ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಹಿಜ್ಬೊಲ್ಲಾ ಉನ್ನತ ನಾಯಕನನ್ನು ಸಾಯಿಸಿದ್ದೇವೆ ಎಂದು ಘೋಷಿಸಿದ ಇಸ್ರೇಲಿ ಮಿಲಿಟರಿ

ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆ ಹಿಜ್ಬೊಲ್ಲಾಗೆ ಮತ್ತೊಂದು ಹಿನ್ನಡೆಯಾಗಿ, ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ಶನಿವಾರ ರಾತ್ರಿ (ಸೆಪ್ಟೆಂಬರ್ 28) ನಡೆದ ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಉಗ್ರಗಾಮಿ ಸಂಘಟನೆಯ ಮತ್ತೊಬ್ಬ ಉನ್ನತ ಕಮಾಂಡರ್ ನಬಿಲ್ ಕೌಕ್ (Nabil Qaouk) ಅವರನ್ನು ಕೊಂದುಹಾಕಿದ್ದೇವೆ ಎಂದು ಇಸ್ರೇಲಿ ಸೇನೆ (IDF) ಪ್ರಕಟಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ನಬಿಲ್ ಕೌಕ್ (Nabil Qaouk) ಹಿಜ್ಬೊಲ್ಲಾದ “ಪ್ರಿವೆಂಟಿವ್‌ ಸೆಕ್ಯುರಿಟಿ ಯುನಿಟ್‌ (preventive security unit) ಕಮಾಂಡರ್ ಮತ್ತು ಭಯೋತ್ಪಾದಕ ಗುಂಪಿನ ಕೇಂದ್ರ ಮಂಡಳಿಯ ಹಿರಿಯ ಸದಸ್ಯ ಎಂದು ಹೇಳಲಾಗಿದೆ. IDF ಅನ್ನು ಉಲ್ಲೇಖಿಸಿ ವರದಿ ಹೇಳಿದೆ. ಶುಕ್ರವಾರ ಮತ್ತೊಂದು ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಕೊಲ್ಲಲ್ಪಟ್ಟ ಎರಡು ದಿನಗಳ ನಂತರ ಈ ಸುದ್ದಿ ಬಂದಿದೆ. ಇಸ್ರೇಲಿ ಮಿಲಿಟರಿ ತನ್ನ ವಾಯುದಾಳಿಯಲ್ಲಿ ಹಸನ್ ನಸ್ರಲ್ಲಾ ಸತ್ತಿದ್ದನ್ನು ಶನಿವಾರ ಘೋಷಿಸಿತ್ತು.

ಇಸ್ರೇಲ್‌ನ ಫೈಟರ್ ಏರ್‌ಕ್ರಾಫ್ಟ್‌ಗಳು ಕಳೆದ ರಾತ್ರಿ ಬೈರುತ್‌ನ ದಹಿಯೆಹ್ ಉಪನಗರದಲ್ಲಿ ಕ್ವಾಕ್ ಅನ್ನು ಹೊಡೆದು ಕೊಂದವು, ಇದು ಹಿಜ್ಬೊಲ್ಲಾ ಭದ್ರಕೋಟೆಯಾಗಿದೆ.
ಕೌಕ್, ಇಸ್ರೇಲ್ ಮತ್ತು ಅದರ ನಾಗರಿಕರ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಮುನ್ನಡೆಸುವಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದ ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ.
ಕೌಕ್ 1980 ರ ದಶಕದಲ್ಲಿ ಉಗ್ರಗಾಮಿ ಸಂಘಟನೆಗೆ ಸೇರಿಕೊಂಡರು ಮತ್ತು ಅದರ ಉಪ ಮುಖ್ಯಸ್ಥರಾಗಿ, ನಂತರ ಕಾರ್ಯಕಾರಿ ಮಂಡಳಿಯಲ್ಲಿ ದಕ್ಷಿಣ ಲೆಬನಾನ್ ಪ್ರದೇಶದ ಮುಖ್ಯಸ್ಥರಾಗಿ ಮತ್ತು ಕಾರ್ಯಕಾರಿ ಮಂಡಳಿಯ ಉಪ ಮುಖ್ಯಸ್ಥನಾಗಿ ಈತ ಕಾರ್ಯನಿರ್ವಹಿಸುತ್ತಿದ್ದ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸೇರಿ 8 ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಿದ ಅಮೆರಿಕದ ಎಫ್‌ ಬಿಐ

ಇಸ್ರೇಲಿ ದಾಳಿಗಳು ದಕ್ಷಿಣ ಬೈರುತ್ ಮತ್ತು ಬೆಕಾ ಕಣಿವೆಯಲ್ಲಿ ಹಿಜ್ಬೊಲ್ಲಾದ ಭದ್ರಕೋಟೆಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿವೆ, ಅಲ್ಲಿ ಹಿಜ್ಬೊಲ್ಲಾ ಗುಂಪು ಸಾವಿರಾರು ರಾಕೆಟ್‌ಗಳನ್ನು ಸಂಗ್ರಹಿಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಇಸ್ರೇಲ್‌ನ ಮಿಲಿಟರಿಯು ಈ ವರ್ಷ ಅದರಲ್ಲಿಯೂ ಹೆಚ್ಚಾಗಿ ಕಳೆದ ವಾರದಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಸೇರಿದಂತೆ ಅದರ ಒಂಬತ್ತು ಹಿರಿಯ ಮಿಲಿಟರಿ ಕಮಾಂಡರ್‌ಗಳಲ್ಲಿ ಎಂಟು ಮಂದಿಯನ್ನು ಕೊಂದಿದೆ ಎಂದು ಹೇಳಿದೆ. ಈ ಕಮಾಂಡರ್‌ಗಳು ರಾಕೆಟ್ ವಿಭಾಗದಿಂದ ಹಿಡಿದು ಗಣ್ಯ ರಾಡ್ವಾನ್ ಪಡೆಗಳವರೆಗಿನ ಘಟಕಗಳನ್ನು ಮುನ್ನಡೆಸಿದವರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲಿ ವೈಮಾನಿಕ ದಾಳಿಗಳು ಹಿಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರನ್ನು ಕೊಂದ ಒಂದು ದಿನಗಳ ನಂತರ ಲೆಬನಾನ್ ಭಾನುವಾರ ದೇಶದಲ್ಲಿ 5 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಎಲ್ಲಾ ಅಂಗಡಿಗಳು, ವ್ಯಾಪಾರಗಳು ಮತ್ತು ಸರ್ಕಾರಿ ಕಚೇರಿಗಳು ಬುಧವಾರದವರೆಗೆ ಮುಚ್ಚಲ್ಪಡುತ್ತವೆ.
ಇತ್ತೀಚಿನ ಬೆಳವಣಿಗೆಯ ಪ್ರಕಾರ, ಹಸನ್ ನಸ್ರಲ್ಲಾ ಸಾವಿನ ನಂತರ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಿಜ್ಬೊಲ್ಲಾದ ಮುಖ್ಯಸ್ಥರಾಗಿ ಹಶೆಮ್ ಸಫೀದ್ದೀನ್ ನೇಮಕವಾಗಲಿದ್ದಾರೆ. ಈತ ನಸ್ರಲ್ಲಾ ಸೋದರ ಸಂಬಂಧಿ. ನಸ್ರಲ್ಲಾ 32 ವರ್ಷಗಳ ಕಾಲ ಗುಂಪಿನ ಮುಖ್ಯಸ್ಥರಾಗಿದ್ದರು..
ಕಳೆದ ವಾರ ಹಿಜ್ಬೊಲ್ಲಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನ್‌ನಲ್ಲಿ 700 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇಸ್ರೇಲ್ ಮಿಲಿಟರಿ ಹಿಜ್ಬೊಲ್ಲಾವನ್ನು ದುರ್ಬಲಗೊಳಿಸಲು ಮತ್ತು ಇಸ್ರೇಲಿ ಪ್ರದೇಶದ ಮೇಲೆ ತನ್ನ 11 ತಿಂಗಳು ಹಿಜ್ಬೊಲ್ಲಾ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಲು ವಾಗ್ದಾನ ಮಾಡಿದೆ.

ಪ್ರಮುಖ ಸುದ್ದಿ :-   1,40,000 ವರ್ಷಗಳಷ್ಟು ಹಳೆಯ ತಲೆಬುರುಡೆಯು ಆಧುನಿಕ ಮಾನವ- ನಿಯಾಂಡರ್ತಾಲ್ ಮಾನವನ ಮಿಶ್ರತಳಿಯ ಭಾಗವಾಗಿರಬಹುದು: ಅಧ್ಯಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement