ಜನಪ್ರಿಯ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್ (Facebook And Instagram) ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಮಂಗಳವಾರ (ಮಾರ್ಚ್ 05) ರಾತ್ರಿ 9ರ ಆಸುಪಾಸು ಏಕಾಏಕಿ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಲಾಗೌಟ್ ಆಗಿವೆ. ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ.
ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಂಗಳವಾರ ಜಗತ್ತಿನಾದ್ಯಂತ ನೂರಾರು ಸಾವಿರ ಬಳಕೆದಾರರಿಗೆ ಸ್ಥಗಿತಗೊಂಡಿದೆ. ವೆಬ್‌ಸೈಟ್ ಪ್ರಕಾರ ಫೇಸ್‌ಬುಕ್ ನಲ್ಲಿ 3,00,000 ಕ್ಕೂ ಹೆಚ್ಚು ಸ್ಥಗಿತದ ವರದಿಗಳು ಬಂದಿವೆ ಮತ್ತು Instagram ಗಾಗಿ ಸುಮಾರು 40,000 ವರದಿಗಳು ಬಂದಿವೆ.
ಮೊಬೈಲ್ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್ ಆಗಿದ್ದು, ಮತ್ತೆ ಲಾಗ್‌ಇನ್ ಆಗುತ್ತಿಲ್ಲ. ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ? ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ.
ಫೇಸ್‌ಬುಕ್‌ಗೆ ಏನಾಗಿದೆ? ಯಾಕೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಏಕಾಏಕಿ ಲಾಗ್‌ಔಟ್ ಆಗಿವೆ? ಯಾಕೆ ಮತ್ತೆ ಲಾಗ್‌ಇನ್ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಎಕ್ಸ್‌ನಲ್ಲಿ ಜನ ಕೇಳುತ್ತಿದ್ದಾರೆ. ನಮ್ಮ ಸೇವೆಗಳನ್ನು ಪ್ರವೇಶಿಸಲು ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಇದೀಗ ಈ ಕೆಲಸ ಮಾಡುತ್ತಿದ್ದೇವೆ” ಎಂದು ಮೆಟಾ ವಕ್ತಾರ ಆಂಡಿ ಸ್ಟೋನ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆಟಾದ ಸ್ಥಿತಿಯ ಡ್ಯಾಶ್‌ಬೋರ್ಡ್ ವಾಟ್ಸಾಪ್ (WhatsApp) ಬಿಸಿನೆಸ್ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಸಹ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ತೋರಿಸಿದೆ. ಡೌನ್‌ಡೆಕ್ಟರ್‌ನಲ್ಲಿ ವಾಟ್ಸಾಪ್ (WhatsApp)ಗಾಗಿ ಸುಮಾರು 200 ಸ್ಥಗಿತಗಳ ವರದಿಗಳಿವೆ,
ಈ ಸ್ಥಗಿತವು X ನಲ್ಲಿ ಟಾಪ್ ಟ್ರೆಂಡಿಂಗ್ ವಿಷಯಗಳಲ್ಲಿ ಒಂದಾಗಿದೆ. ಹಲವಾರು ಬಳಕೆದಾರರು ಮೆಟಾ-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಇದ್ದಕ್ಕಿದ್ದಂತೆ ಲಾಗ್ ಔಟ್ ಆಗಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ