‘ನಾನು ನನ್ನ ಕೈಯಿಂದಲೇ 10 ಯಹೂದಿಗಳನ್ನು ಕೊಂದಿದ್ದೇನೆ..: ಪೋಷಕರಿಗೆ ಫೋನ್ ನಲ್ಲಿ ಹೇಳಿಕೊಂಡ ಹಮಾಸ್ ಉಗ್ರನ ಆಡಿಯೊ ಹಂಚಿಕೊಂಡ ಇಸ್ರೇಲಿ ಸೇನೆ

ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) X ನಲ್ಲಿ ಬಿಡುಗಡೆ ಮಾಡಿದ ಫೋನ್ ರೆಕಾರ್ಡಿಂಗ್ ಆಡಿಯೊ ಕ್ಲಿಪ್‌ ಹಮಾಸ್ ಭಯೋತ್ಪಾದಕ ಮತ್ತು ಅವನ ಹೆತ್ತವರ ನಡುವಿನ ಆಘಾತಕಾರಿ ಸಂಭಾಷಣೆಯನ್ನು ಬಹಿರಂಗಪಡಿಸುತ್ತದೆ. ಆಡಿಯೊ ಕ್ಲಿಪ್‌ನಲ್ಲಿ ಹಮಾಸ್‌ ಉಗ್ರ ತಾನು 10 ಯಹೂದಿಗಳನ್ನು “ನನ್ನ ಕೈಯಿಂದಲೇ” ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಮತ್ತು ತಾನು ಹತ್ಯೆ ಮಾಡಿದವರ ಫೋಟೋಗಳನ್ನು ಕಳುಹಿಸುತ್ತೇನೆ ಎಂದು ಹೆತ್ತವರಿಗೆ ಹೇಳುತ್ತಾನೆ.
ಭಯೋತ್ಪಾದಕನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ, ಗಾಜಾ ಗಡಿಯ ಸಮೀಪವಿರುವ ಕಿಬ್ಬುಟ್ಜ್‌ನ ಮೆಫಾಲ್ಸಿಮ್‌ನಲ್ಲಿ ತಾನು ಕೊಲೆ ಮಾಡಿದ ಯಹೂದಿ ಮಹಿಳೆಯಿಂದ ಕದ್ದ ಫೋನ್‌ನಿಂದ ಆತ ತನ್ನ ಹೆತ್ತವರಿಗೆ ಕರೆ ಮಾಡಿದ್ದಾನೆ. ಆತ ತಾನು ಕೊಂದವರೆಲ್ಲರನ್ನೂ ನೋಡಲು ತನ್ನ ವಾಟ್ಸಾಪ್‌ (WhatsApp) ಸಂದೇಶವನ್ನು ಪರಿಶೀಲಸಲು ತನ್ನ ಹೆತ್ತವರಿಗೆ ಹೇಳುತ್ತಾನೆ.
“ನೋಡಿ ನಾನು ನನ್ನ ಕೈಯಿಂದಲೇ ಎಷ್ಟು ಮಂದಿಯನ್ನು ಕೊಂದಿದ್ದೇನೆ! ನಿನ್ನ ಮಗ ಯೆಹೂದ್ಯರನ್ನು ಕೊಂದ !” ಎಂದು ಆತ ಹೆಮ್ಮೆಯಿಂದ ಹೇಳುತ್ತಾನೆ.
ತಾನು ಮಹಿಳೆಯನ್ನು ಕೊಂದಿದ್ದೇನೆ, ಅವಳ ಗಂಡನನ್ನು ಕೊಂದಿದ್ದೇನೆ ಎಂದು ತನ್ನ ತಂದೆಗೆ ಹೇಳುತ್ತಾನೆ. “ನಾನು ನನ್ನ ಕೈಯಿಂದಲೇ 10 ಮಂದಿಯನ್ನು ಕೊಂದಿದ್ದೇನೆ! ಅಪ್ಪಾ, ನನ್ನ ಕೈಯಿಂದ 10!” ಎಂದು ಆತ ಪುನರಾವರ್ತಿಸುತ್ತಾನೆ.

ಅವನ ತಂದೆತಾಯಿಗಳು ಆತನ ಕಾರ್ಯಗಳನ್ನು ಸಂಭ್ರಮಿಸಿದಂತೆ ತೋರುತ್ತದೆ, ಅವನ ತಂದೆ, ” ನನ್ನ ಮಗನೇ, ದೇವರು ನಿನ್ನನ್ನು ಆಶೀರ್ವದಿಸಲಿ!” ಎಂದು ಹೇಳುತ್ತಾನೆ. ಮತ್ತು ಆತನ ತಾಯಿ ಮಗ ಸುರಕ್ಷಿತವಾಗಿ ವಾಪಸ್‌ ಬರುವುದನ್ನು ಆಶಿಸುತ್ತಾಳೆ. ಆದರೆ ಭಯೋತ್ಪಾದಕ ಮನೆಗೆ ಹಿಂತಿರುಗಲು ನಿರಾಕರಿಸುತ್ತಾನೆ, “ಹಿಂತಿರುಗಲು ಸಾಧ್ಯವಿಲ್ಲ. ಅದು ಸಾವು ಅಥವಾ ಗೆಲುವು.” ಎಂದು ಆತ ಹೇಳುತ್ತಾನೆ. “ಸತ್ತವರನ್ನು ನೋಡಿ” ಎಂದು ತನ್ನ ತಾನು ಕಳುಹಿಸಿದ ವಾಟ್ಸಾಪ್‌ ಮೆಸೇಜ್‌ ನೋಡುವಂತೆ ಆತ ತನ್ನ ಹೆತ್ತವರನ್ನು ಒತ್ತಾಯಿಸುತ್ತಾನೆ. ಚಿತ್ರಗಳು ಏನನ್ನು ತೋರಿಸುತ್ತವೆ ಅಥವಾ ಅವರ ಪೋಷಕರು ಅವುಗಳನ್ನು ನೋಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಐಡಿಎಫ್ ವಕ್ತಾರ ಡೇನಿಯಲ್ ಹಗರಿ ಅವರು ರೆಕಾರ್ಡಿಂಗ್ ಅನ್ನು ಆರಂಭದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪ್ರಸ್ತುತಪಡಿಸಲಾಯಿತು ಎಂದು ಗಮನಿಸಿದರು.
ಮತ್ತೊಂದೆಡೆ, ಇಸ್ರೇಲ್‌ನ ಮೇಲೆ ಹಮಾಸ್ ಭಯೋತ್ಪಾದಕ ಗುಂಪು ಅಕ್ಟೋಬರ್ 7 ರಂದು ನಡೆಸಿದ ದಾಳಿಯ ಮೂಲ ಕಾರಣವೆಂದರೆ ಪ್ಯಾಲೆಸ್ತೀನ್ ಪ್ರದೇಶಗಳ ಮೇಲೆ ಇಸ್ರೇಲ್ ನಿರಂತರ ನಿಯಂತ್ರಣ ಎಂದು ಹೇಳಿದ ನಂತರ ನಂತರ ಇಸ್ರೇಲಿ ಅಧಿಕಾರಿಗಳು ಮಂಗಳವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಟೀಕಿಸಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ “ಹಮಾಸ್‌ನ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ ಎಂದು ಗುರುತಿಸುವುದು ಸಹ ಮುಖ್ಯವಾಗಿದೆ” ಎಂದು ವಿಶ್ವಸಂಸ್ಥೆಯ ಇಸ್ರೇಲಿ ರಾಯಭಾರಿ ಗುಟೆರೆಸ್‌ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಕ್ಟೋಬರ್ 7 ರಂದು ಪ್ರಾರಂಭವಾಯಿತು, ಹಮಾಸ್‌ ದಾಳಿಯಲ್ಲಿ ಇಸ್ರೇಲಿನಲ್ಲಿ 1400ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ, ಬಹುತೇಕ ನಾಗರಿಕರಾಗಿದ್ದಾರೆ. ವಿಶ್ವಸಂಸ್ಥೆ ಪ್ರಕಾರ, ಗಾಜಾದಲ್ಲಿ 5,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಾವಿನಲ್ಲಿ 60% ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಎಂದು ಹೇಳಿದೆ. 15,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 212 ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ಇರಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement