ಬಿಹಾರದ ಹಿಲ್ಸಾ ಜಿಲ್ಲೆಯಲ್ಲಿ ಮೈದುನನ್ನು ಮದುವೆಯಾಗಲು ಇಬ್ಬರು ಅತ್ತಿಗೆಯಂದಿರು ಜಗಳ ಮಾಡಿಕೊಂಡ ವಿಚಿತ್ರ ಹಾಗೂ ಅಸಾಮಾನ್ಯ ಘಟನೆ ಇತ್ತೀಚಿಗೆ ನಡೆದಿರುವುದು ವರದಿಯಾಗಿದೆ.
ಈ ಪರಿಸ್ಥಿತಿ ವೇಳೆ ಪರಿಸ್ಥಿತಿ ಉಲ್ಬಣಗೊಂಡಿದ್ದು, ಇಬ್ಬರು ಮಹಿಳೆಯರ ತವರು ಮನೆಯ ಕುಟುಂಬದ ಸದಸ್ಯರು ಕೂಡ ಜಗಳದಲ್ಲಿ ಸೇರಿಕೊಂಡು ಪರಸ್ಪರ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ನೋಡುಗರು ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ, ಅದು ತಕ್ಷಣವೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.
ಬಿಹಾರದ ಹಿಲ್ಸಾ ಪಟ್ಟಣದಲ್ಲಿರುವ ಮಲಮಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ, ಮೈದುನನನ್ನು ಮದುವೆಯಾಗಲು ಇಬ್ಬರು ಸೊಸೆಯಂದಿರು ಹಾಗೂ ಅವರ ಕುಟುಂಬದ ಸದಸ್ಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದಾರೆ. ಮೊದಲು ಇಬ್ಬರು ಅತ್ತಿಗೆಯಂದಿರುವ ಹೊಡೆದಾಡಿಕೊಂಡರು, ನಂತರ ಅವರ ಕುಟುಂಬ ಸದಸ್ಯರು ಇದಕ್ಕೆ ಸೇರಿಕೊಂಡರು. ಇದು ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿತು. ಹಾಗೂ ಪೊಲೀಸರು ಮಧ್ಯಪ್ರವೇಶಿಲು ಕಾರಣವಾಯಿತು.
ಘಟನೆ ಏನು..?
ಈ ವಿಷಯದ ತಿರುಳು ಹರೇಂದ್ರ ಪಾಸ್ವಾನ್ ಎಂಬವರು, ಇವರು ಮಲಮಾ ಗ್ರಾಮದ ನಿವಾಸಿಯಾಗಿದ್ದು, ಅವರು ಮೂವರು ಸಹೋದರರಲ್ಲಿ ಕಿರಿಯವರಾಗಿದ್ದಾರೆ. ದುರದೃಷ್ಟವಶಾತ್, ಆತನ ಹಿರಿಯ ಸಹೋದರರೊಬ್ಬರು ಕೆಲವು ತಿಂಗಳ ಹಿಂದೆ ನಿಧನರಾಗಿದ್ದರು. ಈ ಅಣ್ಣನಿಗೆ ಮೂವರು ಮಕ್ಕಳಿದ್ದಾರೆ. ಹರೇಂದ್ರ ಪಾಸ್ವಾನ್ ತನ್ನ ದಿವಂಗತ ಅಣ್ಣನ ವಿಧವೆ ಪತ್ನಿಯನ್ನು ಮದುವೆಯಾಗಬೇಕು ಎಂಬುದು ಕುಟುಂಬದ ಆಶಯವಾಗಿತ್ತು. ಆದಾಗ್ಯೂ, ಎರಡನೇ ಸಹೋದರನ ಹೆಂಡತಿ ಈ ನಿರ್ಧಾರದ ಬಗ್ಗೆ ತಿಳಿದಾಗ, ತಾನೂ ಹರೇಂದ್ರನನ್ನು ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ, ಬಹುಶಃ ಆಸ್ತಿಯ ಪಡೆಯುವ ಆಲೋಚನೆಯಿಂದ ಆಮಿಷಕ್ಕೆ ಒಳಗಾಗಿರಬಹುದು ಎಂದು ಹೇಳಲಾಗಿದೆ.
ತಮ್ಮ ಮೈದುನನ್ನು ಮದುವೆಯಾಗುವ ಇಬ್ಬರು ಸೊಸೆಯಂದಿರ ಸಂಕಲ್ಪವು ಕೌಟುಂಬಿಕ ವಿಷಯವನ್ನು ಇನ್ನಷ್ಟು ಕಠಿಣವಾಗಿಸಿತು. ಹಾಗೂ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವಾಯಿತು. ಇದು ಜಗಳಕ್ಕೆ ತಿರುಗಿ ಇಬ್ಬರು ಸೊಸೆಯಂದಿರ ತವರು ಮನೆ ಕುಟುಂಬದವರು ಸಹ ಹೊಡೆದಾಟದಲ್ಲಿ ಪಾಲ್ಗೊಂಡರು. ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಅವರಲ್ಲಿ ಕೆಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿವಾದದ ಸುದ್ದಿ ಪೊಲೀಸರಿಗೆ ತಲುಪುತ್ತಿದ್ದಂತೆ, ಅವರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ಪೊಲೀಸರು ಪರಿಸ್ಥಿತಿಯನ್ನು ಗ್ರಹಿಸಿದರು. ಹಾಗೂ ಹರೇಂದ್ರ ಪಾಸ್ವಾನ್ ಮತ್ತು ಅವರ ದಿವಂಗತ ಅಣ್ಣನ ವಿಧವೆಯ ಜೊತೆ ವಿವಾಹವನ್ನು ಯಶಸ್ವಿಯಾಗಿ ನೆರವೇರಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ