ವೀಡಿಯೊಗಳು..| ಪ್ರತೀಕಾರದ ದಾಳಿಯಲ್ಲಿ ಇರಾನ್‌ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ಇಸ್ರೇಲ್ ; ಟೆಹ್ರಾನ್ ಸುತ್ತಮುತ್ತ ದೊಡ್ಡ ಸ್ಫೋಟಗಳು

ದುಬೈ: ಭಾರೀ ಶಸ್ತ್ರಸಜ್ಜಿತ ಪ್ರತಿಸ್ಪರ್ಧಿಗಳ ನಡುವೆ ಹೆಚ್ಚುತ್ತಿರುವ ಸಂಘರ್ಷದ ಇತ್ತೀಚಿನ ಬೆಳವಣಿಗೆಯಲ್ಲಿ ಕಳೆದ ಅಕ್ಟೋಬರ್ 1 ರಂದು ಇರಾನ್‌ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ.
ದಾಳಿಯಿಂದಾದ ಸಾವು ನೋವಿನ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಇರಾನ್‌ನಲ್ಲಿನ ಮಿಲಿಟರಿ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF), ಹೇಳಿಕೆಯಲ್ಲಿ, “ಇಸ್ರೇಲ್ ದೇಶದ ವಿರುದ್ಧ ಇರಾನ್‌ನಲ್ಲಿನ ಆಡಳಿತದಿಂದ ತಿಂಗಳುಗಳ ನಿರಂತರ ದಾಳಿಗಳಿಗೆ ಪ್ರತಿಕ್ರಿಯೆಯಾಗಿ – ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನಲ್ಲಿನ ಮಿಲಿಟರಿ ನೆಲೆಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸುತ್ತಿದೆ” ಎಂದು ಹೇಳಿದೆ.

“ಇರಾನ್ ನೆಲದಿಂದ ನೇರ ದಾಳಿ ಸೇರಿದಂತೆ ಏಳು ಕಡೆಗಳಿಂದ ಇರಾನ್‌ನಲ್ಲಿನ ಆಡಳಿತ ಮತ್ತು ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇಸ್ರೇಲ್‌ನ ಮೇಲೆ ಪಟ್ಟುಬಿಡದೆ ದಾಳಿ ಮಾಡುತ್ತಿವೆ. ಪ್ರಪಂಚದ ಇತರ ಸಾರ್ವಭೌಮ ರಾಷ್ಟ್ರಗಳಂತೆ, ಇಸ್ರೇಲ್‌ ಇದಕ್ಕೆ ಪ್ರತಿಕ್ರಿಯಿಸುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ. ನಮ್ಮ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ. ಇಸ್ರೇಲ್ ದೇಶ ಮತ್ತು ಇಸ್ರೇಲ್ ಜನರನ್ನು ರಕ್ಷಿಸಲು ನಾವು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಮೂರು ಅಲೆಗಳ ದಾಳಿಯ ನಂತರ, ಇರಾನ್ ವಿರುದ್ಧದ ತನ್ನ ವೈಮಾನಿಕ ದಾಳಿಗಳು ಮುಗಿದಿವೆ ಎಂದು ಇಸ್ರೇಲಿ ಮಿಲಿಟರಿ ದಿನದ ನಂತರ ದೃಢಪಡಿಸಿತು.

ಐಡಿಎಫ್‌ (IDF) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು, ಇಸ್ರೇಲ್ ರಕ್ಷಣಾ ಪಡೆಗಳು ತನ್ನ ಧ್ಯೇಯವನ್ನು ಪೂರೈಸಿದೆ ಎಂದು ಅವರು ಹೇಳಿದರು. ಪ್ರತೀಕಾರದ ಸಂದರ್ಭದಲ್ಲಿ ಹೆಚ್ಚಿನ ದಾಳಿಗಳ ಎಚ್ಚರಿಕೆಯನ್ನೂ ನೀಡಿದ್ದಾರೆ. “ಇರಾನ್‌ನಲ್ಲಿನ ಆಡಳಿತವು ಹೊಸದಾಗಿ ಮತ್ತೆ ದಾಳಿ ಮಾಡುವ ತಪ್ಪನ್ನು ಮಾಡಿದರೆ, ನಾವು ಇದಕ್ಕೆ ಉತ್ತರಿಸಲು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಸಂದೇಶವು ಸ್ಪಷ್ಟವಾಗಿದೆ ; ಇಸ್ರೇಲಿಗೆ ಬೆದರಿಕೆ ಹಾಕುವ ಮತ್ತು ಪ್ರದೇಶವನ್ನು ಸಂಘರ್ಷದ ಉಲ್ಬಣಕ್ಕೆ ಕೊಂಡೊಯ್ಯಲು ಬಯಸುವ ಎಲ್ಲರೂ – ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಹೇಳಿದರು.
ಇಸ್ರೇಲಿ ದಾಳಿಗಳು ಇಲಾಮ್, ಖುಜೆಸ್ತಾನ್ ಮತ್ತು ಟೆಹ್ರಾನ್ ಪ್ರಾಂತ್ಯಗಳಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂಡು “ಸೀಮಿತ ಹಾನಿಯನ್ನು” ಉಂಟುಮಾಡಿದೆ ಎಂದು ಇರಾನ್ ಹೇಳಿದೆ.

https://twitter.com/i/status/1849989640612167940

ಇರಾನಿನ ಮಾಧ್ಯಮಗಳು ರಾಜಧಾನಿಯಲ್ಲಿ ಮತ್ತು ಹತ್ತಿರದ ಸೇನಾ ನೆಲೆಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಅನೇಕ ಸ್ಫೋಟಗಳು ಸಂಭವಿಸಿದೆ. ಎಂದು ಹೇಳಿವೆ. ಏತನ್ಮಧ್ಯೆ, ಇರಾನ್ ಮಿಲಿಟರಿಯು “ಜಿಯೋನಿಸ್ಟ್ ಆಡಳಿತದಿಂದ ಪಶ್ಚಿಮ ಮತ್ತು ನೈಋತ್ಯ ಟೆಹ್ರಾನ್‌ನಲ್ಲಿನ ಮಿಲಿಟರಿ ನೆಲೆಗಳನ್ನು” ಗುರಿಯಾಗಿಟ್ಟುಕೊಂಡು ನಡೆಸಿದ ಹಲವಾರು ರಾಕೆಟ್‌ ಸ್ಪೋಟಕಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿವೆ ಎಂದು ಹೇಳಿಕೊಂಡಿದೆ.
ಅಕ್ಟೋಬರ್ 7, 2023 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ, ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಗಾಜಾ ಮೂಲದ ಪ್ಯಾಲೇಸ್ತಿನಿಯನ್ ಉಗ್ರಗಾಮಿ ಗುಂಪು ಹಮಾಸ್‌ಗೆ ಬೆಂಬಲವಾಗಿ ಇರಾನ್‌ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿಗಳು ಸೇರಿಕೊಂಡರು. ಏತನ್ಮಧ್ಯೆ, ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಎಂದು ಹೇಳಿದೆ.

https://twitter.com/i/status/1849993188758393056 https://twitter.com/i/status/1850016881924526179

ದಾಳಿಗಳು ಇಂಧನ ಮೂಲಸೌಕರ್ಯ ಅಥವಾ ಪರಮಾಣು ಸೌಲಭ್ಯಗಳನ್ನು ಒಳಗೊಂಡಿಲ್ಲ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಸ್ರೇಲ್‌ನ ಪ್ರಮುಖ ಬೆಂಬಲಿಗ ಮತ್ತು ಶಸ್ತ್ರಾಸ್ತ್ರ ಪೂರೈಕೆದಾರ ಅಮೆರಿಕವು ಇರಾನಿನ ಪರಮಾಣು ತಾಣಗಳು ಹಾಗೂ ಇರಾನ್‌ನ ತೈಲ ಕ್ಷೇತ್ರಗಳ ಮೇಲಿನ ದಾಳಿಗಳನ್ನು ಬೆಂಬಲಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಸಿದ್ದಾರೆ.
ಅಕ್ಟೋಬರ್ 1 ರಂದು ಇರಾನ್ ನಡೆಸಿದ ಬ್ಯಾಲಿಸ್ಟಿಕ್-ಕ್ಷಿಪಣಿ ವಾಗ್ದಾಳಿಗೆ ಇಸ್ರೇಲ್‌ ಪ್ರತೀಕಾರದ ದಾಳಿ ನಡೆಸಿರುವುದು ಮಧ್ಯಪ್ರಾಚ್ಯದಲ್ಲಿ ಸಂಘರ್ಷವು ಮತ್ತೆ ಉಲ್ಣಗೊಳ್ಳುವ ಲಕ್ಷಗಳು ಗೋಚರಿಸುವಂತೆ ಮಾಡಿದೆ. ಇರಾನ್‌ನಿಂದ ಸುಮಾರು 200 ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಲಾಗಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement