ಪ್ಯಾರಿಸ್ : ಸ್ವಪ್ನಿಲ್ ಕುಸಾಲೆ ಗುರುವಾರ (ಆಗಸ್ಟ್ 1) ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ.
ಈ ಸ್ಪರ್ಧೆಯಲ್ಲಿ ಚೀನಾದ ಯುಕುನ್ ಲಿಯು ಚಿನ್ನದ ಪದಕ ಹಾಗೂ ಉಕ್ರೇನ್‌ನ ಸೆರ್ಹಿ ಕುಲಿಶ್ ಬೆಳ್ಳಿ ಪದಕ ಪಡೆದರು. ಈವೆಂಟ್‌ನಲ್ಲಿ ವಿಶ್ವ ದಾಖಲೆ ಹೊಂದಿರುವ ಚೀನಾದ ಲಿಯು ಸ್ಪರ್ಧೆಯಲ್ಲಿ ಗೆಲ್ಲುವ ಹಾಟ್ ಫೇವರಿಟ್ ಆಗಿದ್ದರು. ಈ ವರ್ಷ ಮೇ 11ರಂದು ಬಾಕುವಿನಲ್ಲಿ ಲಿಯು 468.9 ಅಂಕಗಳೊಂದಿಗೆ ವಿಶ್ವ ದಾಖಲೆ ಸ್ಥಾಪಿಸಿದ್ದರು.
ಲಿಯು ಒಟ್ಟು 463.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ಪಡೆದರು. ಸೆರ್ಹಿ ಒಟ್ಟು 461.3 ಅಂಕಗಳೊಂದಿಗೆ ಬೆಳ್ಳಿಯನ್ನು ಪಡೆದರು. ಸ್ವಪ್ನಿಲ್ ಒಟ್ಟು 451.4 ಪಾಯಿಂಟ್‌ಗಳನ್ನು ಗಳಿಸಿ ಕಂಚಿನ ಪದಕ ಪಡೆದರು. ಸ್ವಪ್ನಿಲ್ ಮೊದಲು ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.
ಅವರು 2023 ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 50 ಮೀಟರ್ ರೈಫಲ್ 3 ಪೊಸಿಷನ್ ಫೈನಲ್‌ನಲ್ಲಿ ಚಿನ್ನ ಗೆದ್ದ ಭಾರತೀಯ ಪುರುಷರ ತಂಡದಲ್ಲಿದ್ದರು. ಈವರೆಗೆ ಭಾರತ ಗೆದ್ದ ಮೂರು ಪದಕಗಳು ಶೂಟಿಂಗ್ ವಿಭಾಗದಲ್ಲಿಯೇ ಬಂದಿವೆ.
ನಿಮ್ಮ ಕಾಮೆಂಟ್ ಬರೆಯಿರಿ