ಚೀನಾದಿಂದ ನೌಕಾ ಯುದ್ಧ, ಹವಾಮಾನದಲ್ಲಿ ಭಾರೀ ಏರುಪೇರು, ಬ್ರಿಟನ್‌ ರಾಜನಿಂದ ಅಧಿಕಾರ ತ್ಯಾಗ… 2024ಕ್ಕೆ ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿ

ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರಾಡಾಮ್ ಅಕಾ ನಾಸ್ಟ್ರಾಡಾಮಸ್ ಸುಮಾರು 500 ವರ್ಷಗಳ ಹಿಂದೆ ತನ್ನ ಪುಸ್ತಕ ಲೆಸ್ ಪ್ರೊಫೆಟೀಸ್ ಪ್ರಕಟಿಸಿದ್ದಾನೆ. ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಸತ್ಯವೆಂದು ನಂಬುವ ಅನೇಕ ಜನರಿದ್ದಾರೆ. 1566 ರ ಇಸವಿಯ ಮುಂಚೆಯೇ, ನಾಸ್ಟ್ರಾಡಾಮಸ್ 6 ಸಾವಿರಕ್ಕೂ ಹೆಚ್ಚು ಭವಿಷ್ಯವಾಣಿಗಳನ್ನು ನುಡಿದಿದ್ದಾನೆ. ಅಲ್ಲದೆ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದರ ಕಾರಣ ಏನಾಗಿರಬಹುದು ಎಂಬುದರ ಬಗ್ಗೆಯೂ ಭವಿಷ್ಯವಾಣಿಯನ್ನು ನುಡಿದಿದ್ದಾನೆ.
ಜಾನ್ ಎಫ್ ಕೆನಡಿ ಅವರ ಹತ್ಯೆ, 9/11 ಭಯೋತ್ಪಾದಕ ದಾಳಿಗಳು ಮತ್ತು ಆತನ ಬರಹಗಳ ವ್ಯಾಖ್ಯಾನಗಳ ಪ್ರಕಾರ ಕೊರೊನಾ ವೈರಸ್ ಸಾಂಕ್ರಾಮಿಕದ ಪ್ರಾರಂಭದ ಬಗ್ಗೆಯೂ ಆತ ಭವಿಷ್ಯ ನುಡಿದಿದ್ದಾನೆ ಎಂದು ಹೇಳಲಾಗುತ್ತದೆ.
2023 ಕ್ಕೆ, ಆತ ವಿಶ್ವಾದ್ಯಂತ ಆರ್ಥಿಕ ಹಿಂಜರಿತದ ಬಗ್ಗೆ ಭವಿಷ್ಯ ನುಡಿದಿದ್ದ- “ಗೋಧಿಯ ಬುಶೆಲ್ ಎಷ್ಟು ಎತ್ತರಕ್ಕೆ ಏರುತ್ತದೆ / ಆ ಮನುಷ್ಯನು ತನ್ನ ಸಹವರ್ತಿ ಮನುಷ್ಯನನ್ನು ತಿನ್ನುತ್ತಾನೆ” ಎಂದು ಅವರು ತಮ್ಮ ಕ್ವಾಟ್ರೇನ್ ಒಂದರಲ್ಲಿ ಬರೆದಿದ್ದಾನೆ. ಕೋವಿಡ್-19 ರ ನಂತರದ ಆರ್ಥಿಕ ಮಂದಗತಿ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನಿಂದ ಜಗತ್ತು ತತ್ತರಿಸಿದ್ದರೂ, ಭವಿಷ್ಯವಾಣಿಯು ಸ್ವಲ್ಪ ಉತ್ಪ್ರೇಕ್ಷೆಯಾಗಿತ್ತು.ಆದರೆ ಅನೇಕ ವರದಿಗಳ ಪ್ರಕಾರ, ಇದುವರೆಗೆ ಅವರ ಭವಿಷ್ಯವಾಣಿಗಳಲ್ಲಿ 70% ಕ್ಕಿಂತ ಹೆಚ್ಚು ನಿಜವಾಗಿದೆ.

2024 ಕ್ಕೆ ನಾಸ್ಟ್ರಾಡಾಮಸ್‌ನ ಕೆಲವು ಭವಿಷ್ಯವಾಣಿಗಳು…
ಹವಾಮಾನ ದುರಂತ
2024 ರಲ್ಲಿ ಜಗತ್ತು ಹವಾಮಾನ ವೈಪರೀತ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಫ್ರೆಂಚ್ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. “ಒಣ ಭೂಮಿಯು ಹೆಚ್ಚು ಇನ್ನೂ ಹೆಚ್ಚು ಒಣಗಬಹುದು. ಅಲ್ಲದೆ ಜಗತ್ತಿನಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದ್ದಾರೆ. ಜೊತೆಗೆ 2024 ರಲ್ಲಿ ಭೂಮಿಯು ತಾಪಮಾನ ಹೆಚ್ಚಾಗಿ ಭೂಮಿ ಇನ್ನಷ್ಟು ಬಿಸಿಯಾಗಲಿದೆ ಎಂದು ನಾಸ್ಟ್ರಾಡಾಮಸ್ ʼಲೆಸ್ ಪ್ರೊಫೆಟೀಸ್ʼ ಪುಸ್ತಕದಲ್ಲಿ ಭವಿಷ್ಯವಾಣಿ ಬರೆದಿದ್ದಾನೆ.
ಸುನಾಮಿಗಳು ಕೃಷಿಯನ್ನು ನಾಶಮಾಡಬಹುದು ಮತ್ತು ರೋಗ ಮತ್ತು ಹಸಿವು ಮನುಷ್ಯನ ಜೀವನದ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡಬಹುದು. 2024 ರಲ್ಲಿ ನಾವು ಈಗಾಗಲೇ ನೋಡಿದ್ದಕ್ಕಿಂತ ಹೆಚ್ಚು ವಿನಾಶಕಾರಿ ಹವಾಮಾನ ಘಟನೆಗಳಿಗೆ ನಾವು ಒಳಗಾಗಬಹುದು ಎಂದು ಹೇಳಿದ್ದಾನೆ.

ಪ್ರಮುಖ ಸುದ್ದಿ :-   ಬಾಂಗ್ಲಾದೇಶ Vs ನ್ಯೂಜಿಲೆಂಡ್ ಟೆಸ್ಟ್ : ಬಾಲ್‌ ಸ್ಟಂಪಿಗೆ ಬಡಿಯದಂತೆ ತಡೆಯಲು ಚೆಂಡನ್ನು ಕೈಯಲ್ಲಿ ಹಿಡಿದು ಔಟಾದ ಬಾಂಗ್ಲಾದೇಶದ ಬ್ಯಾಟರ್ | ವೀಕ್ಷಿಸಿ

ಚೀನಾ ನೌಕಾ ಯುದ್ಧ…?!
ಚೀನಾ ನೌಕಾ ಯುದ್ಧ ಮಾಡಬಹುದು ಎಂದು ಹೇಳಿದ್ದಾನೆ. ಚೀನಾ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದೆ. ಹಿಂದೆ, ಚೀನಾ ತನ್ನ ವಿವೇಚನಾರಹಿತ ಶಕ್ತಿಯನ್ನು ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಬಾರಿ ಪ್ರದರ್ಶಿಸಿದೆ, ಅವುಗಳಲ್ಲಿ ಹೆಚ್ಚಿನವು ತನ್ನ ನೌಕಾ ಹಡಗುಗಳ ಮೂಲಕ ಪ್ರದರ್ಶಿಸಿದೆ.
ನಾಸ್ಟ್ರಾಡಾಮಸ್ ಕೂಡ ಶತಮಾನಗಳ ಹಿಂದೆ ಇದೇ ರೀತಿಯ ಭವಿಷ್ಯ ನುಡಿದಿದ್ದ. ಅವರ ಕ್ವಾಟ್ರೇನ್ ಒಂದರಲ್ಲಿ, ಆತ “ಯುದ್ಧ ಮತ್ತು ನೌಕಾ ಯುದ್ಧ”ದ ಬಗ್ಗೆ ಬರೆದಿದ್ದಾನೆ. “ಕೆಂಪು ಎದುರಾಳಿ ಭಯದಿಂದ ಮಸುಕಾದಂತಾಗುತ್ತದೆ. ಮಹಾಸಾಗರವನ್ನು ಭಯಭೀತವಾಗಿಸುತ್ತದೆ” ಎಂದು ಹೇಳಿದ್ದಾನೆ. ಇಲ್ಲಿರುವ ಮಹಾಸಾಗರವು ಹಿಂದೂ ಮಹಾಸಾಗರವನ್ನು ಸೂಚಿಸಬಹುದು ಮತ್ತು ‘ಕೆಂಪು ಎದುರಾಳಿ’ ಎಂಬ ಪದವು ಕಮ್ಯುನಿಸ್ಟ್ ಚೀನಾವನ್ನು ಉಲ್ಲೇಖಿಸುತ್ತದೆ ಎಂದು ಅರ್ಥೈಸಲಾಗಿದೆ.
ಇದು ಕ್ವಾಟ್ರೇನ್ ಸಮುದ್ರದಲ್ಲಿ ಮುಖಾಮುಖಿಯನ್ನು ಉಲ್ಲೇಖಿಸಬಹುದೇ? ಚೀನಾದ ನೌಕಾಪಡೆ ಮತ್ತು ನ್ಯಾಟೊ(NATO) ಸದಸ್ಯರ ನಡುವಿನ ಕೆಲವು ಆಕಸ್ಮಿಕ ಚಕಮಕಿಯು ರಾಜತಾಂತ್ರಿಕ ಸಂಘರ್ಷವನ್ನು ಪ್ರಚೋದಿಸುತ್ತದೆ ಎಂದು ಊಹಿಸಬಹುದಾಗಿದೆ.

“ನಾಸ್ಟ್ರಡಾಮಸ್: ದಿ ಕಂಪ್ಲೀಟ್ ಪ್ರೊಫೆಸೀಸ್ ಫಾರ್ ದಿ ಫ್ಯೂಚರ್” ಎಂಬ ಶೀರ್ಷಿಕೆಯ 2005 ರಲ್ಲಿ ಪ್ರಕಟವಾದ ಪುಸ್ತಕದಲ್ಲಿ, ಜ್ಯೋತಿಷಿಯು ಇಂಗ್ಲೆಂಡ್ ರಾಣಿಯ ಸಾವಿಗೆ ಬಹಳ ಮುಂಚೆಯೇ ಅವಳು ನಿಧನರಾಗುವ ವಯಸ್ಸಿನ ಬಗ್ಗೆ ಭವಿಷ್ಯ ನುಡಿದಿದ್ದ. ಕಿಂಗ್ ಚಾರ್ಲ್ಸ್ III ಸಿಂಹಾಸನವನ್ನು ತ್ಯಜಿಸುತ್ತಾನೆ, ರಾಜಕುಮಾರ ಹ್ಯಾರಿ ಅವನ ಸ್ಥಾನವನ್ನುವಹಿಸಿಕೊಳ್ಳುತ್ತಾನೆ ಎಂದು ಆತ ಭವಿಷ್ಯ ನುಡಿದಿದ್ದಾನೆ.
ಪ್ರಸ್ತುತ ಪೋಪ್, ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ 80 ರ ದಶಕದ ಮಧ್ಯದಲ್ಲಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯೊಂದರಲ್ಲಿ ವೃದ್ಧಾಪ್ಯದ ಕಾರಣ ಪೋಪ್ ಬದಲಿಗೆ ಹೊಸ ಕಿರಿಯ ಪೋಪ್ ಬರುತ್ತಾನೆ ಎಂದು ಹೇಳಿದ್ದಾನೆ.

ಪ್ರಮುಖ ಸುದ್ದಿ :-   ಬಾಂಗ್ಲಾದೇಶ Vs ನ್ಯೂಜಿಲೆಂಡ್ ಟೆಸ್ಟ್ : ಬಾಲ್‌ ಸ್ಟಂಪಿಗೆ ಬಡಿಯದಂತೆ ತಡೆಯಲು ಚೆಂಡನ್ನು ಕೈಯಲ್ಲಿ ಹಿಡಿದು ಔಟಾದ ಬಾಂಗ್ಲಾದೇಶದ ಬ್ಯಾಟರ್ | ವೀಕ್ಷಿಸಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement