ವೀಡಿಯೊ….| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ…!

ರೂಢಿಯಿಂದ ವಿಭಿನ್ನವಾದ ನಡೆಯಲ್ಲಿ ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ಮಗಳು ವಿಚ್ಛೇದನ ಪಡೆದ ನಂತರದಲ್ಲಿ ತಮ್ಮ ಮನೆಗೆ ವಾಪಸ್‌ ಬರುವಾಗ ಆಕೆಯನ್ನು ಸಂಭ್ರಮದಿಂದಲೇ ಬರಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಮಗಳನ್ನು ಮದುವೆ ಮಾಡಿಕೊಟ್ಟ ಮನೆಗೆ ಕಳುಹಿಸುವಾಗ ಹೇಗೆ ಬ್ಯಾಂಡ್‌ -ವಾದ್ಯಗಳ ಮೂಲಕ ಸಂಭ್ರಮದಿಂದ ಕಳುಹಿಸಿ ಕೊಡುತ್ತಾರೆಯೋ ವಿಚ್ಛೇದನ ಪಡೆದ ಮಗಳು ಮನೆಗೆ ಬರುವಾಗ ತಂದೆ ಅದೇ ರೀತಿ ಬ್ಯಾಂಡ್‌ -ವಾದ್ಯಗಳ ಮೂಲಕ ಸಂತೋಷದಿಂದಲೇ ಸ್ವಾಗತಿಸಿದ್ದಾರೆ.
ಬಿಎಸ್‌ಎನ್‌ಎಲ್‌ (BSNL) ಉದ್ಯೋಗಿಯಾಗಿರುವ ಅನಿಲಕುಮಾರ ಎಂಬವರು, ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಂಜಿನಿಯರ್ ಆಗಿರುವ ತಮ್ಮ ಮಗಳು ಉರ್ವಿ (36) ಅವರನ್ನು ಬ್ಯಾಂಡ್ ಮತ್ತು ಸಂಗೀತ ವಾದ್ಯಗಳ ಮೂಲಕ ಸ್ವಾಗತಿಸಿದ್ದಾರೆ. ಇದು ಹೊಸ ಆರಂಭ ಮತ್ತು ಹೀಗಾಗಿ ಹೆಮ್ಮೆಯ ಮನೆಗೆ ಮರಳುವಾಗ ವಾದ್ಯಗಳ ಸಮೇತ ಮಗಳನ್ನು ಸ್ವಾಗತಿಸಿರುವುದಾಗಿ ಹೇಳಿದ್ದಾರೆ. ಮಗಳ ಮದುವೆಯ ನಂತರ ನಾವು ಅವಳನ್ನು ಹೊಸ ಮನೆಗೆ ಕಳುಹಿಸಿದಂತೆಯೇ ಈಗ ಅವಳನ್ನು ಮರಳಿ ಕರೆತಂದಿದ್ದೇವೆ. ಅವಳು ಹೊಸದಾಗಿ ಬದುಕು ಪ್ರಾರಂಭಿಸಬೇಕೆಂದು ನಾವು ಬಯಸುತ್ತೇವೆ” ಎಂದು ಅನಿಲಕುಮಾರ ಹೇಳಿದ್ದಾರೆ.

ಉರ್ವಿ 2016 ರಲ್ಲಿ ಕಂಪ್ಯೂಟರ್ ಎಂಜಿನಿಯರ್ ಅವರನ್ನು ಮದುವೆಯಾಗಿದ್ದರು ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದರು, ಅವರಿಗೆ ಮಗಳು ಇದ್ದಾಳೆ. ಆದರೆ, ನಂತರದಲ್ಲಿ ಉರ್ವಿಯ ಅತ್ತೆ ಹಾಗೂ ಕುಟುಂಬದ ಇತರರು ವರದಕ್ಷಿಣೆಗಾಗಿ ಆಕೆಯನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬ ಆರೋಪಗಳು ಕೇಳಿಬಂದವು. ಇದು ನಂತರ ಕಳೆದ ಫೆಬ್ರವರಿ 28 ರಂದು ನ್ಯಾಯಾಲಯದಿಂದ ವಿಚ್ಛೇದನ ಕೋರಲು ಕಾರಣವಾಯಿತು. “ನಾನು ಎಂಟು ವರ್ಷಗಳ ಚಿತ್ರಹಿಂಸೆ, ಅಪಹಾಸ್ಯ ಮತ್ತು ಆಘಾತಗಳನ್ನು ಅನುಭವಿಸಿದ ನಂತರವೂ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಕೊನೆಯಲ್ಲಿ, ಅದು ಮುರಿದುಹೋಯಿತು ಎಂದು ಉರ್ವಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   "ನೀವು ಮತವನ್ನೂ ಹಾಕಿಲ್ಲ...": ತಮ್ಮದೇ ಪಕ್ಷದ ಸಂಸದನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ..

ತಮ್ಮ ಮಗಳ ದುರವಸ್ಥೆ ನಂತರ ಸಾಮಾಜಿಕ ಗ್ರಹಿಕೆಗಳನ್ನು ಬದಲಾಯಿಸುವ ಉದ್ದೇಶದಿಂದ ಅನಿಲಕುಮಾರ ಅವರು, ಸಂಗೀತ ವಾದ್ಯಗಳು ಹಾಗೂ ಡೋಲಗಳ ಸಮೇತ ಮಗಳನ್ನು ಪುನಃ ತಮ್ಮ ಮನೆಗೆ ಸ್ವಾಗತಿಸಿದ್ದಾರೆ. “ಅವಳನ್ನು ಮರಳಿ ಮನೆಗೆ ಕರೆತರುವಾಗ, ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡಲು ಮತ್ತು ಜನರು ತಮ್ಮ ಹೆಣ್ಣುಮಕ್ಕಳನ್ನು ಮದುವೆಯಾದ ನಂತರ ನಿರ್ಲಕ್ಷಿಸುವ ಬದಲು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂಬ ಕಾರಣಕ್ಕೆ ನಾನು ‘ಬ್ಯಾಂಡ್ ಬಾಜಾ’ ವ್ಯವಸ್ಥೆ ಮಾಡಿದೆ” ಎಂದು ಅವರು ಹೇಳಿದ್ದಾರೆ.
ಹೃದಯಸ್ಪರ್ಶಿ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಢೋಲ್‌ಗಳನ್ನು ಬಾರಿಸುವ ಮೊದಲು ಮೊದಲು ಉರ್ವಿ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸುವುದನ್ನು ವೀಡಿಯೊದಲ್ಲಿ ನೋಡಬಹುದು.
ಅಕ್ಕಪಕ್ಕದವರು ಆರಂಭದಲ್ಲಿ ಗೊಂದಲಕ್ಕೊಳಗಾದರು, ಉರ್ವಿ ಮತ್ತೆ ಮದುವೆಯಾಗುತ್ತಿದ್ದಾರೆಂದು ಭಾವಿಸಿದ್ದರು, ಆದರೆ ನಂತರ ವಾದ್ಯಗಳನ್ನು ಬಾರಿಸಿದ್ದರ ಹಿಂದಿನ ನಿಜವಾದ ಉದ್ದೇಶವನ್ನು ಅರಿತುಕೊಂಡರು. ಉರ್ವಿ ಅವರು, ತನ್ನ ಪೋಷಕರ ಈ ಕ್ರಮಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತು ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ‘100 ವರ್ಷದ ನನ್ನ ತಾಯಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು...ನನ್ನ ಬಳಿ 250 ಜೊತೆ ಬಟ್ಟೆಗಳಿವೆ ಎಂಬುದೇ ನನ್ನ ಮೇಲಿನ ದೊಡ್ಡ ಆರೋಪ ʼ : ಪ್ರಧಾನಿ ಮೋದಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement