T20 ವಿಶ್ವಕಪ್ 2024 : ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಭಾರತದ ಸಹಾಯ ಬೇಕೇ ಬೇಕು…ಅದು ಹೇಗೆ..?

2024 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಮುಂದಿನ ದಾರಿ ದುರ್ಗಮವಾಗಿ ಕಾಣುತ್ತಿದೆ. ಕಾರನ ಬಾಬರ್ ಅಜಮ್ ನೇತೃತ್ವದ ಪಅಕಿಸ್ತಾನದ ತಂಡವು ತಮ್ಮ ಗ್ರೂಪ್ ಎ ಅಭಿಯಾನದಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ನಂತರ ಮುಂದಿನ ಹಂತಕ್ಕೆ ಹೋಗುವುದು ಕಷ್ಟಸಾಧ್ಯವಾಗಿ ಪಂದ್ಯಾವಳಿಯಿಂದ ಹೊರಬೀಳುವ ಅಂಚಿನಲ್ಲಿದೆ. ಸಹ-ಆತಿಥೇಯ ತಂಡವಾದ ಅಮೆರಿಕದ ವಿರುದ್ಧ ಆಘಾತಕಾರಿ ಸೋಲಿನ ನಂತರ, ನ್ಯೂಯಾರ್ಕ್‌ನಲ್ಲಿ ಭಾರತದ ವಿರುದ್ಧ ನಡೆದ ಕಡಿಮೆ ಮೊತ್ತದ ಥ್ರಿಲ್ಲರ್‌ ಪಂದ್ಯದಲ್ಲಿ ಪಾಕಿಸ್ತಾನ ಮತ್ತೆ ಸೋಲುಣ್ಣಬೇಕಾಯಿತು. ಹೀಗಾಗಿ ಅದು ಈಗ ಗ್ರುಪ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
2024 ರ ಟಿ 20 ವಿಶ್ವಕಪ್‌ ಎ ಗುಂಪಿನಲ್ಲಿ ಪಾಕಿಸ್ತಾನವು ಪ್ರಸ್ತುತ ಭಾರತ, ಅಮೆರಿಕ ಮತ್ತು ಕೆನಡಾದ ನಂತರ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕೆ ಎರಡು ಪಂದ್ಯಗಳು ಉಳಿದಿವೆ – ಕೆನಡಾ ವಿರುದ್ಧ ಒಂದು ಮತ್ತು ಐರ್ಲೆಂಡ್ ವಿರುದ್ಧ ಮತ್ತೊಂದು ಪಂದ್ಯ ಬಾಕಿಯಿದೆ, ಸ್ಪರ್ಧೆಯಲ್ಲಿ ಜೀವಂತವಾಗಿರಲು ಅವರು ಈ ಎರಡೂ ಪಂದ್ಯಗಳನ್ನೂ ಭಾರೀ ಅಂತರದಲ್ಲಿ ಗೆಲ್ಲಲೇಬೇಕು. ತಮ್ಮ ಯಾವುದೇ ಪಂದ್ಯಗಳು ಮಳೆಯಿಂದ ಸ್ಥಗಿತಗೊಂಡರೂ ಅದು ಪಂದ್ಯಾವಳಿಯಿಂದ ನಿರ್ಗಮಿಸಬೇಕಾಗುತ್ತದೆ.
ದುರದೃಷ್ಟವಶಾತ್ ಪಾಕಿಸ್ತಾನಕ್ಕೆ, ಪಂದ್ಯಾವಳಿಯ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ತನ್ನ ಕಟ್ಟಾ ಎದುರಾಳಿ ಭಾರತವನ್ನು ಅವಲಂಬಿಸಬೇಕಾಗಿದೆ. ಹೇಗೆ ಎಂಬುದು ಇಲ್ಲಿದೆ.

ಪಾಕಿಸ್ತಾನದ ಅರ್ಹತೆಯ ಭೀತಿ…
2024 ರ ಟಿ20 ವಿಶ್ವಕಪ್‌ ಪ್ರತಿ ಗುಂಪಿನಿಂದ 2 ತಂಡಗಳು T20 ವಿಶ್ವಕಪ್‌ನ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಪಾಕಿಸ್ತಾನವು 2 ಪಂದ್ಯಗಳಿಂದ 0 ಅಂಕಗಳನ್ನು ಹೊಂದಿದೆ. ಭಾರತ ಮತ್ತು ಅಮೆರಿಕ ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿದೆ. ಪಾಕಿಸ್ತಾನವು ಈಗ ಈ ಎರಡು ತಂಡಗಳೊಂದಿಗೆ ಸೂಪರ್ 8 ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಿದೆ.
ಪಾಕಿಸ್ತಾನದ ಉಳಿದ ಪಂದ್ಯಗಳು
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಕೆನಡಾ ವಿರುದ್ಧ ಹಾಗೂ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ಪಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಬಾಕಿಯಿದೆ.
ಪಾಕಿಸ್ತಾನ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಕೇವಲ ಗೆದ್ದರಷ್ಟೇ ಸಾಕಾಗುವುದಿಲ್ಲ, ಯಾಕೆಂದರೆ ಪಾಕಿಸ್ತಾನ ತಂಡವು ಸದ್ಯಕ್ಕೆ -0.15 NRR ಅನ್ನು ಹೊಂದಿದೆ. ಗುಂಪಿನಲ್ಲಿ ಅಗ್ರಸ್ಥಾನ, ಎರಡನೇ ಸ್ಥಾನದಲ್ಲಿರುವ ಭಾರತ ಮತ್ತು ಅಮೆರಿಕ 2 ಪಂದ್ಯಗಳ ನಂತರ ಉತ್ತಮವಾದ ನೆಟ್‌ ರನ್‌ ರೇಟ್‌ (NRR) ಹೊಂದಿವೆ. ಹೀಗಾಗಿ ಪಾಕಿಸ್ತಾನವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಅದಕ್ಕೆ ಅಮೆರಿಕ ಉಳಿದೆರಡು ಪಂದ್ಯಗಳನ್ನೂ ಸೋಲಬೇಕು. ಹಾಗೂ ಹೆಚ್ಚಿನ ಅಂತರದಲ್ಲಿ ಸೋಲಬೇಕು. ಜೊತೆಗೆ ಪಾಕಿಸ್ತಾನ ಸಹ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಅಂತರದಲ್ಲಿ ಗೆಲ್ಲಬೇಕು. ಇದಕ್ಕಾಗಿ ಅದು ಈಗ ಭಾರತ ಹೇಗೆ ಆಡುತ್ತದೆ ಎಂಬುದನ್ನು ನೆಚ್ಚಿಕೊಂಡಿದೆ.

ಪ್ರಮುಖ ಸುದ್ದಿ :-   ಪತ್ನಿಯನ್ನು ಕೊಂದು ದೇಹ ಕತ್ತರಿಸಿ ಕುಕ್ಕರ್‌ ನಲ್ಲಿ ಬೇಯಿಸಿದ ಮಾಜಿ ಸೈನಿಕ...!

ಭಾರತಕ್ಕೆ ಎರಡು ಪಂದ್ಯಗಳು ಬಾಕಿಯಿದೆ. ಭಾರತವು ಅಮೆರಿಕ ಹಾಗೂ ಕೆನಡಾ ವಿರುದ್ಧ ಸೆಣಸಬೇಕಿದೆ. ಅದೇರೀತಿ ಅಮೆರಿಕಕ್ಕೂ ಎರಡು ಪಂದ್ಯಗಳು ಬಾಕಿಯಿದೆ. ಅದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಹಾಗೂ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ಪಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಸೆಣಸಬೇಕಿದೆ.
ಪಂದ್ಯಾವಳಿಯಲ್ಲಿ ಭಾರತವು ತನ್ನ ಗ್ರೂಪ್ ಎ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಬೇಕೆಂದು ಪಾಕಿಸ್ತಾನವು ಹತಾಶವಾಗಿ ಆಶಿಸುತ್ತಿದೆ. ಭಾರತದ ವಿರುದ್ಧ ಅಮೆರಿಕ ಭಾರೀ ಅಂತರದಿಂದ ಸೋತರೆ ಅದರ ನೆಟ್‌ ರನ್‌ ರೇಟ್‌ (NRR) ಕಡಿಮೆಯಾಗುತ್ತದೆ. ಇದು ಪಾಕಿಸ್ತಾನಕ್ಕೆ ಅನುಕೂಲವಾಗುತ್ತದೆ. ಇಷ್ಟೇ ಆದರೆ ಸಾಕಾಗವುದಿಲ್ಲ, ಅಮೆರಿಕವು ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧವೂ ಸೋಲಬೇಕಿದೆ. ಹೀಗಾದರೆ ಮಾತ್ರ ಪಾಕಿಸ್ತಾನಕ್ಕೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಆಸೆ ಜೀವಂತವಾಗಿರುತ್ತದೆ. ಯಾಕೆಂದರೆ ಹಾಗಾದರೆ ಮಾತ್ರ ಅಮೆರಿಕ ಮತ್ತು ಪಾಕಿಸ್ತಾನವು ನಾಲ್ಕು ಅಂಕಗಳಲ್ಲಿ ಸಮನಾಗುತ್ತವೆ ಮತ್ತು ಪಾಕಿಸ್ತಾನವು ನೆಟ್‌ ರನ್‌ ರೇಟ್‌ ಆಧಾರದ ಮೇಲೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬಹುದಾಗಿದೆ.

ಭಾರತದ ಉಳಿದ ಪಂದ್ಯಗಳು
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಅಮೆರಿಕ (USA) ವಿರುದ್ಧ ಹಾಗೂ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ಪಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳು ಬಾಕಿಯಿದೆ. ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತವು USA ಅನ್ನು ಆಡುತ್ತದೆ, ಈ ಪಿಚ್‌ ಬ್ಯಾಟರ್‌ಗಳಿಗೆ ಭಯಾನಕವಾಗಿದೆ ಎಂದು ಹೇಳಲಾಗುತ್ತದೆ. ಭಾರತ ವಿರುದ್ಧದ ಆಟದಲ್ಲಿ ಅಮೆರಿಕದ ನೆಟ್‌ ರನ್‌ ರೇಟ್‌ (NRR) ಕುಸಿತವಾಗಬಹುದು ಎಂದು ಪಾಕಿಸ್ತಾನ ಆಶಿಸುತ್ತದೆ. ಹೀಗಾದರೆ ಮಾತ್ರ ಪಾಕಿಸ್ತಾನವು ಸೂಪರ್ 8 ಹಂತಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ, ಒಂದು ವೇಳೆ ನೆಟ್‌ ರನ್‌ ರೇಟ್‌ ಕಡಿಮೆಯಾಗದೆ ಅಮೆರಿಕ ಭಾರತದ ವಿರುದ್ಧ ಸೋತರೂ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜವಾಗುವುದಿಲ್ಲ. ಅದು ಪಂದ್ಯಾವಳಿಯಿಂದ ಹೊರಬೀಳಬೇಕಾಗುತ್ತದೆ. ಹೀಗಾಗಿ ಈಗ ಅದು ಅಮೆರಿಕದ ವಿರುದ್ಧ ಭಾರತ ತಂಡದ ಗೆಲುವು ಯಾವರೀತಿ ಆಗುತ್ತದೆ ಎಂದು ಎದುರು ನೋಡುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ವೃದ್ಧೆ ಮೇಲೆ ದಾಳಿ ನಡೆಸಿ ಎಳೆದಾಡಿದ ನಾಯಿಗಳ ಗುಂಪು ; ವೃದ್ಧೆಗೆ 40 ಹೊಲಿಗೆ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement