ಆಹಾರದಲ್ಲಿ ವಿಷ ಬೆರೆಸಿ ತನ್ನ ಮನೆಯ 13 ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ 18 ​​ವರ್ಷದ ಹುಡುಗಿ…!

ಹೈದರಾಬಾದ್: ಆಗಸ್ಟ್‌ನಲ್ಲಿ ಖೈರ್‌ಪುರ ಜಿಲ್ಲೆಯಲ್ಲಿ ಕುಟುಂಬದ 13 ಜನರಿಗೆ ವಿಷ ಉಣಿಸಿ ಸಾಯಿಸಿದ ಭೀಕರ ಪ್ರಕರಣ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ಖೈರ್​ಪುರ್​ ಜಿಲ್ಲೆಯಲ್ಲಿ ನಡೆದಿದೆ.
ವಿಷ ಪ್ರಾಷನದಿಂದ ಹತ್ಯೆಗೀಡಾದ ದಂಪತಿಯ ಪುತ್ರಿಯಿಂದಲೇ ಈ ಭೀಕರ ಸಾಮೂಹಿಕ ಹತ್ಯಕಾಂಡ ನಡೆದಿದೆ. ಹತ್ಯೆಗೀಡಾದ ದಂಪತಿಯ 18 ​​ವರ್ಷದ ಮಗಳು ಮತ್ತು ಆಕೆಯ ಸೋದರ ಸಂಬಂಧಿಯನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ಬಾರಾಡಿ ಜತೋಯ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ತಾಲಿಬ್ ಹುಸೇನ್ ಜುನೆಜೊ ಮತ್ತು ಮಹಿಳಾ ಪೊಲೀಸ್ ಎಸ್‌ಎಚ್‌ಒ ರಾಜಿ ಶಾರ್ ತಿಳಿಸಿದ್ದಾರೆ.
“18 ​​ವರ್ಷದ ಶೈಸ್ತಾ ಬ್ರೋಹಿ [ಆರೋಪಿ] ತನ್ನ ತಂದೆಯ ಸೋದರಸಂಬಂಧಿ ಅಮೀರ್ ಬಕ್ಸ್ ಬ್ರೋಹಿಯನ್ನು [ಆರೋಪಿ] ಮದುವೆಯಾಗಲು ಬಯಸಿದ್ದಳು. ಆದರೆ ಆಕೆಯ ಪೋಷಕರು ಈ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರಿಂದ ಕೋಪಗೊಂಡ ಶೈಸ್ತಾ ತನ್ನ ಪ್ರೇಮಿ ಜೊತೆ ಸೇರಿಕೊಂಡು ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ನಮ್ಮಿಬ್ಬರ ಪ್ರೀತಿಗೆ ಎರಡೂ ಕುಟುಂಬದಿಂದ ವಿರೋಧವಿತ್ತು. ಹೀಗಾಗಿ ಈ ಕೃತ್ಯ ಎಸಗಿದೆವು ಎಂದು ಬಂಧಿತ ಆರೋಪಿಗಳಿಬ್ಬರು ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಮನೆಯವರು ಆಕೆಗೆ ತಮ್ಮ ಸಂಬಂಧಿಕರಾದ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಇದಕ್ಕಾಗಿ ಇಬ್ಬರು ಕೋಪಗೊಂಡಿದ್ದರು. ಶೈಸ್ತಾ ಮತ್ತು ಅಮೀರ್ ಬಕ್ಸ್ ಕುಟುಂಬದ ಹಬ್ಬದಂದು ಊಟದಲ್ಲಿ ವಿಷ ಬೆರೆಸಿ ಇಡೀ ಕುಟುಂಬವನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಸೆಪ್ಟೆಂಬರ್ 13 ರಂದು ಖೈರ್‌ಪುರದ ಎಸ್‌ಎಸ್‌ಪಿ ಡಾ.ಸಮೀವುಲ್ಲಾ ಸೂಮ್ರೊ ಅವರು ಮೃತರು ಸೇವಿಸಿದ ಊಟದಲ್ಲಿ ವಿಷ ಕಂಡುಬಂದಿರುವುದನ್ನು ಖಚಿತಪಡಿಸಿದ ನಂತರ ಪೊಲೀಸರಿಗೆ ಶೈಸ್ತಾ ಮೇಲೆ ಸಂಶಯ ಬಂತು. ಕುಟುಂಬದ ಏಕೈಕ ಸದಸ್ಯೆ ಶೈಸ್ತಾ ಮಾತ್ರ ಬದುಕುಳಿದಿರುವ ಕಾರಣ ಆಕೆಯ ಸೋದರಸಂಬಂಧಿ ಅಮೀರ್ ಬಕ್ಸ್ ಜೊತೆಗೆ ಆಕೆಯನ್ನು ಶಂಕಿತ ಎಂದು ಗುರುತಿಸಿ ಬಂಧಿಸಲಾಯಿತು ಎಂದು ಪೊಲೀಸ್‌ ಅಧಿಕಾರಿ ಜುನೆಜೊ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ʼಕ್ರಿಮಿನಲ್‌ʼ ಎಂದು ಕರೆದ ನಂತರ ವರದಿಗಾರನನ್ನು ಪತ್ರಿಕಾಗೋಷ್ಠಿಯಿಂದ ಹೊರಗೆ ಎಳೆದೊಯ್ದ ಭದ್ರತಾ ಸಿಬ್ಬಂದಿ

ತಮ್ಮ ಮನೆಗಳಿಂದ ಪರಾರಿಯಾಗಿದ್ದ ಶೈಸ್ತಾ ಮತ್ತು ಅಮೀರ್ ಬಕ್ಸ್ ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಅವರನ್ನು ಬಂಧಿಸಲಾಯಿತು ಮತ್ತು ವಿಚಾರಣೆ ವೇಳೆ ಶೈಸ್ತಾ ಘೋರ ಕೊಲೆಗಳ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.
ಶೈಸ್ತಾ, ಪೊಲೀಸರ ಪ್ರಕಾರ, ಅಮೀರ್ ಬಕ್ಸ್ ವಿಷ ತಂದಿದ್ದಾನೆ ಮತ್ತು ಅದನ್ನು ತಮ್ಮ ಆಹಾರದಲ್ಲಿ ಬೆರೆಸಿ ಕೊಡುವಂತೆ ತಿಳಿಸಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಬಳಿಕ ಯುವತಿ ಆ ವಿಷವನ್ನು ಬ್ರೆಡ್ ಮಾಡಲು ಬೇಯಿಸಿದ್ದ ಗೋಧಿ ಹಿಟ್ಟಿನಲ್ಲಿ ಬೆರೆಸಿದ್ದಾಳೆ. ಇದು ಇಡೀ ಕುಟುಂಬದ ಸಾವಿಗೆ ಕಾರಣವಾಯಿತು ಎಂದು ಶೈಸ್ತಾ ಭಯಾನಕ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ.
ಗುಲ್ ಬೇಗ್ ಬ್ರೋಹಿ, ಅವರ ಪತ್ನಿ ಗುಲ್ಜಾದಿ ಬ್ರೋಹಿ, ಫೆಹ್ಮಿದಾ, ಹಾಜಿಯಾನಿ, ಮರ್ಯಮ್, ಗಂಜ್ ಮತ್ತು ಸೋನಿಯಾ ಸೇರಿದಂತೆ ಅವರ ಐವರು ಪುತ್ರಿಯರು ಮತ್ತು ಮೂವರು ಪುತ್ರರಾದ ಮಂಜೂರ್, ದಿಲ್ಬರ್ ಮತ್ತು ದಿಲ್ದಾರ್ ಹಾಗೂ ಮಗು ಸೇರಿದಂತೆ ಇತರ ಮೂವರು ಸಂಬಂಧಿಕರು ವಿಷ ಸೇವಿಸಿ ಸಾವಿಗೀಡಾಗಿದ್ದಾರೆ. ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 18 ರಿಂದ ಆರಂಭವಾದ ಸಾವುಗಳ ಸರಣಿ ಒಂದು ವಾರದ ಅವಧಿಯಲ್ಲಿ ಸಂಭವಿಸಿವೆ. ಹಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಹೆಚ್ಚಿನ ಮಕ್ಕಳ ವಯಸ್ಸು 4 ರಿಂದ 20 ವರ್ಷ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ʼಕ್ರಿಮಿನಲ್‌ʼ ಎಂದು ಕರೆದ ನಂತರ ವರದಿಗಾರನನ್ನು ಪತ್ರಿಕಾಗೋಷ್ಠಿಯಿಂದ ಹೊರಗೆ ಎಳೆದೊಯ್ದ ಭದ್ರತಾ ಸಿಬ್ಬಂದಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement