ಜಿ 20 ನೇಪಥ್ಯದಲ್ಲಿ ಭಾರತ-ಕೆನಡಾ ಮಾತುಕತೆ : ಕೆನಡಾದಲ್ಲಿ ‘ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ: ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದಲ್ಲಿ “ಉಗ್ರವಾದಿಗಳು” ನಡೆಸುತ್ತಿರುವ “ಭಾರತ ವಿರೋಧಿ ಚಟುವಟಿಕೆಗಳ” ಬಗ್ಗೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಅವರು (ಪ್ರಧಾನಿ ಮೋದಿ) ಕೆನಡಾದಲ್ಲಿ ಉಗ್ರಗಾಮಿ ಅಂಶಗಳ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಭಾರತದ ಬಲವಾದ ಕಳವಳವನ್ನು ತಿಳಿಸಿದ್ದಾರೆ. … Continued

ಬೆಂಗಳೂರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ತಾಯಿ

ಬೆಂಗಳೂರು: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ತಾಯಿ ಉಷಾ ಸುನಕ್‌ ಅವರು ನಗರದಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡಿದ್ದರು. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿಯೊಂದಿಗೆ ಸುನಕ್‌ ತಾಯಿ ತಾಯಿ ಉಷಾ ಸುನಕ್‌ ಸಹ ಭಾರತಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ದೆಹಲಿಯಿಂದ ಬೆಂಗಳೂರಿಗೆ ಬಂದ ಉಷಾ ಸುನಕ್‌ … Continued

ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

ವಿಜಯವಾಡ : ತೆಲುಗು ದೇಶಂ(ಟಿಡಿಪಿ) ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಬಂಧಿಸಿದ್ದು, ವಿಜಯವಾಡದ ಭ್ರಷ್ಟಾಚಾರ ವಿರೋಧಿ ಬ್ಯೂರೋ ನ್ಯಾಯಾಲಯವು ಸೆಪ್ಟೆಂಬರ್‌ 23 ರ ವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ಸಿಆರ್‌ಪಿಸಿಯ ಸೆಕ್ಷನ್ 144 … Continued

ಪ್ರಧಾನಿ ಮೋದಿ ಜೊತೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾತುಕತೆ ನಡೆದಿರುವುದು ನಿಜ ಎಂದು ಹೇಳಿದ ದೇವೇಗೌಡ

ಬೆಂಗಳೂರು : 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಮಾಡಿಕೊಳ್ಳುವುದು ಅಂತಿಮ ಹಂತಕ್ಕೆ ಬಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿರುವುದು ನಿಜ ಎಂದು ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಹೇಳಿದ್ದಾರೆ. ಈ ಬಗ್ಗೆ ಭಾನುವಾರ (ಸೆಪ್ಟೆಂಬರ್‌ 10) ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ”ಮೈತ್ರಿ ಬಗ್ಗೆ … Continued

ನಾವು ಅದನ್ನು ನಿರೀಕ್ಷಿಸಿರಲಿಲ್ಲ…’: G20 ನಾಯಕರ ಘೋಷಣೆಯ ಬಗ್ಗೆ ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧಕ್ಕೆ ಜಿ20 ಶೃಂಗಸಭೆಯಲ್ಲಿ ಪ್ರಾಬಲ್ಯ ಸಾಧಿಸಲು ಅವಕಾಶ ನೀಡದ ಭಾರತವನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾನುವಾರ ಶ್ಲಾಘಿಸಿದ್ದಾರೆ. ಜಿ 20 ಶೃಂಗಸಭೆಯ ಮೊದಲ ದಿನದ ಎರಡನೇ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಮತ್ತು ಬಿಡುಗಡೆಯಾದ ನವದೆಹಲಿ ನಾಯಕರ ಘೋಷಣೆಯನ್ನು ಒಮ್ಮತದಲ್ಲಿ ಅಂಗೀಕರಿಸಬಹುದು ಎಂದು ರಷ್ಯಾ ನಿರೀಕ್ಷಿಸಿರಲಿಲ್ಲ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಬರುವ … Continued

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಕನಸು ನನಸಾಗಿಸಲು ಚರ್ಚ್ ಸೇವಾ ಪರವಾನಗಿ ಹಿಂದಿರುಗಿಸಿದ ಪಾದ್ರಿ

ತಿರುವನಂತಪುರಂ : ಶಬರಿಮಲೆ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಬಯಕೆಯಿಂದಾಗಿ ಕೇರಳದ ಚರ್ಚ್‌ ಪಾದ್ರಿಯೊಬ್ಬರು ತಮ್ಮ ಚರ್ಚ್ ಸೇವಾ ನಿರ್ವಹಣೆಯ ಪದವಿಯನ್ನು ಹಿಂದಿರುಗಿಸಿದ್ದಾರೆ ಎಂದು ವರದಿಯಾಗಿದೆ. ಅಯ್ಯಪ್ಪ ಭಕ್ತರು ಅನುಸರಿಸಿದ 41 ದಿನಗಳ ವ್ರತವನ್ನು ಅನುಸರಿಸಿದ ವಿವಾದದ ನಂತರ ಅವರು ಪಾದ್ರಿಗಾಗಿ ನೀಡಿದ್ದ ಚರ್ಚ್ ಪರವಾನಗಿ ಹಿಂದಿರುಗಿಸಿದ್ದಾರೆ. ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದ ಅಡಿಯಲ್ಲಿ … Continued

“ಹೆಮ್ಮೆಯ ಹಿಂದೂ ಎಂದರೆ…”: ದೆಹಲಿ ಅಕ್ಷರಧಾಮ ದೇವಾಲಯ ಭೇಟಿ ನಂತರ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮಾರ್ಮಿಕ ಪೋಸ್ಟ್‌

ನವದೆಹಲಿ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಇಂದು, ಭಾನುವಾರ (ಸೆಪ್ಟಂಬರ್‌ 10) ತಮ್ಮ G20 ಶೃಂಗಸಭೆಯ ಮಧ್ಯೆ ಸಮಯ ತೆಗೆದುಕೊಂಡು ನವದೆಹಲಿಯ ಪ್ರಖ್ಯಾತ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು. ಅವರು ದೇವಸ್ಥಾನದಲ್ಲಿ ಪೂಜೆ ಮತ್ತು ಅಭಿಷೇಕ ನೆರವೇರಿಸಿದರು ಹಾಗೂ ಅಲ್ಲಿನ ಸ್ವಾಮಿಗಳೊಂದಿಗೆ ಸಂವಾದ ನಡೆಸಿದರು. ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ … Continued

G20 ಅಧ್ಯಕ್ಷ ಸ್ಥಾನ ಬ್ರೆಜಿಲ್ ಗೆ ಹಸ್ತಾಂತರ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಿ 20 ಶೃಂಗಸಭೆಯನ್ನು ‘ಸ್ವಸ್ತಿ ಅಸ್ತು ವಿಶ್ವ’-ಶಾಂತಿಗಾಗಿ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳಿಸಿದರು. ಮುಂದಿನ ಜಿ 20 ಅಧ್ಯಕ್ಷ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು, ಭಾನುವಾರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರಿಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿದರು. ಬ್ರೆಜಿಲ್ ಅಧ್ಯಕ್ಷರು ಉದಯೋನ್ಮುಖ ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ … Continued

ಹೊನ್ನಾವರ: ಬೃಹತ್‌ ತಿಮಿಂಗಿಲದ  ಮೃತದೇಹ ಪತ್ತೆ | ವೀಡಿಯೊ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್‌ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ. ದೇಹದ ಭಾಗಗಳು ಕೊಳೆತು ಹೋಗಿದ್ದು ಮೀನು ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ ಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ … Continued

ಸಾರಿಗೆ ಸಂಸ್ಥೆಗೆ 13 ಸಾವಿರ ಸಿಬ್ಬಂದಿ ನೇಮಕ, 4 ಸಾವಿರ ಬಸ್‌ಗಳ ಖರೀದಿ : ಸಚಿವ ರಾಮಲಿಂಗಾರೆಡ್ಡಿ

ಮೈಸೂರು: ಕೆಎಸ್‌ಆರ್‌ಟಿಸಿ ಹಾಗೂ ಇತರೆ ನಿಗಮಗಳಿಗೆ 13 ಸಾವಿರ ಸಿಬ್ಬಂದಿ ನೇಮಕ ಮಾಡಲಾಗುವುದು ಹಾಗೂ 4 ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಎಸ್‌ಸಿ/ಎಸ್‌ಟಿ ಅಧಿಕಾರಿಗಳ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಡಾ. ಬಿಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲಾ … Continued