ತಿವೆ ಎಂದು ಶನಿವಾರ ಇಸ್ರೋ ಹೇಳಿದೆ. ಇಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯು ಚಂದ್ರಯಾನ-3 ಮಿಷನ್‌ನ ಎಲ್ಲಾ ಪೇಲೋಡ್‌ಗಳು ಸಮಪರ್ಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಹೇಳಿದೆ. “ಚಂದ್ರಯಾನ-3 ಮಿಷನ್: ಕಾರ್ಯಾಚರಣೆಯ 3 ಉದ್ದೇಶಗಳಲ್ಲಿ, ಚಂದ್ರನ … Continued

ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ‘ನಾಗಿಣಿ ನೃತ್ಯ’ ಮಾಡಿದ ಮಹಿಳೆ : ವೀಡಿಯೊ ವೈರಲ್‌

ಸಹರಾನ್‌ಪುರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಅಚ್ಚರಿಯ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಅಲ್ಲಿ  ‘ನಾಗಿನ್ ಡ್ಯಾನ್ಸ್’ ಮಾಡಿದ್ದಾರೆ ಎಂದು ವರದಿಯಾಗಿದ್ದು, ಇದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಆಗಸ್ಟ್ 24 ರಂದು ಮೇಲ್ಮನವಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಯಾರೋ ನೆಲದ ಮೇಲೆ ಬೀಳುವ ಶಬ್ದ … Continued

ಜೈಲಿನಲ್ಲಿ ಈಜುಕೊಳ ಬೇಕೆನ್ನುತ್ತಿದ್ದಾರೆ ಸತ್ಯೇಂದ್ರ ಜೈನ್: ಸುಪ್ರೀಂ ಕೋರ್ಟಿಗೆ ಇ.ಡಿ ಮಾಹಿತಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ದೆಹಲಿಯ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಣೆ ಮಾಡಲು ಜಾರಿ ನಿರ್ದೇಶನಾಲಯ (ಇ.ಡಿ.) ವಿರೋಧ ವ್ಯಕ್ತಪಡಿಸಿದೆ. ಸತ್ಯೇಂದ್ರ ಜೈನ್ ಅವರು ಜೈಲಿನ ಆವರಣದಲ್ಲಿ ಈಜು ಕೊಳ ಬೇಕೆಂದು ಕೇಳುತ್ತಿದ್ದಾರೆ ಎಂದು ಅದು ಶುಕ್ರವಾರ … Continued

ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ: ಆಹಾರ ಸಚಿವ ಮುನಿಯಪ್ಪ ಸ್ಪಷ್ಟನೆ

ಹಾಸನ : ರಾಜ್ಯದಲ್ಲಿ ಯಾವುದೇ ಬಿಪಿಎಲ್​ ಕಾರ್ಡ್​ ರದ್ದು ಮಾಡುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಹಾಸನದಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಲಕ್ಷ ಜನರು ಅರ್ಜಿ ಹಾಕಿದ್ದರು. ಅರ್ಜಿ ಬಗ್ಗೆ ಪರಿಶೀಲನೆ ಮಾಡಿ ಅನುಮೋದನೆ ಮಾಡಲು ಸೂಚಿಸಲಾಗಿದೆ. 3 ತಿಂಗಳಲ್ಲಿ ಅರ್ಹರಿಗೆ ಬಿಪಿಎಲ್ ಮತ್ತು ಎಪಿಎಲ್ … Continued

ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಚಿತ್ರವನ್ನು ಮೋದಿಗೆ ನೀಡಿದ ಇಸ್ರೋ

ಬೆಂಗಳೂರು : ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೊವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೋ ವಿಜ್ಞಾನಿಗಳು ಉಡುಗೊರೆಯಾಗಿ ನೀಡಿದ್ದಾರೆ. ಪ್ರಧಾನಿ ಮೋದಿ ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಶನಿವಾರ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದರು. ಈ ವೇಳೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೊವನ್ನು ಇಸ್ರೋ ಅಧ್ಯಕ್ಷ ಎಸ್. … Continued

ಅಕ್ಟೋಬರಿನಲ್ಲಿ ಮಹಿಳಾ ರೋಬೋಟ್ ‘ವ್ಯೋಮಮಿತ್ರ’ ಬಾಹ್ಯಾಕಾಶಕ್ಕೆ ಹೋಗಲಿದೆ : ಮತ್ತೊಂದು ಮಹತ್ವದ ಘೋಷಣೆ ಮಾಡಿದ ಕೇಂದ್ರ ಸಚಿವರು

ನವದೆಹಲಿ : ಭಾರತವು ಗಗನಯಾನ ಮಿಷನ್‌ನಲ್ಲಿ ಮಹಿಳಾ ರೋಬೋಟ್ “ವ್ಯೋಮಮಿತ್ರ” ನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಶನಿವಾರ ಎನ್‌ಡಿಟಿವಿ ಜಿ20 ಶೃಂಗಸಭೆ ಸಂವಾದದಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಾಯೋಗಿಕವಾಗಿ ಗಗನಯಾನದ ಬಾಹ್ಯಾಕಾಶ ಹಾರಾಟಕ್ಕೆ ಪ್ರಯತ್ನಿಸಲಾಗುವುದು. ನಂತರದ ಕಾರ್ಯಾಚರಣೆಯಲ್ಲಿ … Continued

ಕಾರವಾರ : ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

ಕಾರವಾರ: ಮೂರು ವರ್ಷದ ಬಾಲಕಿಯೊಬ್ಬಳು ಮನೆಯ ಪಕ್ಕದಲ್ಲೇ ಇದ್ದ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಾರವಾರ ನಗರದ ಹರಿದೇವ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಬಾವಿಯ ಸಮೀಪ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತಳನ್ನು ಮೂರುವರ್ಷದ ಬಾಲಕಿ ಸ್ತುತಿ ಎಂದು ಗುರುತಿಸಲಾಗಿದೆ. ಈಕೆ … Continued