ವೀಡಿಯೊ.. : ಹುಲಿ ಜೊತೆ ಹಗ್ಗ ಜಗ್ಗಾಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಲಾಢ್ಯ ವ್ಯಕ್ತಿ ; ಕೊನೆಯಲ್ಲಿ ಗೆದ್ದವರು ಯಾರು..? | ವೀಕ್ಷಿಸಿ

ಸಿಂಹ, ಹುಲಿ, ಚಿರತೆಯಂತಹ ಕಾಡು ಪ್ರಾಣಿಗಳ ಶಕ್ತಿ ಹೇಗಿರುತ್ತದೆ, ಅವು ಮನುಷ್ಯರಿಗಿಂತ ಬಲಶಾಲಿಯಾಗಿರುತ್ತವೆಯೇ ಮತ್ತು ಚಲನಚಿತ್ರಗಳಲ್ಲಿ ಸಿಂಹ ಮತ್ತು ಹುಲಿಗಳ ವಿರುದ್ಧ ಹೀರೋಗಳು ಹೋರಾಡುವ ರೀತಿಯಲ್ಲಿ ಹೋರಾಡಲು ನಿಜವಾಗಿಯೂ ಸಾಧ್ಯವೇ ಎಂದು ಎಂದಾದರೂ ಯೋಚಿಸಿದ್ದೇವೆಯೇ..? ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬ ಹುಲಿಯೊಂದಿಗೆ ಕಾದಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವ್ಯಕ್ತಿ ಸ್ವತಃ ಕುಸ್ತಿಪಟು ಎಂದು ತೋರುತ್ತದೆ, ಆದರೆ ಹುಲಿಯೊಂದಿಗಿನ ಹಗ್ಗ ಜಗ್ಗಾಟದಲ್ಲಿ ಹುಲಿಯ ಮುಂದೆ ಆತನ ಬಲವು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಈ ವೀಡಿಯೊದಲ್ಲಿ ಕಂಡುಬಂದಿದೆ. ಏಕೆಂದರೆ ಹುಲಿ ತನ್ನ ಬಾಯಿಯಿಂದ ಹಗ್ಗವನ್ನು ಹಿಡಿದುಕೊಂಡು ಎಳೆಯುತ್ತಿದ್ದರೆ ಮತ್ತೊಂದು ಬದಿಗೆ ಇದೇ ಹಗ್ಗ ಹಿಡಿದಿದ್ದ ಬಲಾಢ್ಯ ವ್ಯಕ್ತಿ ಅಲ್ಲಾಡಿ ಹೋಗಿದ್ದಾನೆ.

@AMAZlNGNATURE ಎಂಬ ಟ್ವಿಟರ್ ಖಾತೆಯಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಅಚ್ಚರಿಯ ವೀಡಿಯೊಗಳನ್ನು ಹೆಚ್ಚಾಗಿ ಪೋಸ್ಟ್ ಮಾಡಲಾಗುತ್ತದೆ. ಇತ್ತೀಚೆಗೆ, ಇದೇ ರೀತಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ವೀಡಿಯೊದಲ್ಲಿ ಹುಲಿ ಮತ್ತು ಮನುಷ್ಯನ ನಡುವೆ ಟಗ್ ಆಫ್ ವಾರ್ (ಹಗ್ಗ ಜಗ್ಗಾಟ) ನಡೆದಿರುವುದು ಕಂಡುಬರುತ್ತದೆ. ಆದರೆ ಇಲ್ಲಿ ಹುಲಿಯನ್ನು ಮುಕ್ತವಾಗಿ ಬಿಡಲಾಗಲಿಲ್ಲ, ಅದನ್ನು ಬೋನಿನಲ್ಲಿಯೇ ಇರಿಸಲಾಗಿದೆ, ಆದರೆ ಮನುಷ್ಯ ಹೊರಗೆ ಇದ್ದಾನೆ. ದಪ್ಪ ಹಗ್ಗ ಮಧ್ಯದಲ್ಲಿದೆ, ಅದರ ಒಂದು ಬದಿ ವ್ಯಕ್ತಿಯ ಕಡೆಗೆ ಮತ್ತು ಇನ್ನೊಂದು ಬದಿ ಹುಲಿಯ ಕಡೆಗೆ ಇದೆ.

ಪ್ರಮುಖ ಸುದ್ದಿ :-   ಟಿ20 ಕ್ರಿಕೆಟ್‌ : ಸತತ 5 ಎಸೆತಗಳಲ್ಲಿ 5 ವಿಕೆಟ್‌ ಪಡೆದ ಕರ್ಟಿಸ್‌ ಕ್ಯಾಂಪರ್‌...!

ಹುಲಿಯೊಂದಿಗೆ ಹಗ್ಗ ಜಗ್ಗಾಟ
ಆ ವ್ಯಕ್ತಿ ಬಾಡಿಬಿಲ್ಡರ್ ಆಗಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆತ ಒಂದು ಬದಿಯಿಂದ ಹಗ್ಗವನ್ನು ಎಳೆಯುತ್ತಿದ್ದರೆ ಹುಲಿಯೂ ತನ್ನ ಬಾಯಿಂದ ಹಗ್ಗದ ಇನ್ನೊಂದು ಬದಿಯನ್ನು ಎಳೆಯುತ್ತಿರುವುದು ಕಂಡುಬರುತ್ತದೆ. ಇದಾದ ನಂತರ ಇಬ್ಬರೂ ತಮ್ಮ ಶಕ್ತಿ ಪ್ರದರ್ಶಿಸಲು ಆರಂಭಿಸಿದರು. ಮನುಷ್ಯ ಬಹಳ ಬಲ ಹಾಕಿ ಹಗ್ಗ ಎಳೆಯುತ್ತಿರುವಾಗ ಹುಲಿಯೂ ತನ್ನ ಬಾಯಿಯಿಂದ ಹಗ್ಗವನ್ನು ಹಿಡಿದೆಳೆಯುತ್ತದೆ. ನಡುನಡುವೆ ಇಬ್ಬರೂ ಹಗ್ಗವನ್ನು ಕೆಲ ಕ್ಷಣ ಬಿಟ್ಟರೂ ಹುಲಿ ಅದನ್ನು ಹಿಡಿದು ಎಳೆದಾಡುತ್ತದೆ, ಮತ್ತು ಅದು ಹಗ್ಗ ಜಗ್ಗುವುದನ್ನು ಬಿಡುವುದಿಲ್ಲ. ಕೊನೆಗೆ ಹುಲಿಯ ಬಾಯಿಯಿಂದ ಕಚ್ಚಿ ಹಿಡಿದ ಹಗ್ಗ ತಪ್ಪಿ ಹೋಗುತ್ತದೆ. ಎರಡನೇ ಬಾರಿಗೇ ಸಿಂಹ ತನ್ನ ಸೋಲನ್ನು ಒಪ್ಪಿಕೊಳ್ಳದೆ ಹಗ್ಗವನ್ನು ಗಟ್ಟಿಯಾಗಿ ಬಾಯಲ್ಲಿ ಕಚ್ಚಿ ಹಿಡಿದು ನಿಲ್ಲುತ್ತದೆ. ಆಗ ಬಾಡಿ ಬಿಲ್ಡರ್‌ ತಾನು ಗೆದ್ದಿದ್ದೇನೆ ಎಂದು ಹೇಳಿಕೊಳ್ಳುವುದು ಕಂಡುಬರುತ್ತದೆ.

ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ ಮತ್ತು ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪಂಜರದ ನಡುವಿನ ಗ್ರಿಲ್‌ ಮಧ್ಯದಿಂದ ಕಣ್ಮರೆಯಾದರೆ ಏನಾಗುತ್ತದೆ ಎಂದು ಊಹಿಸಿ ಎಂದು ಒಬ್ಬರು ಬರೆದಿದ್ದಾರೆ. ಹೀಗೆ ಮಾಡುವುದರಿಂದ ವ್ಯಕ್ತಿಯ ನರಗಳಿಗೆ ಹಾನಿಯಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅಫ್ಘಾನಿಸ್ತಾನದಲ್ಲಿ 45 ವರ್ಷದ ವ್ಯಕ್ತಿ ಜೊತೆ 6 ವರ್ಷದ ಬಾಲಕಿಯ ವಿವಾಹ...! ಮನೆಗೆ ಬಾಲಕಿಯನ್ನು ಕರೆದೊಯ್ಯದಂತೆ ತಡೆದ ತಾಲಿಬಾನ್‌

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement