ಲೋಕಸಭೆಗೆ ಈಗ ಚುನಾವಣೆ ನಡೆದರೆ ಗೆಲ್ಲುವುದು ಮೋದಿಯೋ- ವಿಪಕ್ಷಗಳ ಒಕ್ಕೂಟವೋ…: ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಏನು ಹೇಳುತ್ತದೆ..?

ಈಗಲೇ ಲೋಕಸಭೆ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) 306 ಸ್ಥಾನಗಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ. ಸರ್ಕಾರ ರಚಿಸಲು ಅಗತ್ಯವಿರುವ 272 ಸಂಖ್ಯೆಯನ್ನು ಎನ್‌ಡಿಎ ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಮೂಡ್ ಆಫ್ ದಿ … Continued

ಚಂದ್ರಯಾನ-3 ಚಂದ್ರನ ಮೇಲ್ಮೈ ಸ್ಪರ್ಷಿಸುವ ಕೆಲವೇ ಕ್ಷಣಗಳ ಮೊದಲು ಚಂದ್ರ ಹೇಗೆ ಕಾಣುತ್ತಿತ್ತು ಎಂಬುದರ ವೀಡಿಯೊ ಹಂಚಿಕೊಂಡ ಇಸ್ರೋ | ವೀಕ್ಷಿಸಿ

ನವದೆಹಲಿ: ಆಗಸ್ಟ್ 23ರಂದು ಸಂಜೆ 6:04 IST ಕ್ಕೆ ಭಾರತದ ಬಾಹ್ಯಾಕಾಶ ನೌಕೆ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಐತಿಹಾಸಿಕ ಸ್ಪರ್ಶವನ್ನು ಮಾಡುವ ಮೊದಲು ಲ್ಯಾಂಡರಿಗೆ ಚಂದ್ರ ಹೇಗೆ ಕಾಣುತ್ತಿತ್ತು ಎಂಬ ವೀಡಿಯೊವನ್ನು ಇಸ್ರೋ ಹಂಚಿಕೊಂಡಿದೆ. ಚಂದ್ರಯಾನ-3, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದ … Continued

ಆಗಸ್ಟ್‌ 26ರಂದು ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು : ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳನ್ನು ನೇರವಾಗಿಯೇ ಭೇಟಿ ಮಾಡಿ ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಆಗಸ್ಟ್‌ 26) ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಗ್ಗೆ ಬೆಳಗ್ಗೆ 7 ರಿಂದ 8 ಗಂಟೆವರೆಗೆ ಪ್ರಧಾನಿ ಮೋದಿ ಅವರು ಇಸ್ರೋ ಕಚೇರಿಯಲ್ಲಿರುವ ವಿಜ್ಞಾನಿಗಳನ್ನು … Continued

ಚೆಸ್ ವಿಶ್ವಕಪ್ ಫೈನಲ್‌: ಟೈಬ್ರೇಕ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತ ಭಾರತದ ಪ್ರಗ್ನಾನಂದ

ನವದೆಹಲಿ: ಭಾರತದ ಗ್ರ್ಯಾಂಡ್‌ಮಾಸ್ಟರ್ 18 ವರ್ಷದ ಆರ್. ಪ್ರಗ್ನಾನಂದ ಅವರು ಗುರುವಾರ ನಡೆದ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಟೈಬ್ರೇಕರ್ ಪಂದ್ಯದಲ್ಲಿ ಸೋತಿದ್ದಾರೆ. ಮಂಗಳವಾರ ಮತ್ತು ಬುಧವಾರ ನಡೆದ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದು, ಫೈನಲ್‌ ಟೈ-ಬ್ರೇಕ್‌ ಹೋಯಿತು. ಮೊದಲ ಟೈ-ಬ್ರೇಕ್ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರು … Continued

“ಚಂದ್ರನ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿದ್ದು ಯಾಕೆಂದರೆ…”: ಚಂದ್ರಯಾನ-3ರ ಪ್ರಮುಖ ಉದ್ದೇಶಗಳ ಕುರಿತು ಮಾತನಾಡಿದ ಇಸ್ರೋ ಮುಖ್ಯಸ್ಥರು

ಬೆಂಗಳೂರು: ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದೆ. ಹಾಗೂ ಆ ಮೂಲಕ ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಪ್ಟೆಂಬರ್ 2019 ರಲ್ಲಿ ಚಂದ್ರಯಾನ-2ರ ಲ್ಯಾಂಡರ್‌ ಎಲ್ಲವನ್ನೂ ಸರಿಯಾಗಿ ನಿರ್ವಹಿಸಿ ಕೊನೆಯ ಕ್ಷಣದಲ್ಲಿ ಇಳಿಯುವಾಗ ಚಂದ್ರನ ಮೇಲೆ … Continued

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ : ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡ ಆಲಿಯಾ ಭಟ್, ಕೃತಿ ಸನೋನ್ ; ಅಲ್ಲು ಅರ್ಜುನ ಅತ್ಯುತ್ತಮ‌ ನಟ -ರಾಕೆಟ್ರಿ: ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ

ನವದೆಹಲಿ: ಗುರುವಾರ ನವದೆಹಲಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಗಂಗೂಬಾಯಿ ಕಥಿಯಾವಾಡಿ ಮತ್ತು ಮಿಮಿ ಚಿತ್ರದಲ್ಲಿನ ಅಭಿನಯಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ ಚಲನಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಮೂವರೂ ನಟರಿಗೆ ಇದು ಮೊದಲ ರಾಷ್ಟ್ರೀಯ ಪ್ರಶಸ್ತಿ. … Continued

ಬೆಂಗಳೂರು : ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ

ಬೆಂಗಳೂರು : ವಿಧಾನ ಪರಿಷತ್‌ನ ಮಾಜಿ ಸದಸ್ಯ ಆಯನೂರು ಮಂಜುನಾಥ ಅವರು ಜೆಡಿಎಸ್ ತೊರೆದು ಇಂದು ಗುರುವಾರ ಕಾಂಗ್ರೆಸ್‌ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಭಾನುವಾರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿದ ನಂತರ ಆಯನೂರು ಮಂಜುನಾಥ ಅವರು … Continued

ಬಡತನದಿಂದ ತುಂಬಿರುವ, ಶೌಚಾಲಯಗಳಿಲ್ಲದ ಭಾರತಕ್ಕೆ ಚಂದ್ರಯಾನ ಬೇಕಾ ಎಂದ ಬಿಬಿಸಿ ನಿರೂಪಕನಿಗೆ ತೀಕ್ಷ್ಣ ಉತ್ತರ ಕೊಟ್ಟ ಆನಂದ ಮಹಿಂದ್ರಾ

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಬಿಬಿಸಿ ನಿರೂಪಕರೊಬ್ಬರ ಹಳೆಯ ವೀಡಿಯೊವೊಂದು ಮತ್ತೆ ವೈರಲ್‌ ಆಗಿದೆ. ಈ ವೀಡಿಯೊದಲ್ಲಿ ಬಿಬಿಸಿ ನಿರೂಪಕ, ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಇಷ್ಟೊಂದು ಹಣವನ್ನು ಖರ್ಚು ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಭಾರತದ ಹೆಚ್ಚಿನ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ. 70ಕೋಟಿಗೂ ಹೆಚ್ಚು ಭಾರತೀಯರು ಶೌಚಾಲಯ ಹೊಂದಿಲ್ಲ ಎಂದು ಬಿಬಿಸಿ … Continued

ಚಂದ್ರಯಾನ-3 ಯಶಸ್ವಿ : ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಗ್ಗೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, … Continued

ಖರೀದಿಸಿದ ಸಾಮಗ್ರಿಗೆ ಬಿಲ್ ಪಡೆದರೆ 1 ಕೋಟಿ ರೂ. ವರೆಗೆ ಬಹುಮಾನ : ಸೆಪ್ಟೆಂಬರ್ 1ರಿಂದ ಜಿಎಸ್‌ಟಿ ಬಹುಮಾನ ಯೋಜನೆ ಆರಂಭ

ನವದೆಹಲಿ: ಜನರು ಪ್ರತಿ ಬಾರಿ ಖರೀದಿ ಮಾಡುವಾಗಲೂ ಜಿಎಸ್‌ಟಿ ಬಿಲ್‌ಗಳನ್ನು ಕೇಳುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ‘ಮೇರಾ ಬಿಲ್ ಮೇರಾ ಅಧಿಕಾರ್’ ಇನ್‌ವಾಯ್ಸ್ ಪ್ರೋತ್ಸಾಹಕ ಯೋಜನೆ ಪ್ರಾರಂಭಿಸಲು ಸಜ್ಜಾಗಿದೆ. ಈ ಜಿಎಸ್‌ಟಿ (GST) ಯೋಜನೆಯು 10,000 ರಿಂದ 1 ಕೋಟಿ ರೂಪಾಯಿಗಳವರೆಗೆ ನಗದು ಬಹುಮಾನಗಳನ್ನು ನೀಡುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್‌ ಟ್ಯಾಕ್ಸಸ್‌ ಮತ್ತು ಕಸ್ಟಮ್ಸ್ … Continued