ವೀಡಿಯೊ….| 15 ಅಡಿ ಉದ್ದದ ಬೃಹತ್‌ ಮೊಸಳೆ ದಾಳಿ ; ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾದ ಮೊಸಳೆ ಹ್ಯಾಂಡ್ಲರ್‌

15 ಅಡಿ ಮೊಸಳೆಯೊಂದು ಮೃಗಾಲಯದ ಮೊಸಳೆ ಹ್ಯಾಂಡ್ಲರ್‌ ಮೇಲೆ ಮೇಲೆ ದಾಳಿ ಮಾಡಿದ್ದು, ಆತ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಘಟನೆ ದಕ್ಷಿಣ ಆಫ್ರಿಕಾದ ಮೃಗಾಲಯದಲ್ಲಿ ನಡೆದಿದೆ.
ಅನುಭವಿ ಸರೀಸೃಪ ತಜ್ಞರು ಕ್ವಾ-ಜುಲು ನಟಾಲ್‌ನ ಬಲ್ಲಿಟೊದಲ್ಲಿರುವ ಮೊಸಳೆ ಕ್ರೀಕ್ ಥೀಮ್ ಪಾರ್ಕ್‌ (Crocodile Creek theme park)ನಲ್ಲಿ ಸಂದರ್ಶಕರಿಗೆ ಮೊಸಳೆ ಬಗ್ಗೆ ಪ್ರದರ್ಶನ ನೀಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಮೃಗಾಲಯದ ಸಿಬ್ಬಂದಿ ಕೋಲಿನಿಂದ ಮೊಸಳೆಗೆ ಚುಚ್ಚುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಆತನ ಮೇಲೆ ದಾಳಿ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಕಂಡುಬಂದಿದೆ.

ಮೊಸಳೆಯು ತಾನು ಚುಚ್ಚಿದ ಕೋಲನ್ನು ಕಚ್ಚಬೇಕೆಂದು ಮೃಗಾಲಯದ ಮೊಸಳೆ ಹ್ಯಾಂಡ್ಲರ್‌ ಬಯಸಿದರೆ ಮೊಸಳೆಯು ಅದರ ಬದಲಾಗಿ ತನ್ನ ದವಡೆಗಳಿಂದ ಹ್ಯಾಂಡ್ಲರ್‌ ವ್ಯಕ್ತಿಯ ಸೊಂಟವನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ.
ಅದು ನೈಲ್ ನದಿಯ ಮೊಸಳೆಯಾಗಿದ್ದು, ಅದು ವಿಶ್ವದ ಅತ್ಯಂತ ಶಕ್ತಿಶಾಲಿ ಕಚ್ಚುವಿಕೆಯ ಬಲ ಹೊಂದಿರುವ ಮೊಸಳೆ ಜಾತಿಗಳಲ್ಲಿ ದೊಡ್ಡದು ಎಂದು ಹೇಳಲಾಗಿದೆ.
ಮೃಗಾಲಯದ ಆವರಣದಲ್ಲಿ ಎರಡು ಮೊಸಳೆಗಳು ಇದ್ದವು ಮತ್ತು ಎರಡನೆಯದು, ಸ್ವಲ್ಪ ಚಿಕ್ಕದಾದ ಮೊಸಳೆಯಾಗಿದೆ.
ಮೊಸಳೆಯು ಅಂತಿಮವಾಗಿ ಕೆಲಗಾರನಿಗೆ ಕಚ್ಚಿದ ತನ್ನ ಹಿಡಿತವನ್ನು ಸಡಿಲಿಸುವ ಮೊದಲು ಪ್ರವಾಸಿಗರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು, ಇದರಿಂದ ಗಾಬರಿಯಾದ ಮೊಸಳೆ ತನ್ನ ಹಿಡಿತವನ್ನು ಸಡಿಲಿಸಿತು.

ರಿಯಾಕ್ಷನ್ ಯೂನಿಟ್ ಸೌತ್ ಆಫ್ರಿಕಾ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅದು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ.
ಸರೀಸೃಪ ಮೃಗಾಲಯದ ಸಂದರ್ಶಕರಿಂದ ಸುಮಾರು 14:48 (ಸ್ಥಳೀಯ ಸಮಯ)ಕ್ಕೆ ಮೃಗಾಲಯವು ಸಹಾಯಕ್ಕಾಗಿ ಕರೆಯನ್ನು ಸ್ವೀಕರಿಸಿದೆ ಎಂದು ಅದು ಫೇಸ್‌ಬುಕ್‌ನಲ್ಲಿ ತಿಳಿಸಿದೆ. “ಸ್ಪಂದನೆ ಅಧಿಕಾರಿಗಳನ್ನು ತಕ್ಷಣವೇ ಕಳುಹಿಸಲಾಯಿತು ಮತ್ತು ಗಾಯಗೊಂಡ ವ್ಯಕ್ತಿಯನ್ನು ಈಗಾಗಲೇ ಆಸ್ಪತ್ರೆಗೆ ಕಳುಹಿಸಲಾಯಿತು. ಆ ಸಮಯದಲ್ಲಿ ಪಾರ್ಕ್‌ನಲ್ಲಿದ್ದ ಪ್ರವಾಸಿಗರೊಬ್ಬರು, ನಾವು ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾಗ ಮೊಸಳೆಯು ಹ್ಯಾಂಡ್ಲರ್ ಮೇಲೆ ದಾಳಿ ಮಾಡಿತು. ರಿಯಾಕ್ಷನ್ ಯುನಿಟ್ ಗೆ ತಿಳಿಸಲಾಯಿತು. ವ್ಯಕ್ತಿ ತನ್ನನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಮತ್ತು ಆವರಣದಿಂದ ಓಡಿಹೋದ ಎಂದು ಹೇಳಿದ್ದಾರೆ ಎಂದು ಅದು ಹೇಳಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement