ಲಕ್ಷಾಂತರ ದಕ್ಷಿಣ ಕೊರಿಯನ್ನರಿಗೆ ಅಯೋಧ್ಯೆ ʼಮಾತೃಭೂಮಿʼ : ಪ್ರತಿವರ್ಷ ಸಾವಿರಾರು ಜನ ಅಯೋಧ್ಯೆಗೆ ಭೇಟಿ ನೀಡ್ತಾರೆ, ಯಾಕೆಂದರೆ….

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜನವರಿ 22ರಂದು ಪ್ರಧಾನಿ ಮೋದಿ ಅವರು ರಾಮ ಮಂದಿರವನ್ನು ಉದ್ಘಾಟಿಸಲಿದ್ದು, ನಂತರದಲ್ಲಿ ಸಾರ್ವಜನಿಕರಿಗೆ ರಾಮ ದರ್ಶನಕ್ಕೆ ದೇಗುಲ ತೆರೆಯಲಿದೆ.
ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಅಯೋಧ್ಯೆ ಹಾಗೂ ವಿದೇಶಗಳ ನಡುವಿನ ಸಂಬಂಧದ ಬಗ್ಗೆ ಬಗ್ಗೆ ಅನೇಕ ಆಸಕ್ತಿದಾಯಕ ಕಥೆಗಳಿವೆ. ಅವುಗಳಲ್ಲಿ ದಕ್ಷಿಣ ಕೊರಿಯಾದ ಕಥನವೂ ಒಂದು. ಕೊರಿಯಾದ ಜನರು ಇಂದಿಗೂ ಅಯೋಧ್ಯೆಯನ್ನು ತಮ್ಮ ತಾಯಿಯ ಭೂಮಿ ಎಂದು ಪರಿಗಣಿಸುತ್ತಾರೆ ಮತ್ತು ಈ ನಂಬಿಕೆ 2 ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ನಂಬಿಕೆಯಿಂದಾಗಿ ದಕ್ಷಿಣ ಕೊರಿಯಾದ ಜನರು ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಅಯೋಧ್ಯೆಗೆ ಬರುತ್ತಾರೆ.
ವಿಶೇಷವಾಗಿ ದಕ್ಷಿಣ ಕೊರಿಯಾದ ಕಿಮ್ ರಾಜವಂಶಕ್ಕೆ ಸೇರಿದವರು ಹಾಗೂ ಆ ವಂಶದ ಮೇಲೆ ನಿಷ್ಠೆಯುಳ್ಳವರು ಪ್ರತಿವರ್ಷ ಅಯೋಧ್ಯೆಗೆ ಆಗಮಿಸುತ್ತಾರೆ. ಇವರೆಲ್ಲ ಪವಿತ್ರ ನಗರಿಯಾದ ಅಯೋಧ್ಯೆಯನ್ನು ತಮ್ಮ ರಾಣಿಯ ತವರು ಮನೆ ಎಂದು ಪರಿಗಣಿಸುತ್ತಾರೆ. ಈ ರಾಣಿಯ ಹೆಸರು ‘ರಾಣಿ ಹೋ’ ಮತ್ತು ಆಕೆ 2 ಸಾವಿರ ವರ್ಷಗಳ ಹಿಂದೆ ಕೊರಿಯಾದ ರಾಣಿಯಾಗಿದ್ದಳು ಎಂದು ನಂಬಲಾಗಿದೆ. ನಂಬಿಕೆಯ ಪ್ರಕಾರ, ಅಯೋಧ್ಯೆಯ ರಾಜಕುಮಾರಿಯು ದಕ್ಷಿಣ ಕೊರಿಯಾದ ರಾಜಕುಮಾರನನ್ನು ವಿವಾಹವಾಗಿದ್ದಳು.

ದಂತಕಥೆಯ ಪ್ರಕಾರ, ರಾಜಕುಮಾರಿ ʼಸುರಿರತ್ನʼ ಎಂದೂ ಕರೆಯಲ್ಪಡುವ ರಾಣಿ ಹರ್ ಹ್ವಾಂಗ್-ಓಕ್ ದಕ್ಷಿಣ ಕೊರಿಯಾಕ್ಕೆ ಹೋಗುವ ಮೊದಲು ಅಯೋಧ್ಯೆಯ ರಾಜಕುಮಾರಿಯಾಗಿದ್ದಳು. ಮತ್ತು ಕ್ರಿ.ಶ 48 ರಲ್ಲಿ ರಾಣಿ ಸೂರಿರತ್ನ ದೋಣಿಯಲ್ಲಿ ಕೊರಿಯಾವನ್ನು ತಲುಪಿದಳು ಮತ್ತು ಕರಕ್ ಕುಲದ ರಾಜ ಕಿಮ್ ಸುರೊ ಅವರನ್ನು ವಿವಾಹವಾದಳು. ನಂತರ ಗ್ಯುಮ್ಗ್ವಾನ್ ಗಯಾದ ಮೊದಲ ರಾಣಿಯಾಗಿದ್ದಳು ಮತ್ತು ಮದುವೆಯಾದಾಗ ಆಕೆಗೆ 16 ವರ್ಷ ವಯಸ್ಸಾಗಿತ್ತು ಎಂದು ನಂಬಲಾಗಿದೆ.
ಅಯೋಧ್ಯೆಯಲ್ಲಿ ರಾಣಿ ಸುರೀರತ್ನ ಸ್ಮಾರಕ ಇದೆ. 2001 ರಲ್ಲಿ ಅಯೋಧ್ಯೆಯಲ್ಲಿ ಸ್ಮಾರಕವನ್ನು ಉದ್ಘಾಟಿಸಲಾಯಿತು ಮತ್ತು ಭಾರತದಲ್ಲಿ ಉತ್ತರ ಕೊರಿಯಾದ ರಾಯಭಾರಿ ಸೇರಿದಂತೆ ನೂರಕ್ಕೂ ಹೆಚ್ಚು ಇತಿಹಾಸಕಾರರು ಮತ್ತು ಸರ್ಕಾರದ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಿಮ್ಹೇ ಕಿಮ್ ಕುಲ, ಹರ್ ಕುಲ ಮತ್ತು ಇಂಚಿಯಾನ್ ಯಿ ಕುಲವನ್ನು ಪ್ರತಿನಿಧಿಸುವ ೭೦ ಲಕ್ಷ ಕೊರಿಯನ್ನರು ತಮ್ಮ ಪೂರ್ವಜರನ್ನು ರಾಜಮನೆತನದ ಸಂಬಂಧಿಸಿದವರು ಎಂದು ಗುರುತಿಸುತ್ತಾರೆ.
ರಾಜಕುಮಾರಿಯು ‘ಆಯುತ’ಕ್ಕೆ ಸೇರಿದವಳು. ಅಯುತ ಎಂದರೆ ಕೊರಿಯನ್ ಭಾಷೆಯಲ್ಲಿ ಅಯೋಧ್ಯೆ ಎಂದು ಪರಿಗಣಿಸುತ್ತಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ರಾಣಿ ಹೋ’ ಆದ ಸುರೀರತ್ನ
ಭಾರತದ ಪುರಾತನ ನಗರವಾದ ಅಯೋಧ್ಯೆಯಲ್ಲಿ ʼಅಯುತಾಯನʼ ರಾಜಕುಮಾರಿ ಸೂರಿರತ್ನ ವಾಸಿಸುತ್ತಿದ್ದಳು. ಅವಳು ರಾಜ ಸೂರ್ಯವರ್ಮನ್ ಮತ್ತು ರಾಣಿ ಮಯೂರ್ಚತನ ಮಗಳು ಎಂದು ನಂಬಲಾಗಿದೆ. ಒಂದು ದಿನ, ರಾಜಕುಮಾರಿ ಸೂರಿರತ್ನಗೆ ಕನಸು ಬಿದ್ದು, ಅದರಲ್ಲಿ ಆಕೆ ದೂರದ ದೇಶದಿಂದ ಬೆಳಕಿನಂತೆ ಏನೋ ಬರುತ್ತಿರುವುದನ್ನು ನೋಡಿದಳು. ರಾಜಕುಮಾರಿಯು ಇದರ ಮೂಲವನ್ನು ಹುಡುಕಲು ಸಮುದ್ರಯಾನ ಹೋಗಲು ನಿರ್ಧರಿಸಿದಳು. ಅವಳು ತನ್ನ ಸಹಚರರೊಂದಿಗೆ ಹೊರಟು ಸಾಗರದಾದ್ಯಂತ ಪ್ರಯಾಣಿಸಿದಳು. ಸುದೀರ್ಘ ಪ್ರಯಾಣದ ನಂತರ, ಆಕೆ ದಕ್ಷಿಣ ಕೊರಿಯಾದಲ್ಲಿರುವ ಗಿಮ್ಹೇ ಕರಾವಳಿಯನ್ನು ತಲುಪಿದಳು. ಅಲ್ಲಿ ಅವಳು ಸ್ಥಳೀಯ ರಾಜ, ಕರಕ್ ಕುಲದ ರಾಜ ಕಿಮ್ ಸುರೋನನ್ನು ಭೇಟಿಯಾದಳು. ಇಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟರು. ಮದುವೆಯ ನಂತರ ರಾಜಕುಮಾರಿ ಸುರೀರತ್ನ ರಾಣಿ ಹಿಯೋ ಹ್ವಾಂಗ್-ಓಕ್ ಆದಳು.

ಕರಕ್ ಸಾಮ್ರಾಜ್ಯದ ಮೊದಲ ರಾಣಿ
ಆಕೆ ಕೊರಿಯಾದ ಕರಕ್ ಸಾಮ್ರಾಜ್ಯದ ಮೊದಲ ರಾಣಿಯಾದಳು ಎಂದು ಹೇಳಲಾಗುತ್ತದೆ. ರಾಣಿ ಹಿಯೋ ಹ್ವಾಂಗ್-ಓಕ್ ಮತ್ತು ರಾಜ ಕಿಮ್ ಸುರೋ ರಾಜವಂಶವನ್ನು ಸ್ಥಾಪಿಸಿದರು. ಮತ್ತು ಅವರ ವಂಶಸ್ಥರು ಕೊರಿಯಾದ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ.
ಆದಾಗ್ಯೂ, ಕಥೆಯನ್ನು ಐತಿಹಾಸಿಕ ಪುರಾವೆಗಳಿಲ್ಲದೆ ದಂತಕಥೆ ಎಂದು ಪರಿಗಣಿಸಲಾಗಿದೆ. ಆದರೆ ರಾಣಿ ಹಿಯೋ ಹ್ವಾಂಗ್-ಓಕ್ ಕಥೆಯನ್ನು ದಕ್ಷಿಣ ಕೊರಿಯಾದಲ್ಲಿ ನಂಬಲಾಗುತ್ತದೆ, ಆಕೆಯನ್ನು ಮಹಾನ್ ರಾಣಿ ಎಂದು ಪೂಜಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

ರಾಣಿಯ ನೆನಪಿಗೆ ಅಯೋಧ್ಯೆಯಲ್ಲಿ ಪಾರ್ಕ್
ಈ ನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತ-ದಕ್ಷಿಣ ಕೊರಿಯಾ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ದಕ್ಷಿಣ ಕೊರಿಯಾದ ರಾಜಕುಮಾರಿಯ ಹೆಸರಿನಲ್ಲಿ ಸ್ಮಾರಕ ಉದ್ಯಾನವನ ನಿರ್ಮಿಸಲಾಗಿದೆ. ಸರಯೂ ನದಿಯ ದಡದಲ್ಲಿ ನಿರ್ಮಿಸಲಾದ ಈ ಉದ್ಯಾನವನವು ಪ್ರವಾಸೋದ್ಯಮದ ದೃಷ್ಟಿಯಿಂದಲೂ ವಿಶೇಷವಾಗಿದೆ. ಉದ್ಯಾನದಲ್ಲಿ ಎರಡು ಮಂಟಪಗಳಿವೆ. ಎರಡೂ ರಾಜಮನೆತನಗಳಿಗೆ ಸಂಬಂಧಿಸಿವೆ. ಒಂದು ದಕ್ಷಿಣ ಕೊರಿಯಾದ ರಾಜಕುಮಾರನ ಕುಟುಂಬಕ್ಕೆ ಮತ್ತು ಇನ್ನೊಂದು ಅಯೋಧ್ಯೆಯ ರಾಣಿ ಮತ್ತು ರಾಜಕುಮಾರಿಯ ಕುಟುಂಬಕ್ಕೆ ಸೇರಿದೆ.
ರಾಣಿ ಹಿಯೋ ಹ್ವಾಂಗ್-ಓಕ್ ದಂತಕಥೆಯನ್ನು ಭಾರತ ಮತ್ತು ಕೊರಿಯಾ ನಡುವಿನ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಸಂಕೇತವಾಗಿ ನೋಡಲಾಗುತ್ತದೆ.

 

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement