ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಂ.1 : ಅನುಮೋದನೆ ರೇಟಿಂಗ್‌ ಎಷ್ಟು ಗೊತ್ತಾ…?

ಅಮೆರಿಕ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು 76% ರಷ್ಟು ಅನುಮೋದನೆ ರೇಟಿಂಗ್‌ ಪಡೆದ ನಂತರ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ಭಾರತದ ಪ್ರಧಾನ ಮಂತ್ರಿಯ ಅನುಮೋದನೆಯ ರೇಟಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿಶ್ವದ ಜನಪ್ರಿಯ ನಾಯಕನಿಗಿಂತ 10% ಕ್ಕಿಂತ ಹೆಚ್ಚು ಅಂಕಗಳಿಂದ ಮುಂದಿದ್ದಾರೆ.
ಪ್ರಧಾನಿ ಮೋದಿ ನಂತರ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (66%)ರಷ್ಟು ಅನುಮೋದನೆ ರೇಟಿಂಗ್‌ ಪಡೆದಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ (58%) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (49%) ಅನುಮೋದನೆ ರೇಟಿಂಗ್‌ ಪಡೆದು ನಂತರದ ಸ್ಥಾನದಲ್ಲಿ ಇದ್ದಾರೆ.
ಗಮನಾರ್ಹವಾಗಿ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು 40% ಅನುಮೋದನೆಯ ರೇಟಿಂಗ್‌ನೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ, ಇದು ಮಾರ್ಚ್‌ ನಂತರ ಅವರ ಅತ್ಯಧಿಕ ಅನುಮೋದನೆ ರೇಟಿಂಗ್ ಆಗಿದೆ.
ರಾಜಕೀಯ ಗುಪ್ತಚರ ಸಂಶೋಧನಾ ಸಂಸ್ಥೆಯು ಸಂಗ್ರಹಿಸಿದ ದತ್ತಾಂಶವು 22 ಜಾಗತಿಕ ನಾಯಕರ ಸಮೀಕ್ಷೆಯನ್ನು ಆಧರಿಸಿದೆ.

ಸೆಪ್ಟೆಂಬರ್ 6ರಿಂದ 12ರ ವರೆಗೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಅವರು ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಸಮ್ಮತಿ ರೇಟಿಂಗ್ ಅನ್ನು ಹೊಂದಿದ್ದಾರೆ. ಅವರ ಅಸಮ್ಮತಿ ರೇಟಿಂಗ್‌ ಕೇವಲ 18%.
ಅಸಮ್ಮತಿ ದರಗಳಿಗೆ ಸಂಬಂಧಿಸಿದಂತೆ, ಪಟ್ಟಿಯಲ್ಲಿರುವ ಟಾಪ್ 10 ನಾಯಕರಲ್ಲಿ, ಕೆನಡಾದ ಜಸ್ಟಿನ್ ಟ್ರುಡೊ ಅತ್ಯಧಿಕ ಅಸಮ್ಮತಿಯ ರೇಟಿಂಗ್ 58 ಪ್ರತಿಶತವನ್ನು ಹೊಂದಿದ್ದಾರೆ, ಇದು ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್‌ ಹತ್ಯೆ ಕುರಿತು ಭಾರತದ ವಿರುದ್ಧದ ಹೇಳಿಕೆಯ ನಂತರ ಕೆನಡಾದ ರಾಜತಾಂತ್ರಿಕ ಪತನದ ಸಂಭವನೀಯ ಫಲಿತಾಂಶ ಎಂದು ನಂಬಲಾಗಿದೆ.
‘ಮಾರ್ನಿಂಗ್ ಕನ್ಸಲ್ಟ್‌ನ ಸೆಪ್ಟೆಂಬರ್ ಸಮೀಕ್ಷೆಯಲ್ಲಿ ಶೇ. 76 ರ ಅನುಮೋದನೆಯೊಂದಿಗೆ ಪ್ರಧಾನಿ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ತಮ್ಮ ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹಿಂದಿನ ರೇಟಿಂಗ್‌ಗಳಲ್ಲೂ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಜೊತೆ ಸಂಘರ್ಷದಿಂದ ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ : ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚಿಸ್ತಾನ ಪ್ರಾಂತ್ಯ...!

ಏಪ್ರಿಲ್ ಸಮೀಕ್ಷೆಯಲ್ಲಿ ಶೇಕಡಾ 76 ರ ಅನುಮೋದನೆಯೊಂದಿಗೆ ಬಿಜೆಪಿ ನಾಯಕ ನರೇಂದ್ರ ಮೋದಿ ಅವರನ್ನು ‘ಅತ್ಯಂತ ಜನಪ್ರಿಯ’ ನಾಯಕ ಎಂದು ಕರೆಯಲಾಯಿತು, ಅವರ ಅಮೆರಿಕದ ಜೋ ಬೈಡನ್‌ ಮತ್ತು ಬ್ರಿಟನ್ ರಿಷಿ ಸುನಕ್ ಅವರನ್ನು ಬಹಳ ಅಂತರದಿಂದ ಹಿಂದಿಕ್ಕಿದ್ದಾರೆ.
ಫೆಬ್ರವರಿಯಲ್ಲಿಯೂ, ಪ್ರಧಾನಿ ಮೋದಿ ಅವರು ಶೇಕಡಾ 78 ರ ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕ ಎಂದು ಗುರುತಿಸಲ್ಪಟ್ಟರು.
ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ಅನುಮೋದನೆಯ ಶೇಕಡಾವಾರು ರೇಟಿಂಗ್‌ ಪಡೆದ ಜಾಗತಿಕ ನಾಯಕರು
1. ನರೇಂದ್ರ ಮೋದಿ (ಭಾರತ)- 76% ಅನುಮೋದನೆ
2. ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (ಮೆಕ್ಸಿಕೊ) 66% ರಷ್ಟು ಅನುಮೋದನೆ
3. ಅಲೈನ್ ಬರ್ಸೆಟ್ (ಸ್ವಿಟ್ಜರ್ಲೆಂಡ್) 58% ಅನುಮೋದನೆ
4. ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (ಬ್ರೆಜಿಲ್) 49% ಅನುಮೋದನೆ
5. ಆಂಥೋನಿ ಅಲ್ಬನೀಸ್ (ಆಸ್ಟ್ರೇಲಿಯಾ) 47% ಅನುಮೋದನೆ
6. ಜಾರ್ಜಿಯಾ ಮೆಲೋನಿ (ಇಟಲಿ) 41% ಅನುಮೋದನೆ
7. ಜೋ ಬೈಡನ್‌ (ಅಮೆರಿಕ) 40% % ಅನುಮೋದನೆ
8. ಅಲೆಕ್ಸಾಂಡರ್ ಡಿ ಕ್ರೂ (ಬೆಲ್ಜಿಯಂ) 37% ಅನುಮೋದನೆ
9. ಪೆಡ್ರೊ ಸ್ಯಾಂಚೆಜ್ (ಸ್ಪೇನ್) 37 % ಅನುಮೋದನೆ
೧೦. ಜಸ್ಟಿನ್ ಟ್ರುಡೊ (ಕೆನಡಾ) 32% ಅನುಮೋದನೆ

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಜೊತೆ ಸಂಘರ್ಷದಿಂದ ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ : ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚಿಸ್ತಾನ ಪ್ರಾಂತ್ಯ...!

ಇತ್ತೀಚೆಗೆ, ಪ್ರಧಾನಿ ಮೋದಿಯವರ ಜಾಗತಿಕ ಜನಪ್ರಿಯತೆಗೆ ತನ್ನ ಚುನಾವಣಾ ವಿಜಯಗಳನ್ನು ಹೆಚ್ಚಾಗಿ ಕಾರಣವೆಂದು ಹೇಳುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಅಂದರೆ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ಗೆದ್ದಿದೆ. ಬಿಜೆಪಿಯು ಈ ಸಾಧನೆಯನ್ನು ‘ಮೋದಿ ಮ್ಯಾಜಿಕ್’ ಎಂದು ಬಣ್ಣಿಸಿದೆ.

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement