ಕಾರಿನಲ್ಲಿದ್ದ ಹಮಾಸ್ ಕಾರ್ಯಕರ್ತರ ಜೊತೆ ಶೂಟೌಟ್‌ನಲ್ಲಿ ಚಲಿಸುವ ಬೈಕ್‌ನಿಂದ ಗುಂಡು ಹಾರಿಸುತ್ತ ಇಬ್ಬರನ್ನು ಹೊಡೆದುರುಳಿಸಿದ ಇಸ್ರೇಲಿ ಪೋಲೀಸ್ : ದೃಶ್ಯ ವೀಡಿಯೊದಲ್ಲಿ ಸೆರೆ

ಗನ್‌ ಹಿಡಿದ ಇಬ್ಬರು ಹಮಾಸ್‌ ಉಗ್ರರನ್ನು ಹೊತ್ತೊಯ್ಯುತ್ತಿದ್ದ ಕಾರನ್ನು ತನ್ನ ಬೈಕಿನಲ್ಲಿ ಹಿಂಬಾಲಿಸಿದ ಇಸ್ರೇಲಿ ಪೋಲೀಸ್ ತನ್ನ ಬಂದೂಕಿನಿಂದ ಅವರತ್ತ ಗುಂಡು ಹಾರಿಸುತ್ತಿರುವ ವೀಡಿಯೊವೊಂದು ಹೊರಹೊಮ್ಮಿದೆ. ಇಸ್ರೇಲಿ ಪೊಲೀಸರು ಹಂಚಿಕೊಂಡಿರುವ ವೀಡಿಯೊದಲ್ಲಿ ಪೊಲೀಸ್‌ ತನ್ನ ಬೈಕಿನಿಂದ ಕಾರಿನತ್ತ ಗುಂಡುಹಾರಿಸುತ್ತ ಬೈಕ್‌ ಓಡಿಸುವುದು ಕಂಡುಬರುತ್ತದೆ. ಆತನ ಸಹೋದ್ಯೋಗಿಗಳು ಆ ಕಾರನ್ನು ಹಿಂದಿಕ್ಕುತ್ತಿದ್ದಂತೆ ಆತ ಗುಂಡು ಹಾರುವುದನ್ನು ಹೆಚ್ಚಿಸುತ್ತಾನೆ. ಖಾಲಿ ರಸ್ತೆಯಲ್ಲಿನ ಈ ದೃಶ್ಯವು ಹಾಲಿವುಡ್ ಆಕ್ಷನ್ ಚಲನಚಿತ್ರದಂತೆ ಕಾಣುತ್ತದೆ, ಆದರೆ ದಕ್ಷಿಣ ಇಸ್ರೇಲ್‌ ನಲ್ಲಿ ಪೊಲೀಸರು ಹಮಾಸ್ ಕಾರ್ಯಕರ್ತರನ್ನು ಮೇಲೆ ದಾಳಿ ಮಾಡುವ ದೃಶ್ಯ ಇದಾಗಿದೆ.
ಗಾಜಾ ಸಮೀಪದ ನಗರದ ನೆಟ್‌ವಿಯೋಟ್‌ನ ಹೊರಗೆ ನಡೆದ ಗುಂಡಿನ ಚಕಮಕಿಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಕಾರು ನಿಲ್ಲಿಸಿ ಪೊಲೀಸರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಕಾರಿನ ಕಿಟಕಿಯ ಒಡೆದ ಚೂರುಗಳು ರಸ್ತೆಯ ಮೇಲೆ ಬಿದ್ದಿವೆ.

“ಪೊಲೀಸ್ ಮತ್ತು ಗಡಿ ಪೊಲೀಸ್ ಅಧಿಕಾರಿಗಳು ಶನಿವಾರ ನೆಟಿವೋಟ್‌ನ ಹೊರಗೆ ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ವೀರೋಚಿತವಾಗಿ ಕೊಂದು ಹಾಕಿದ್ದಾರೆ. ನಮ್ಮ ನಾಗರಿಕರನ್ನು ಭಯೋತ್ಪಾದನೆಯಿಂದ ರಕ್ಷಿಸಲು ನಾವು ಮುಂಚೂಣಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಇಸ್ರೇಲ್‌ ಪೊಲೀಸ್‌ ಹೇಳಿದೆ.
ಇಸ್ರೇಲ್, ಹಮಾಸ್ ಗುಂಪನ್ನು ‘ಭಯೋತ್ಪಾದಕರು’ ಎಂದು ಪರಿಗಣಿಸುತ್ತದೆ, ಅವರೊಂದಿಗೆ ಇಸ್ರೇಲ್‌ ಹಲವಾರು ಹಿಂಸಾತ್ಮಕ ಘರ್ಷಣೆಗಳನ್ನು ನಡೆಸಿದೆ., ಇತ್ತೀಚಿನದು ಶನಿವಾರದಿಂದ ನಡೆಯುತ್ತಿದೆ.
ಇಸ್ರೇಲಿ ಪೊಲೀಸರು ಮತ್ತು ಸೈನಿಕರು ಶನಿವಾರ ಸಂಪೂರ್ಣ ಯುದ್ಧವು ಪ್ರಾರಂಭವಾದಾಗಿನಿಂದ ದೇಶದ ದಕ್ಷಿಣ ಭಾಗದಲ್ಲಿ ನಾಗರಿಕರನ್ನು ಹತ್ಯೆಗೈದ ಮತ್ತು ಒತ್ತೆಯಾಳಾಗಿಸಿಕೊಂಡಿರುವ ಹಮಾಸ್‌ ಗುಂಪಿನ ವಿರುದ್ಧ ಹೋರಾಡುತ್ತಿದ್ದಾರೆ.

ರಕ್ಷಣಾ ಪಡೆಗಳು ಗಾಜಾ ಗಡಿಯುದ್ದಕ್ಕೂ ಹಮಾಸ್ ಅಡಗುತಾಣಗಳ ಮೇಲೆ ದಾಳಿ ಮಾಡುತ್ತಿವೆ, ಅವುಗಳನ್ನು ಮುಗಿಸಲು ಪ್ರತಿಜ್ಞೆ ಮಾಡಿವೆ. ಹಮಾಸ್ ಸಾವಿರಾರು ರಾಕೆಟ್‌ಗಳನ್ನು ಇಸ್ರೇಲ್‌ಗೆ ಹಾರಿಸಿರುವುದಕ್ಕೆ ಹಾಗೂ ಇಸ್ರೇಲ್‌ ಗಡಿಯೊಳಗೆ ನುಗ್ಗಿ ತನ್ನ ನೂರಾರು ನಾಗರಿಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಇಸ್ರೇಲ್‌ ವೈಮಾನಿಕ ದಾಳಿ ನಡೆಸುತ್ತಿದೆ.
ಇಸ್ರೇಲ್ ತನ್ನ ವೈಮಾನಿಕ ದಾಳಿಯನ್ನು ಮುಂದುವರೆಸಿದರೆ, ಗಾಜಾ ಗಡಿಯಲ್ಲಿ ಅಪಹರಿಸಿ ಎಳೆದೊಯ್ದ ನಾಗರಿಕ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಹಮಾಸ್ ಬೆದರಿಕೆ ಹಾಕಿದೆ. ಆದಾಗ್ಯೂ, ಇಸ್ರೇಲ್ ಗಾಜಾದೊಳಗೆ ಭೂ ಆಕ್ರಮಣ ಸೇರಿದಂತೆ ತನ್ನ ದಾಳಿಯನ್ನು ಹೆಚ್ಚಿಸುವ ತನ್ನ ನಿರ್ಣಯವನ್ನು ಪುನರುಚ್ಚರಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement