ಇಸ್ರೇಲ್‌-ಹಮಾಸ್‌ ಯುದ್ಧ: ಹಮಾಸ್ ಸರ್ಕಾರದ ಮುಖ್ಯಸ್ಥ, ಇಬ್ಬರು ಉನ್ನತ ನಾಯಕರು ಸಾವು ; ಇಸ್ರೇಲ್ ಮಿಲಿಟರಿ

ಜೆರುಸಲೇಮ್: ಮೂರು ತಿಂಗಳ ಹಿಂದೆ ನಡೆದ ದಾಳಿಯಲ್ಲಿ ಗಾಜಾದಲ್ಲಿ ಮೂವರು ಹಿರಿಯ ಹಮಾಸ್ ನಾಯಕರು ಸಾವಿಗೀಡಾದ್ದಾರೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ. ಅಲ್ಲಿ ಸೇನೆಯು ಸುಮಾರು ಒಂದು ವರ್ಷದಿಂದ ಹಮಾಸ್‌ ಗುಂಪಿನೊಂದಿಗೆ ಹೋರಾಡುತ್ತಿದೆ.
ಇಸ್ರೇಲಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾವಿ ಮುಶ್ತಾಹಾ ಮತ್ತು ಹಮಾಸ್‌ನ ರಾಜಕೀಯ ಬ್ಯೂರೋದ ಭದ್ರತಾ ಖಾತೆ ಹೊಂದಿದ್ದ ಸಮೇಹ್ ಅಲ್-ಸಿರಾಜ್ ಮತ್ತು ಕಮಾಂಡರ್ ಸಮಿ ಔದೆ ಅವರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ.
“ಮುಶ್ತಾಹಾ ಹಮಾಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಇದು ಹಮಾಸ್‌ನ ಪಡೆಗಳ ನಿಯೋಜನೆಗೆ ಸಂಬಂಧಿಸಿದ ನಿರ್ಧಾರಗಳ ಮೇಲೆ ನೇರ ಪರಿಣಾಮ ಬೀರಿದೆ” ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಹಮಾಸ್‌ನ ಉನ್ನತ ನಾಯಕ ಯಾಹ್ಯಾ ಸಿನ್ವಾರ್‌ಗೆ ಮುಶ್ತಾಹಾ “ಬಲಗೈ” ಆಗಿದ್ದರು ಎಂದು ಇಸ್ರೇಲಿ ಮಿಲಿಟರಿ ಕರೆದಿದೆ. 2015 ರಲ್ಲಿ, ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಮುಶ್ತಾಹಾ ನನ್ನು “ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ” ಎಂದು ಹೆಸರಿಸಿತ್ತು.
ಯುರೋಪಿಯನ್ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ಮುಶ್ತಾಹಾ ನನ್ನು ಹಮಾಸ್‌ನ ಗಾಜಾ ಪಾಲಿಟ್‌ಬ್ಯೂರೋ ಸದಸ್ಯ ಎಂದು ವಿವರಿಸಿದೆ ಮತ್ತು ಅವರು ಅದರ ಹಣಕಾಸಿನ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದೆ.
ಸಿರಾಜ್ ಪಾಲಿಟ್‌ಬ್ಯೂರೋ ಸದಸ್ಯ ಎಂದು ಹೇಳಿದರೆ, ಔದೆಯನ್ನು ಗುಂಪಿನ ಆಂತರಿಕ ಭದ್ರತಾ ಏಜೆನ್ಸಿಯ ನಾಯಕ ಎಂದು ಹೇಳಲಾಗಿದೆ.

ಹಮಾಸ್ ನಾಶಮಾಡಲು ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯು ಅದರ ಹಲವಾರು ನಾಯಕರು ಮತ್ತು ಸಾವಿರಾರು ಹೋರಾಟಗಾರರನ್ನು ಕೊಲ್ಲುವ ಮೂಲಕ ಗುಂಪನ್ನು ತೀವ್ರವಾಗಿ ದುರ್ಬಲಗೊಳಿಸಿದೆ ಎಂದು ನಂಬಲಾಗಿದೆ, ಅದೇ ಸಮಯದಲ್ಲಿ ಗಾಜಾ ಭೂಪ್ರದೇಶವನ್ನು ಭಗ್ನಾವಶೇಷವನ್ನಾಗಿಯೂ ಮಾಡಿದೆ.
ಹಮಾಸ್‌ನ ಅಕ್ಟೋಬರ್ 7 ರ ದಾಳಿಯಿಂದ ಗಾಜಾ ಯುದ್ಧವು ಶುರುವಾಯಿತು, ಇದು ಇಸ್ರೇಲ್‌ನಲ್ಲಿ 1,205 ಜನರ ಸಾವಿಗೆ ಕಾರಣವಾಯಿತು. ಇದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಇಸ್ರೇಲ್‌ ಹೇಳಿದೆ.
ಇಸ್ರೇಲ್‌ನ ಪ್ರತೀಕಾರದ ಮಿಲಿಟರಿ ದಾಳಿಯಲ್ಲಿ ಗಾಜಾದಲ್ಲಿ ಕನಿಷ್ಠ 41,788 ಜನರು ಸಾವಿಗೀಡಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಹಮಾಸ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳಿವೆ.

ಪ್ರಮುಖ ಸುದ್ದಿ :-   ಯುದ್ಧ, ವಿನಾಶ, ವೈದ್ಯಕೀಯ ಅನ್ವೇಷಣೆ, ಏಲಿಯನ್ ಜೊತೆ ಮುಖಾಮುಖಿ.... ; 2025ಕ್ಕೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿಗಳು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement