ಟಿ20 ವಿಶ್ವಕಪ್ 2024 : ಬಾಂಗ್ಲಾದೇಶ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ ಅಫ್ಘಾನಿಸ್ತಾನ ; ಆಸ್ಟ್ರೇಲಿಯಾ ಹೊರಕ್ಕೆ

ವಿನ್ಸೆಂಟ್‌ : ಮಳೆ ಬಾಧಿತ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎಂಟು ರನ್‌ಗಳಿಂದ ಸೋಲಿಸಿದ ಅಫ್ಘಾನಿಸ್ತಾನವು T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಆಗಾಗ ಮಳೆಯ ಅಡಚಣೆಯನ್ನು ಕಂಡ ಅಫ್ಘಾನಿಸ್ತಾನ ತಂಡವು ಗೆಲ್ಲಲೇಬೇಕಾದ ಪಂದ್ಯದಲ್ಲಿ ತನ್ನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 115 ರನ್ ಗಳಿಸಿತು ಮತ್ತು ನಂತರ ಬಾಂಗ್ಲಾದೇಶವನ್ನು 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಗೆದ್ದು ಬೀಗಿತು ಹಾಗೂ ಸೆಮಿಫೈನಲ್‌ ಪ್ರವೇಶಿಸುವ ಆಸ್ಟ್ರೇಲಿಯಾದ ಕನಸಿಗೆ ತಣ್ಣೀರೆರೆಚಿತು. ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯವನ್ನು 19 ಓವರ್‌ಗಳಿಗೆ ಮೊಟಕುಗೊಳಿಸಲಾಯಿತು ಮತ್ತು ಬಾಂಗ್ಲಾದೇಶಕ್ಕೆ 114 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಆದರೆ ಗುರಿ ತಲುಪಲು ಬಾಂಗ್ಲಾದೇಶ ವಿಫಲವಾಯಿತು.

ಅಫ್ಘಾನಿಸ್ತಾನ ತಂಡವು ಮಾಜಿ ಚಾಂಪಿಯನ್ ಆಸ್ಟ್ರೇಲಿಯವನ್ನು ಸೋಲಿಸಿತ್ತು, ಈ ಪಂದ್ಯವನ್ನು ಬಾಂಗ್ಲಾದೇಶ ಗೆಲ್ಲುವುದರ ಮೇಲೆ ಅಸ್ಟ್ರೇಲಿಯಾವು ಸೆಮಿಫೈನಲ್‌ ಪ್ರವೇಶುವುದು ನಿರ್ಧಾರವಾಗುತ್ತಿತ್ತು. ಆದರೆ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶದ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿತು. ಜೂನ್ 27 ರಂದು ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಟಾಸ್ ಗೆದ್ದ ಅಫ್ಘಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ, ರಹಮಾನುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 43 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿ ತಂಡವನ್ನು 115ಕ್ಕೆ ಕೊಂಡೊಯ್ಯುವಲ್ಲಿ ನೆರವಾದರು. ಬಾಂಗ್ಲಾದೇಶದ ರಿಷಬ್ ಹೊಸೈನ್ (3/26) ಮೂರು ವಿಕೆಟ್ ಕಬಳಿಸಿ ಅಫ್ಘಾನಿಸ್ತಾನವನ್ನು 5 ವಿಕೆಟ್‌ಗೆ 115 ಕ್ಕೆ ನಿರ್ಬಂಧಿಸಿದರು.

ಪ್ರಮುಖ ಸುದ್ದಿ :-   ಬಲೂಚಿಸ್ತಾನದಲ್ಲಿ ‘ಸ್ವಾತಂತ್ರ್ಯದ ಘೋಷಣೆ’: ಪಾಕ್‌ ಆಕ್ರಮಿತ ಕಾಶ್ಮೀರಕ್ಕಿಂತಲೂ ಇದು ಪಾಕಿಸ್ತಾನಕ್ಕೆ ಹೆಚ್ಚು ಆತಂಕದ ವಿಷಯ ಯಾಕೆ ?

ಪ್ರತ್ಯುತ್ತರವಾಗಿ ಬಾಂಗ್ಲಾದೇಶ ತಂಡವು ಗೆಲುವಿನ ಗುರಿ ತಲುಪಲು ವಿಫಲವಾಯಿತು. ಲಿಟ್ಟನ್ ದಾಸ್ 49 ಎಸೆತಗಳಲ್ಲಿ 54 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಉತ್ತಮ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ತಂಡವು 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್‌ಗಳು: ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 115 (ರಹಮಾನುಲ್ಲಾ ಗುರ್ಬಾಜ್ 43; ರಿಷಬ್ ಹೊಸೈನ್ 3/26).
ಬಾಂಗ್ಲಾದೇಶ: 17.5 ಓವರ್‌ಗಳಲ್ಲಿ 105 (ಲಿಟ್ಟನ್ ದಾಸ್ ಔಟಾಗದೆ 54; ರಶೀದ್ ಖಾನ್ 4/23).

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement