ಹೈದರಾಬಾದ್: ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಡಿ. ವ್ಯಾನ್ಸ್ ಅವರು ಭಾರತದ ಅಳಿಯ. ಅವರ ಪತ್ನಿ ಪತ್ನಿ ಉಷಾ ಚಿಲುಕುರಿ ಅವರು ಆಂಧ್ರಪ್ರದೇಶದ ಮೂಲದವರು. ಅವರ ತಂದೆ-ತಾಯಿ ಆಂಧ್ರಪ್ರದೇಶದವರು ಹಾಗೂ ಆಂಧ್ರಪ್ರದೇಶಕ್ಕೆ ವಲಸೆ ಹೋದವರು.
ಅವರು 2014 ರಲ್ಲಿ ಜೆ.ಡಿ. ವ್ಯಾನ್ಸ್ ಜೊತೆ ಕೆಂಟುಕಿಯಲ್ಲಿ ವಿವಾಹವಾದರು ಮತ್ತು ಪ್ರತ್ಯೇಕ ಸಮಾರಂಭದಲ್ಲಿ ಹಿಂದೂ ಪದ್ಧತಿಯಂತೆ ಕಾರ್ಯಕ್ರಮ ನಡೆಯಿತು. ದಂಪತಿಗೆ ಇವಾನ್ (6), ವಿವೇಕ (4), ಮತ್ತು ಮಿರಾಬೆಲ್ (2) ಎಂಬ ಮೂವರು ಮಕ್ಕಳಿದ್ದಾರೆ. ಉಷಾ ಚಿಲುಕುರಿ ಕುಟುಂಬದ ಮೂಲ ಪಶ್ಚಿಮ ಗೋದಾವರಿ ಜಿಲ್ಲೆಯ ಸಣ್ಣ ಗ್ರಾಮ ವಡ್ಲೂರು ಗ್ರಾಮ. ಉಷಾ ಅವರ ಅಪ್ಪ ಚಿಲುಕುರಿ ರಾಧಾಕೃಷ್ಣ ಮತ್ತು ಅಮ್ಮ ಲಕ್ಷ್ಮಿ ಅವರು 1980ರಲ್ಲಿ ಅಮೆರಿಕಕ್ಕೆ ವಲಸೆ ಹೋದರು. ಉಷಾ ಅವರ ತಂದೆ ಎಂಜಿನಿಯರ್ ಹಾಗೂ ತಾಯಿ ಜೀವವಿಜ್ಞಾನಿ. ಉಷಾ ಅವರ ಸಂಬಂಧಿ, 96 ವರ್ಷ ವಯಸ್ಸಿನ ಪ್ರೊ. ಚಿಲುಕುರಿ ಶಾಂತಮ್ಮ ಅವರು ಆಂಧ್ರಪ್ರದೇಶದ ವಿಜಯನಗರಂನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಭೌತವಿಜ್ಞಾನ ಬೋಧಿಸುತ್ತಿದ್ದರು. ಶಾಂತಮ್ಮನವರ ಪತಿ ಸುಬ್ರಹ್ಮಣ್ಯ ಶಾಸ್ತ್ರಿ ಅವರ ಸಹೋದರ ರಾಮ ಶಾಸ್ತ್ರಿ ಅವರ ಮೊಮ್ಮಗಳೇ ಈ ಉಷಾ.
ವಡ್ಲೂರಿನಲ್ಲಿ ಈಗ ಚಿಲುಕುರಿ ಕುಟುಂಬದ ಯಾರೂ ಇಲ್ಲ. ಕುಟುಂಬಕ್ಕೆ ಸೇರಿದ ಮನೆಯಲ್ಲಿ ಸಣ್ಣ ದೇವಸ್ಥಾನವೊಂದಿದೆ. ಉಷಾ ಅವರು ಯಾವತ್ತೂ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಅವರು ವಿಶಾಖಪಟ್ಟಣಂದಲ್ಲಿ ಇದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು, ವ್ಯಾನ್ಸ್ ಅವರನ್ನು ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ನಂತರದಲ್ಲಿ, ವ್ಯಾನ್ಸ್ ಮತ್ತು ಉಷಾ ಅವರ ವಿವಾಹದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.
ಅಮೆರಿಕದ ಸ್ಯಾನ್ ಡಿಯಾಗೊ ನಗರದ ಹೊರವಲಯದಲ್ಲಿ ಬೆಳೆದ ಉಷಾ ಚಿಲಕುರಿ ಅವರು 1986 ರಲ್ಲಿ ಜನಿಸಿದರು. ಮೌಂಟ್ ಕಾರ್ಮೆಲ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು ಕಾನೂನು ಪದವಿ ಪಡೆದು, ವಕೀಲರಾದರು.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಅವರು ಯೇಲ್ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಫಿಲಾಸಫಿ ಪದವಿ ಪಡೆದಿದ್ದಾರೆ. ಉಷಾ ಅವರು ಜೆಡಿ ವ್ಯಾನ್ಸ್ ಅವರನ್ನು ಯೇಲ್ ಲಾ ಸ್ಕೂಲ್‌ನಲ್ಲಿ ಭೇಟಿಯಾದರು ಮತ್ತು 2014 ರಲ್ಲಿ ಹಿಂದೂ ಆಚರಣೆ ಒಳಗೊಂಡ ಸಮಾರಂಭದಲ್ಲಿ ವಿವಾಹವಾದರು. ಒಟ್ಟಿಗೆ, ಅವರಿಗೆ ಮೂರು ಮಕ್ಕಳಿದ್ದಾರೆ. ಜೆ.ಡಿ. ವ್ಯಾನ್ಸ್ ಅವರ ರಾಜಕೀಯ ವೃತ್ತಿಜೀವನದುದ್ದಕ್ಕೂ, ಉಷಾ ಅವರು ಬೆಂಬಲ ನೀಡಿದ್ದಾರೆ. ಅವರ ಓಹಿಯೋ ಸೆನೆಟ್ ಪ್ರಚಾರದ ಸಮಯದಲ್ಲಿ ಆಗಾಗ್ಗೆ ಅವರೊಂದಿಗೆ ಕಾಣಿಸಿಕೊಂಡರು. ಅವರು ಸ್ಯಾನ್ ಫ್ರಾನ್ಸಿಸ್ಕೋದ ಸಂಸ್ಥೆಯೊಂದರಲ್ಲಿ ಕಾರ್ಪೊರೇಟ್ ವ್ಯಾಜ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಹೊರಬೀಳುತ್ತಿದ್ದಂತೆ, ಉಷಾ ಅವರತಂದೆಯ ಊರಾದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ವಡ್ಲೂರು ಗ್ರಾಮದಲ್ಲಿ ಅವರ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಉಷಾ ವಾನ್ಸ್ ವಡ್ಲೂರು ಮೂಲದವರು ಎಂದು ನಾವು ಹೆಮ್ಮೆಪಡುತ್ತೇವೆ” ಎಂದು ಗ್ರಾಮದ ನಿವಾಸಿ ರಮಣ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ