ವೀಡಿಯೊ..| ಪಾಕಿಸ್ತಾನದಲ್ಲಿ ಉದ್ಘಾಟನೆಯಾದ ದಿನವೇ ಬೃಹತ್ ಮಾಲ್ ಸಂಪೂರ್ಣ ಲೂಟಿ-ಧ್ವಂಸ : ಅರ್ಧತಾಸಿನಲ್ಲೇ ಎಲ್ಲ ವಸ್ತುಗಳು ಮಾಯ…!

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್ ಬಜಾರ್‌ನ ಉದ್ಘಾಟನೆಯು ಅದ್ಧೂರಿಯಾಗಿ ನಡೆಯಬೇಕಿತ್ತು, ಆದರೆ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನದಲ್ಲಿ ಮಹತ್ವಾಕಾಂಕ್ಷೆಯೊಂದಿಗೆ ಉದ್ಘಾಟನೆಯಾಗಬೇಕಿದ್ದ ಡ್ರೀಮ್ ಬಜಾರ್‌ (Dream Bazaar) ಮಾಲ್ ಗೆ ಆಘಾತ ಎದುರಾಗಿದ್ದು, ಇಡೀ ಮಾಲ್ ಅನ್ನು ಪಾಕಿಸ್ತಾನಿಯರು ಅರ್ಧ ಗಂಟೆಗಳಲ್ಲಿ ಲೂಟಿ ಮಾಡಿದ್ದಾರೆ. ಎಲ್ಲ ವಸ್ತುಗಳಿಗೂ ರಿಯಾಯಿತಿ ಘೋಷಿಸಿ ಭರವಸೆಯೊಂದಿಗೆ ಪ್ರಾರಂಭವಾದ ಮಾಲ್‌ ಲೂಟಿಗೆ ತುತ್ತಾಗಬೇಕಾಯಿತು.
ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಮೊದಲ ದಿನವೇ ಜನರ ಗುಂಪು ಧ್ವಂಸಗೊಳಿಸಿತು. ಹಾಗೂ ಬ್ರಾಂಡೆಡ್ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ. ಜನರ ಗುಂಪನ್ನು ನಿಯಂತ್ರಿಸಲು ಆಡಳಿತ ಮಂಡಳಿ ಹರಸಾಹಸ ಪಡಬೇಕಾಯಿತು. ಈ ಕುರಿತ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.

ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಮಾಲ್‌ ತೆರೆಯುವ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿತ್ತು. ಸ್ಥಳೀಯ ವರದಿಗಳ ಪ್ರಕಾರ, ಮಳಿಗೆ ಆರಂಭದ ನಿಮಿತ್ತ ವಿಶೇಷ ರಿಯಾಯಿತು ಜಾಹೀರಾತನ್ನು ನೋಡಿದ ನಂತರ ಭಾರೀ ರಿಯಾಯಿತಿ ಅಡಿ ವಸ್ತುಗಳನ್ನು ಪಡೆಯಲು ಲಾಠಿ ಹಿಡಿದ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್‌ಗೆ ಧಾವಿಸಿದರು. ಗುಂಪು ಅಂಗಡಿಯನ್ನು ಲೂಟಿ ಮಾಡಿತು ಮತ್ತು ಬ್ರಾಂಡ್ ಬಟ್ಟೆಗಳನ್ನು ಲೂಟಿ ಮಾಡಿಕೊಂಡು ಹೋದರು.
ಜನರ ಗುಂಪು ಕಂಡು ಗಾಬರಿಗೊಂಡ ಮಾಲ್ ಸಿಬ್ಬಂದಿ, ಅದರ ದ್ವಾರಗಳನ್ನು ಮುಚ್ಚಲು ಪ್ರಯತ್ನಿಸಿದ್ದರು. ಆದರೆ ದೊಣ್ಣೆಗಳನ್ನು ಬೀಸುತ್ತಾ ಬಂದ ಕೆಲವರು, ಮಾಲ್‌ನ ಗಾಜಿನ ಪ್ರವೇಶ ದ್ವಾರವನ್ನು ಬಲಪ್ರಯೋಗದ ಮೂಲಕ ಪುಡಿ ಮಾಡಿದರು. ಘಟನಾ ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಹಾಗಾಗಿ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಮಾಲ್‌ ಸಿಬ್ಬಂದಿ ಅಸಹಾಯಕತೆ ಹೊರಹಾಕಿದ್ದಾರೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ.

ನೂರಾರು ಜನರು ಕಟ್ಟಡಕ್ಕೆ ನುಗ್ಗುತ್ತಿರುವುದನ್ನು ತೋರಿಸುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ, ಮಾಲ್ ಸಿಬ್ಬಂದಿ ಅಸಹಾಯಕರಾಗಿ ಮಾಲ್‌ಗೆ ಹಾನಿ ಮಾಡುತ್ತಿರುವುದನ್ನು ನೋಡುತ್ತಿದ್ದಾರೆ.
ಪರಿಸ್ಥಿತಿ ಎಷ್ಟು ಭೀಕರವಾಗಿತ್ತು ಎಂದರೆ ನಗರದ ಸಂಚಾರ ಸ್ಥಗಿತಗೊಂಡಿತು, ಸಾವಿರಾರು ಜನರು ಮಾಲ್‌ನ ಹೊರಗೆ ಜಮಾಯಿಸಿದ ದೃಶ್ಯಗಳು ಕಂಡುಬಂದಿವೆ. ಮಾಲ್‌ಗೆ ಅಪಾರ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಧ್ವಂಸಕ ಕೃತ್ಯಗಳ ನಡುವೆ, ಜನರು ತಾವು ಬಟ್ಟೆಗಳನ್ನು ಕದಿಯುವ ವೀಡಿಯೊಗಳನ್ನು ತಾವೇ ಮಾಡಿಕೊಂಡು ಸಂಬ್ರಮಿಸಿದರು. ಇದೆಲ್ಲವೂ ಅರ್ಧ ಗಂಟೆಯೊಳಗೆ ನಡೆದಿದೆ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಅವರು ಮಧ್ಯಾಹ್ನ 3 ಗಂಟೆಗೆ ಮಾಲ್‌ ತೆರೆಯಲಾಯಿತು ಮತ್ತು 3:30 ರ ಹೊತ್ತಿಗೆ ಅಲ್ಲಿನ ವಸ್ತುಗಳನ್ನು ಗುಂಪು ಖಾಲಿ ಮಾಡಿತು ಅಥವಾ ಅದನ್ನು ಧ್ವಂಸಗೊಳಿಸಿತು ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   2025ರಿಂದ ಪ್ರಪಂಚದ ವಿನಾಶ ಆರಂಭ, ಸಮುದ್ರಮಟ್ಟದಲ್ಲಿ ಹೆಚ್ಚಳ, ತೀವ್ರ ಬರಗಾಲ.... ; ಬಾಬಾ ವಂಗಾ ಆಘಾತಕಾರಿ ಭವಿಷ್ಯ..!

ವಿಶೇಷ ರಿಯಾಯಿತಿ ಘೋಷಿಸಿದ್ದ ಮಾಲ್
‘ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ‘ಡ್ರೀಮ್ ಬಜಾರ್’ ಮಾಲ್‌ನ ಉದ್ಘಾಟನೆ ಪ್ರಯುಕ್ತ ಮಾಲೀಕರು ವಿಶೇಷ 50 ರೂ ರಿಯಾಯಿತಿ ಘೋಷಿಸಿದ್ದರು. ಅಲ್ಲದೆ, ಸಾರ್ವಜನಿಕರನ್ನು ಆಕರ್ಷಿಸಲು ಟಿವಿ, ದಿನ ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಪ್ರಚಾರವನ್ನು ಮಾಡಿದ್ದರು. ಆದರೆ, ನಿಗದಿಯಂತೆ ಕಾರ್ಯಕ್ರಮ ನಡೆಯಲಿಲ್ಲ. ಹಾಗಾಗಿ ವ್ಯವಸ್ಥಾಪಕರು ಮಾಲ್‌ ಅನ್ನು ಬಂದ್‌ ಮಾಡಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಜನರು ಮಾಲ್‌ ಅನ್ನು ಧ್ವಂಸಗೊಳಿಸಿದ್ದಾರೆ. ಜತೆಗೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬರು ಈ ಮಾಲ್ ಅನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement