ಇಸ್ರೇಲ್‌ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಜೊತೆ ಇರಾನ್‌ ಮಿಲಿಟರಿಯ ಡೆಪ್ಯೂಟಿ ಕಮಾಂಡರ್‌ ಹತ್ಯೆ…!

ದುಬೈ : ಲೆಬನಾನಿನ ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಕೊಂದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇರಾನಿನ ಅರೆಸೈನಿಕ ರೆವುಲ್ಯಶ್ನರಿ ಗಾರ್ಡ್‌ನ ಪ್ರಮುಖ ಜನರಲ್ ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಜನರಲ್ ಅಬ್ಬಾಸ್ ನಿಲ್ಫೊರುಶನ್ ಅವರ ಹತ್ಯೆಯು ಇರಾನಿನ ಪ್ರಮುಖ ಮಿಲಟರಿ ಸಾವುನೋವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಾಜಾ ಸ್ಟ್ರಿಪ್ನಲ್ಲಿ ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷದ ಅಂಚಿನಲ್ಲಿದೆ.
ಲೆಬನಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ 58 ವರ್ಷದ ನಿಲ್‌ಫೊರುಶನ್ ಶುಕ್ರವಾರ ಕೊಲ್ಲಲ್ಪಟ್ಟರು, ಇದರಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಸಹ ಸಾವಿಗೀಡಾಗಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಪತ್ರಿಕೆ ಟೆಹ್ರಾನ್ ಟೈಮ್ಸ್ ವರದಿ ಮಾಡಿದೆ. ಇರಾನ್‌ನ ನ್ಯಾಯಾಂಗದ ಉಪ ಮುಖ್ಯಸ್ಥರಾದ ಅಹ್ಮದ್ ರೆಜಾ ಪೌರ್ ಖಘನ್ ಅವರು ನಿಲ್ಫೊರುಶನ್ ಅವರ ಸಾವನ್ನು ದೃಢಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ಗೆ ಹಕ್ಕಿದೆ ಎಂದು ಖಘನ್ ಹೇಳಿದ್ದಾರೆ.

ಅಬ್ಬಾಸ್ ನಿಲ್ಫೊರೊಶನ್ ಬ್ರಿಗೇಡಿಯರ್ ಜನರಲ್ ಆಗಿದ್ದರೂ ಲೆಬನಾನ್‌ನಲ್ಲಿ ಕುಡ್ಸ್ ಫೋರ್ಸ್‌ನ ಕಮಾಂಡರ್ ಆಗಿದ್ದರು. ನಿಲ್ಫೊರೊಶನ್ ಅವರು ಇರಾನಿನ ರೆವಲ್ಯೂಶ್ನರಿ ಗಾರ್ಡ್‌ (IRGC) ಕಾರ್ಯಾಚರಣೆಗಳ ಕಮಾಂಡ್ ಅನ್ನು ನೋಡಿಕೊಳ್ಳುತ್ತಿದ್ದರು. ಇದು ವಿವಿಧ ಮಿಲಿಟರಿ ಮತ್ತು ಭದ್ರತಾ ಕಾರ್ಯಾಚರಣೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದೆ. ಇದು ವಿಶೇಷವಾಗಿ ಸಿರಿಯಾದಲ್ಲಿ ಮಿಲಿಟರಿ ಚಟುವಟಿಕೆಯನ್ನು ನಡೆಸಿತ್ತು. ಇಸ್ರೇಲಿ ವೈಮಾನಿಕ ದಾಳಿ ನಡೆದಾಗ ಅವರು ಶುಕ್ರವಾರ ನಸ್ರಲ್ಲಾ ಅವರೊಂದಿಗೆ ಬೈರುತ್‌ನಲ್ಲಿದ್ದರು. ಆದರೆ ಅವರು ಶುಕ್ರವಾರ ಲೆಬನಾನ್‌ನಲ್ಲಿ ಏನು ಮಾಡುತ್ತಿದ್ದರು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 5 ದಿನ ಲಾಕ್‌ಡೌನ್‌.. ಶಾಲಾ-ಕಾಲೇಜು ಬಂದ್‌; ಮದುವೆ-ಸಮಾರಂಭ ಬ್ಯಾನ್‌, ಭದ್ರತೆ ಸೇನೆ ನಿಯಂತ್ರಣಕ್ಕೆ

ಖಮೇನಿ ಖಂಡನೆ…
ಲೆಬನಾನ್‌ನಲ್ಲಿ ಇಸ್ರೇಲ್ ಸೇನೆಯ ದಾಳಿಗೆ ಇರಾನ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲಿಗೆ ಎಂದಿಗೂ ಹಿಜ್ಬೊಲ್ಲಾವನ್ನು ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಖಮೇನಿ ಹೇಳಿಕೆಯಲ್ಲಿ ಹಸನ್ ನಸ್ರಲ್ಲಾ ಅಥವಾ ಅವರ ಉಪ ಕಮಾಂಡರ್ ಅನ್ನು ಹೆಸರಿಸಿಲ್ಲ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಬೈರುತ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಖಂಡಿಸಿದರು.
ಇಸ್ರೇಲಿ ಸೇನೆಯು 80 ಟನ್ ಸ್ಫೋಟಕಗಳೊಂದಿಗೆ ರಾಜಧಾನಿ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿತು. ಇದರ ಭಾರೀ ಸ್ಫೋಟಕ್ಕೆ ಆರು ಕಟ್ಟಡಗಳನ್ನು ನೆಲಸಮಗೊಂಡಿವೆ. ಈ ವೇಳೆ ಹಿಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ತನ್ನ ಮಗಳೊಂದಿಗೆ ಅಲ್ಲಿದ್ದ. ಇರಾನ್ ಕಮಾಂಡರ್‌ಗಳು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸಹ ಅವರೊಂದಿಗೆ ಇದ್ದರು. ೀ ವಾಯುದಾಳಿಯಲ್ಲಿ ಹಿಜ್ಬೊಲ್ಲಾದ ಅನೇಕ ಪ್ರಮುಖರು ಸಾವಿಗೀಡಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement