ಕೋಲ್ಕತ್ತಾ : ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯ ವಿದ್ಯಾರ್ಥಿನಿಯ ತಂದೆ-ತಾಯಿಗೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಆಗಸ್ಟ್ 9ರ ಬೆಳಿಗ್ಗೆ ಮಾಡಿದ್ದು ಎನ್ನಲಾದ ದೂರವಾಣಿ ಕರೆಯ ವಿವರಗಳು ಗುರುವಾರ ಬಹಿರಂಗವಾಗಿವೆ.
ಆಗಸ್ಟ್ 9 ರ ಬೆಳಿಗ್ಗೆ, ಅರ್ಧ ಗಂಟೆಯೊಳಗೆ ಮೂರು ಕರೆಗಳು ಅವರ ಹತ್ಯೆಗೀಡಾದ ವೈದ್ಯೆಯ ಕುಟುಂಬದ ಪುಟ್ಟ ಪ್ರಪಂಚವನ್ನು ಛಿದ್ರಗೊಳಿಸಿದವು. ಕೋಲ್ಕತ್ತಾ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಾದ ನಂತರ ಬೆಳಿಗ್ಗೆ ಪೋಷಕರಿಗೆ ಕರೆಗಳ ಆಡಿಯೊ ಬಹಿರಂಗವಾಗಿದ್ದು, ಇದರಲ್ಲಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮೃತ ಕಿರಿಯ ವೈದ್ಯೆಯ ತಂದೆ-ತಾಯಿಗೆ ನೀಡಿದ ಮಾಹಿತಿ ತಪ್ಪಾಗಿತ್ತು ಹಾಗೂ ಮಾಹಿತಿ ನೀಡುವಾಗ ಎಷ್ಟು ಅಪ್ರಬುದ್ಧವಾಗಿ ವರ್ತಿಸಿದ್ದರು ಎಂಬದು ಈಗ ಚರ್ಚೆಗೆ ಗ್ರಾಸವಾಗಿದೆ. ದೂರವಾಣಿ ಕರೆ ಮಾಡಿದ್ದ ಸಿಬ್ಬಂದಿ ‘ವಿವರ ನೀಡುವಾಗ ಮಾತುಗಳನ್ನು ಬದಲಿಸಿರುವುದು ಕೃತ್ಯವನ್ನು ಮುಚ್ಚಿಹಾಕುವ ಯತ್ನ ಆಸ್ಪತ್ರೆಯಿಂದ ನಡೆದಿತ್ತೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ. ಆದರೆ ದೂರವಾಣಿ ಕರೆಯ ಆಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
ಮೊದಲ ಕರೆ
ಮೊದಲ ಕರೆ 10:53ಕ್ಕೆ ಬಂದಿತ್ತು ಎಂದು ಅತ್ಯಾಚಾರ-ಕೊಲೆ ಸಂತ್ರಸ್ತೆಯ ತಂದೆ-ತಾಯಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕರೆ ಮಾಡಿದವರು ಮಹಿಳೆಯಾಗಿದ್ದು, ಆಸ್ಪತ್ರೆಯ ಸಹಾಯಕ ಸೂಪರಿಂಟೆಂಡೆಂಟ್ ಎಂದು ಹೇಳಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಕೋಲ್ಕತ್ತಾ ಪೊಲೀಸ್ ಟೈಮ್‌ಲೈನ್ ಸಹ ಅಧಿಕಾರಿಯು ಈ ಸಮಯದಲ್ಲಿ ಪೋಷಕರಿಗೆ ಕರೆ ಮಾಡಿ “ಅವರಿಗೆ ಮಾಹಿತಿ ನೀಡಿದರು” ಎಂದು ಹೇಳುತ್ತದೆ, ಆದರೆ ಸಂಭಾಷಣೆ ಬಗ್ಗೆ ವಿವರಿಸುವುದಿಲ್ಲ. ಪೊಲೀಸರ ಟೈಮ್‌ಲೈನ್ ಕೇವಲ ಒಂದು ಕರೆಯನ್ನು ಮಾತ್ರ ಉಲ್ಲೇಖಿಸುತ್ತದೆ. ಆದರೆ ಮೂರು ಕರೆಗಳನ್ನು ಮಾಡಲಾಗಿದ್ದು, ಕೊನೆಯ ಕರೆಯಲ್ಲಿ ಮಾತ್ರ ಸಂತ್ರಸ್ತೆಯ ಪೋಷಕರಿಗೆ ಅವಳು ಮೃತಪಟ್ಟಿದ್ದಾಳೆ ಎಂದು ತಿಳಿಸಲಾಗಿದೆ ಎಂದು ಆಡಿಯೊ ಬಹಿರಂಗಪಡಿಸುತ್ತದೆ.
ಕರೆ ವಿವರ..
ಮಹಿಳೆ: ನಾನು ಆರ್.ಜಿ. ಕರ್ ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇನೆ. ನೀವು ಇಲ್ಲಿಗೆ ತಕ್ಷಣ ಬರಬಹುದೇ?
ಸಂತ್ರಸ್ತೆಯ ತಂದೆ: ಏನಾಯಿತು, ದಯವಿಟ್ಟು ಹೇಳಿ
ಕರೆ ಮಾಡಿದವರು: ಆಕೆಯ ಸ್ಥಿತಿ ತುಂಬಾ ಕೆಟ್ಟದಾಗಿದೆ, ದಯವಿಟ್ಟು ಆದಷ್ಟು ಬೇಗ ಬನ್ನಿ
ಸಂತ್ರಸ್ತೆಯ ತಂದೆ: ದಯವಿಟ್ಟು ಏನಾಯಿತು ಎಂದು ನಮಗೆ ತಿಳಿಸಿ
ಕರೆ ಮಾಡಿದವರು: ಅದನ್ನು ವೈದ್ಯರು ಹೇಳುತ್ತಾರೆ, ನೀವು ಬೇಗನೆ ಬನ್ನಿ.
ಸಂತ್ರಸ್ತೆಯ ತಂದೆ: ನೀವು ಯಾರು?
ಕರೆ ಮಾಡಿದವರು: ನಾನು, ಸಹಾಯಕ ಸೂಪರಿಟೆಂಡೆಂಟ್, ಡಾಕ್ಟರ್ ಅಲ್ಲ
ಸಂತ್ರಸ್ತೆಯ ತಂದೆ: ಅಲ್ಲಿ ವೈದ್ಯರಿಲ್ಲವೇ?
ಕರೆ ಮಾಡಿದವರು: ನಾನು ಸಹಾಯಕ ಸೂಪರ್. ನಿಮ್ಮ ಮಗಳನ್ನು ತುರ್ತು ಚಿಕಿತ್ಸಾ ಕೊಠಡಿಗೆ ಕರೆತಂದಿದ್ದೇವೆ. ನೀವು ಬಂದು ನಮ್ಮನ್ನು ಸಂಪರ್ಕಿಸಿ.
ಸಂತ್ರಸ್ತೆಯ ತಾಯಿ: ಅವಳಿಗೆ ಏನಾಯಿತು, ಅವಳು ಕರ್ತವ್ಯದಲ್ಲಿದ್ದಳು
ಕರೆ ಮಾಡಿದವರು: ನೀವು ಆದಷ್ಟು ಬೇಗ ಬೇಗ ಬನ್ನಿ.
ಎರಡನೇ ಕರೆ
ಎರಡನೇ ಕರೆಯಲ್ಲಿ, ಪುರುಷ ಧ್ವನಿ ಕೇಳುತ್ತದೆ. ಅಷ್ಟರಲ್ಲಾಗಲೇ ಪೋಷಕರು ಆಸ್ಪತ್ರೆಗೆ ತೆರಳಿದ್ದಾರೆ.
ಕರೆ ಮಾಡಿದವರು: ನಾನು ಆರ್.ಜಿ. ಕರ್ (ಆಸ್ಪತ್ರೆ) ನಿಂದ ಮಾತನಾಡುತ್ತಿದ್ದೇನೆ
ಮೃತ ವೈದ್ಯೆಯ ತಾಯಿ:ದಯವಿಟ್ಟು ಹೇಳಿ
ಕರೆ ಮಾಡಿದವರು: ನೀವು ಬರುತ್ತಿದ್ದೀರಿ, ಸರಿಯೇ ?
ಮೃತ ವೈದ್ಯೆಯ ತಾಯಿ: ಹೌದು, ನಾವು ಬರುತ್ತಿದ್ದೇವೆ. ಈಗ ಹೇಗಿದ್ದಾಳೆ?
ಕರೆ ಮಾಡಿದವರು: ನೀವು ಬನ್ನಿ, ನಾವು ಮಾತನಾಡುತ್ತೇವೆ, ಆರ್‌ಜಿ ಕರ್ ಆಸ್ಪತ್ರೆಯ ಎದೆ ವಿಭಾಗದ ಎಚ್‌ಒಡಿ ಬಳಿಗೆ ಬನ್ನಿ
ತಾಯಿ: ಸರಿ
ಮೂರನೇ ಕರೆ
ಮೂರನೇ ಕರೆಯಲ್ಲಿ ಸಂತ್ರಸ್ತೆಯ ಪೋಷಕರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಲಾಗಿತ್ತು. ಇದು ಪದೇ ಪದೇ ನ್ಯಾಯಾಲಯದಲ್ಲಿ ಕೇಳಿ ಬರುತ್ತಿದ್ದು, ಪೋಷಕರನ್ನು ಏಕೆ ದಾರಿ ತಪ್ಪಿಸಲಾಗಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಈ ಕರೆ ಮೊದಲ ಕರೆ ಮಾಡಿದ್ದ ಸಹಾಯಕ ಅಧೀಕ್ಷಕರಿಂದ ಬಂದಿದೆ.
ಸಂತ್ರಸ್ತೆಯ ತಂದೆ: ನಮಸ್ಕಾರ
ಕರೆ ಮಾಡಿದವರು: ನಾನು ಸಹಾಯಕ ಸೂಪರಿಟೆಂಡೆಂಟ್.
ಮೃತ ವೈದ್ಯೆಯ ತಂದೆ: ಸರಿ
ಕರೆ ಮಾಡಿದವರು: ನಿಮ್ಮ ಮಗಳು ಬಹುಶಃ ಆತ್ಮಹತ್ಯೆಯಿಂದ ಸತ್ತಿರಬಹುದು. ಅವಳು ಸತ್ತಿದ್ದಾಳೆ, ಪೋಲೀಸರು ಇಲ್ಲಿದ್ದಾರೆ, ನಾವೆಲ್ಲರೂ ಇಲ್ಲಿದ್ದೇವೆ, ದಯವಿಟ್ಟು ಆದಷ್ಟು ಬೇಗ ಬನ್ನಿ.
ಸಂತ್ರಸ್ತೆಯ ತಂದೆ: ನಾವು ಈಗಲೇ ಬರುತ್ತಿದ್ದೇವೆ
ಮೃತ ವೈದ್ಯೆಯ ತಾಯಿ (ಹಿನ್ನೆಲೆಯಲ್ಲಿ ಕೂಗುತ್ತಾಳೆ): ನನ್ನ ಮಗಳು ಇನ್ನಿಲ್ಲ.
ಮೃತ ವೈದ್ಯೆಯ ತಂದೆ-ತಾಯಿಯ ಜೊತೆ ಆಸ್ಪತ್ರೆ ಆಡಳಿತದ ಮಾತನಾಡಿದ ರೀತಿಯು ಈ ಭಯಾನಕ ಘಟನೆಯ ಒಂದು ಅಂಶವಾಗಿದೆ. ಆಸ್ಪತ್ರೆಯ ಸಿಬ್ಬಂದಿ ನೀಡಿದ ಅವರಿಗೆ ಮೂರು ಬಾರಿ ಕರೆ ಮಾಡಿ ನೀಡಿದ ಮಾಹಿತಿಗಳಲ್ಲಿ ವ್ಯತ್ಯಾಸವಿದೆ. ಮೊದಲ ಕರೆಯಲ್ಲಿ ಸ್ವಲ್ಪ ಅನಾರೋಗ್ಯವಿದೆ ಎಂದರೆ, ಎರಡನೇ ಕರೆಯಲ್ಲಿ ತುರ್ತು ಚಿಕಿತ್ಸಾ ಕೊಠಡಿಗೆ ದಾಖಲಿಸಿದ್ದೇವೆ ಎನ್ನುತ್ತಾರೆ. ಮೂರನೇ ಕರೆಯಲ್ಲಿ, ‘ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎನ್ನುತ್ತಾರೆ.
ಕುಟುಂಬ ಸದಸ್ಯರ ಹಾದಿ ತಪ್ಪಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪದೇ ಪದೇ ಪರಿಶೀಲನೆಗೆ ಒಳಪಟ್ಟಿದೆ. ಮೃತ ವೈದ್ಯೆಯ ತಂದೆ-ತಾಯಿಯನ್ನು ಮೂರು ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿತ್ತು ಎಂದು ಪೋಷಕರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ವಿಳಂಬ ಎಂದು ಅವರು ಶಂಕಿಸಿದ್ದಾರೆ.
ಆದರೆ ಕೋಲ್ಕತ್ತಾ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಪೋಷಕರು ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ತಲುಪಿದರು ಮತ್ತು 10 ನಿಮಿಷಗಳ ನಂತರ ಅವರನ್ನು ಶವ ಪತ್ತೆಯಾದ ಸೆಮಿನಾರ್ ಹಾಲ್‌ಗೆ ಕರೆದೊಯ್ಯಲಾಯಿತು ಎಂದು ಪೊಲೀಸರ ಟೈಮ್‌ಲೈನ್ ಹೇಳುತ್ತದೆ. ಆಗಿನ ಪ್ರಾಂಶುಪಾಲ ಡಾ.ಸಂದೀಪ ಘೋಷ್ ನೇತೃತ್ವದ ಆಸ್ಪತ್ರೆ ಆಡಳಿತವು ಔಪಚಾರಿಕ ಪೊಲೀಸ್ ದೂರು ದಾಖಲಿಸಲಿಲ್ಲ ಮತ್ತು ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ಏಕೆ ದಾಖಲಿಸಬೇಕಾಯಿತು ಎಂದು ನ್ಯಾಯಾಲಯಗಳು ಪ್ರಶ್ನಿಸಿವೆ. ಸಂತ್ರಸ್ತೆಯ ತಂದೆ ಔಪಚಾರಿಕ ದೂರನ್ನು ದಾಖಲಿಸಿದ ನಂತರ ತಡರಾತ್ರಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ