ಕೌಟುಂಬಿಕ ಕಲಹ: ನಾಲ್ವರು ಸಹೋದರರಿಗೆ 20,000 ಕೋಟಿ ರೂ. ನೀಡುವಂತೆ ಭಾರತೀಯ ಉದ್ಯಮಿಗೆ ನ್ಯಾಯಾಲಯ ಆದೇಶ : ಏನಿದು ಪ್ರಕರಣ..?

ಅಮೆರಿಕದಲ್ಲಿ ಐವರು ಭಾರತೀಯ ಮೂಲದ ಸಹೋದರರನ್ನು ಒಳಗೊಂಡ ಕೌಟಿಂಬಿಕ ಉದ್ಯಮ ಪಾಲುದಾರಿಕೆಯ ವ್ಯವಹಾರದ ಸುದೀರ್ಘ ಕಾನೂನು ಹೋರಾಟದಲ್ಲಿ ನ್ಯಾಯಾಧೀಶರು ನಾಲ್ವರು ಸಹೋದರರಿಗೆ ಮತ್ತೋರ್ವ ಸಹೋದರ ಭಾರಿ ಬಹು-ಶತಕೋಟಿ ಡಾಲರ್ ಹಾನಿಯ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ.
21 ವರ್ಷಗಳಷ್ಟು ಹಳೆಯದಾದ ಆಸ್ತಿ ವಿವಾದದಲ್ಲಿ ಈ ತೀರ್ಪು ಬಂದಿದ್ದು, ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಉದ್ಯಮಿ ಹರೇಶ ಜೋಗನಿ ತನ್ನ ನಾಲ್ವರು ಸಹೋದರರಿಗೆ  20,000 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯನ್ನು ಪಾವತಿಸಬೇಕು ಮತ್ತು ಅಲ್ಲದೆ, ದಕ್ಷಿಣ ಕ್ಯಾಲಿಫೋರ್ನಿಯಾದ ಅವರ ಆಸ್ತಿಯ ಷೇರುಗಳನ್ನು ಮತ್ತಷ್ಟು ವಿಭಜನೆ ಮಾಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಇದು ಜೋಗನಿ ಕುಟುಂಬದ ಕಲಹವಾಗಿದ್ದು ಎರಡು ದಶಕಗಳ ಕಾಲ ನಡೆದಿದೆ. ಲಾಸ್ ಏಂಜಲೀಸ್ ಸುಪೀರಿಯರ್ ಕೋರ್ಟ್‌ನಲ್ಲಿ ತಮ್ಮ ಸಹೋದರ ಹರೇಶ ಜೋಗನಿ ವಿರುದ್ಧ ನಾಲ್ವರು ಸಹೋದರರು ಹೂಡಿದ ದಾವೆಯಲ್ಲಿ ಕೋರ್ಟ್‌ ಈ ಸಹೋದರರಿಗೆ USD 7 ಶತಕೋಟಿ ಪಾವತಿಸುವಂತೆ ತೀರ್ಪು ನೀಡಿದೆ.

ಹರೇಶ ಜೋಗನಿ ಸಹೋದರರಾದ ಶಶಿಕಾಂತ, ರಾಜೇಶ, ಚೇತನ್ ಮತ್ತು ಶೈಲೇಶ ಜೋಗನಿ ಅವರಿಗೆ 2.5 ಶತಕೋಟಿ USD (20,000 ಕೋಟಿ ರೂ.ಗಳಿಗೂ ಹೆಚ್ಚು) ನಷ್ಟವನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಹೆಚ್ಚುವರಿಯಾಗಿ, ಸುಮಾರು 17,000 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುವ ಅವರ ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ತಿಯಲ್ಲಿ ಷೇರುಗಳ ವಿಭಜನೆ ಮಾಡಬೇಕು ಎಂದು ತೀರ್ಪು ನೀಡಿದೆ.
ಜೋಗನಿ ವರ್ಸಸ್ ಜೋಗನಿ ಎಂದು ಹೆಸರಿಸಲಾದ ಈ ಕಾನೂನು ಹೋರಾಟವು ಚಾರ್ಲ್ಸ್ ಡಿಕನ್ಸ್‌ನ ಪ್ರಸಿದ್ಧ ಕಾದಂಬರಿ ಜಾರ್ಂಡೈಸ್ ವರ್ಸಸ್‌ ಜಾರ್ಂಡೈಸ್ ಪ್ರೊಬೇಟ್ ಪ್ರಕರಣಕ್ಕೆ ಹೋಲಿಕೆಗಳನ್ನು ಮಾಡಲಾಗಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಹರೇಶ ತನ್ನ ಸಹೋದರರ ಜೊತೆಗಿನ ದೀರ್ಘಕಾಲದ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಸುತ್ತ ವಿವಾದವು ಸುತ್ತುತ್ತದೆ. ನಂತರ ಇದು ಕೌಟುಂಬಿಕ ಕಾನೂನು ಹೋರಾಟಕ್ಕೆ ಕಾರಣವಾಯಿತು. ಈ ಜೋಗನಿ ವರ್ಸಸ್‌ ಜೋಗನಿ ಪ್ರಕರಣವು 18 ಮೇಲ್ಮನವಿಗಳನ್ನು ಒಳಗೊಂಡಿತ್ತು.
ಜಾಗತಿಕ ವಜ್ರ ವ್ಯಾಪಾರದಲ್ಲಿ ಜೋಗನಿ ಕುಟುಂಬದ ಪರಂಪರೆಯಲ್ಲಿ ಸಂಘರ್ಷದ ಬೇರುಗಳನ್ನು ಗುರುತಿಸಬಹುದು. ಶಶಿಕಾಂತ ಜೋಗನಿ ಅವರು ಕ್ಯಾಲಿಫೋರ್ನಿಯಾದಲ್ಲಿ 1969 ರಲ್ಲಿ ಒಂಟಿಯಾಗಿ ರತ್ನದ ವ್ಯಾಪಾರವನ್ನು ಪ್ರಾರಂಭಿಸಿದರು, ಇದು ನಂತರ ಅವರ ಸಹೋದರರ ಜೊತೆ ಸೇರಿ ಸಹಯೋಗದ ಪ್ರಯತ್ನವಾಗಿ ಅವರ ರಿಯಲ್ ಎಸ್ಟೇಟ್ ವಿಸ್ತರಣೆಯ ರೂಪದಲ್ಲಿ ಅವರ ವ್ಯವಹಾರ ವಿಕಸನಗೊಂಡಿತು. ಅವರ ಆರಂಭಿಕ ಯಶಸ್ಸಿನ ಹೊರತಾಗಿಯೂ, ನಿರ್ವಹಣೆ ಮತ್ತು ಮಾಲೀಕತ್ವದ ಬಗ್ಗೆ ವಿವಾದಗಳು ಉಂಟಾದವು. ಇದು ಅಂತಿಮವಾಗಿ ಸುದೀರ್ಘ ಕಾನೂನು ಹೋರಾಟದ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾಯಿತು.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

  ಹೇಗೆ ಪ್ರಾರಂಭವಾಯಿತು?
ಗುಜರಾತ್ ಮೂಲದ ಜೋಗನಿ ಸಹೋದರರು ಜಾಗತಿಕ ವಜ್ರದ ವ್ಯಾಪಾರ ಉದ್ಯಮದಲ್ಲಿ ಗಮನಾರ್ಹ ಪರಂಪರೆ ಸ್ಥಾಪಿಸಿದ್ದಾರೆ, ಯುರೋಪ್, ಆಫ್ರಿಕಾ, ಉತ್ತರ ಅಮೆರಿಕ ಮತ್ತು ಮಧ್ಯಪ್ರಾಚ್ಯಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ. ಶಶಿಕಾಂತ ಜೋಗನಿ ಅವರು 1969 ರಲ್ಲಿ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಳ್ಳುವ ಮೂಲಕ ಮಹತ್ವದ ಹೆಜ್ಜೆ ಇಟ್ಟರು, ಅಲ್ಲಿ ಅವರು ರತ್ನದ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟರು, ತಮ್ಮ ಸಂಸ್ಥೆಗೆ ಅಡಿಪಾಯ ಹಾಕಿದರು. ಆದಾಗ್ಯೂ, 2003 ರಲ್ಲಿ ಶಶಿಕಾಂತ ಅವರು ಕೌಟುಂಬಿಕ ವ್ಯವಹಾರದಲ್ಲಿ ನಡೆದ ಘಟನೆಗಳನ್ನು ವಿವರಿಸಿ ದೂರು ಸಲ್ಲಿಸಿದಾಗ ಕಾನೂನು ವಿವಾದ ಸೃಷ್ಟಿಯಾಯಿತು.
1990ರ ದಶಕದ ಆರಂಭದಲ್ಲಿ, ಆರ್ಥಿಕ ಹಿಂಜರಿತದ ಕಾರಣದಿಂದ ಆರ್ಥಿಕ ಹಿನ್ನಡೆ ಎದುರಿಸಿದರು, ಶಶಿಕಾಂತ ಅವರು, ಹರೇಶ ಜೋಗನಿ ಸೇರಿದಂತೆ ಸಂಸ್ಥೆಯ ಪಾಲುದಾರರಾಗಿ ತನ್ನ ನಾಲ್ವರು ಸಹೋದರರನ್ನು ಮಂಡಳಿಗೆ ಸೇರ್ಪಡೆ ಮಾಡಿದರು. ದುರದೃಷ್ಟವಶಾತ್, ಹರೇಶ್ ಅವರು ಶಶಿಕಾಂತ ಅವರನ್ನು ವ್ಯವಹಾರದ ನಿರ್ವಹಣೆಯಿಂದಲೇ ಹೊರಹಾಕಿದರು ಮತ್ತು ಅವರಿಗೆ ಹಣ ಸಂದಾಯವಾಗುವುದನ್ನು ತಡೆಹಿಡಿದಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು.

ಬ್ಲೂಮ್‌ಬರ್ಗ್‌ನಲ್ಲಿನ ವರದಿಯ ಪ್ರಕಾರ, ವಿವಾದದ ತಿರುಳು ಸುಮಾರು 17,000 ಅಪಾರ್ಟ್ಮೆಂಟ್ ಘಟಕಗಳನ್ನು ಒಳಗೊಂಡಿರುವ ರಿಯಲ್ ಎಸ್ಟೇಟ್ ಮಾಲೀಕತ್ವ ಮತ್ತು ನಿರ್ವಹಣೆಯ ಸುತ್ತ ಸುತ್ತುತ್ತದೆ. ಲಿಖಿತ ಒಪ್ಪಂದ ಇಲ್ಲದ ಕಾರಣ ತನ್ನ ಸಹೋದರರ ಪಾಲುದಾರಿಕೆಯ ಹಕ್ಕುಗಳನ್ನು ಅಮಾನ್ಯ ಮಾಡಬೇಕು ಎಂದು ಹರೇಶ ಜೋಗನಿ ಪ್ರತಿಪಾದಿಸಿದರು.
ಆದಾಗ್ಯೂ, ಲಾಸ್ ಏಂಜಲೀಸ್ ನ್ಯಾಯಾಲಯವು ಶಶಿಕಾಂತ ಅವರ ಪರವಾಗಿ ತೀರ್ಪು ನೀಡಿತು ಹಾಗೂ ಅದು ವಜ್ರ ವ್ಯಾಪಾರ ಮತ್ತು ಗುಜರಾತಿ ಸಮುದಾಯದೊಳಗಿನ ಮೌಖಿಕ ಒಪ್ಪಂದಗಳ ಸಿಂಧುತ್ವವನ್ನು ಒತ್ತಿಹೇಳಿತು.
ಜನಾಂಗೀಯ ಪಕ್ಷಪಾತದ ಆರೋಪಗಳನ್ನು ಒಳಗೊಂಡಂತೆ ಅನೇಕ ವರ್ಷಗಳ ಕಾನೂನು ಹೋರಾಟಗಳ ಹೊರತಾಗಿಯೂ, ತೀರ್ಪುಗಾರರು ಅಂತಿಮವಾಗಿ 77 ವರ್ಷ ವಯಸ್ಸಿನ ಶಶಿಕಾಂತ ಜೋಗನಿ ಅವರಿಗೆ ರಿಯಲ್ ಎಸ್ಟೇಟ್ ಪಾಲುದಾರಿಕೆಯಲ್ಲಿ 50% ಪಾಲನ್ನು ನೀಡಿದರು ಮತ್ತು USD 1.8 ಶತಕೋಟಿ ಮೊತ್ತದ ಆರಂಭಿಕ ಹಾನಿಯನ್ನು ಪಾವತಿಸುವಂತೆ ಸೂಚಿಸಿದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement