ಭಾರತದ ವಿದೇಶಾಂಗ ಸಚಿವ ಜೈಶಂಕರ ಪತ್ರಿಕಾಗೋಷ್ಠಿ-ಸಂದರ್ಶನ ಪ್ರಸಾರ ಮಾಡಿದ್ದಕ್ಕೆ ಆಸ್ಟ್ರೇಲಿಯಾದ ಮಾಧ್ಯಮ ನಿರ್ಬಂಧಿಸಿದ ಕೆನಡಾ…!

ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಪತ್ರಿಕಾಗೋಷ್ಠಿ ಹಾಗೂ ಎಸ್.ಜೈಶಂಕರ ಅವರ ಸಂದರ್ಶನ ಪ್ರಸಾರ ಮಾಡಿದ ಕೆಲವೇ ಗಂಟೆಗಳ ನಂತರ ಕೆನಡಾದಲ್ಲಿ ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆ ಆಸ್ಟ್ರೇಲಿಯಾ ಟುಡೇಯನ್ನು ಕೆನಡಾದಲ್ಲಿ ನಿಷೇಧಿಸಲಾಗಿದೆ ಎಂದು ಭಾರತ ಗುರುವಾರ ಹೇಳಿದೆ.
.ವಿದೇಶಾಂಗ ಸಚಿವಾಲಯ (MEA)ದ ವಕ್ತಾರ ರಣಧೀರ ಜೈಸ್ವಾಲ್ ಅವರು ಕೆನಡಾದಲ್ಲಿ ಆಸ್ಟ್ರೇಲಿಯಾ ಮಾಧ್ಯಮವನ್ನು ನಿಷೇಧಿಸಿದ್ದಕ್ಕಾಗಿ ಟೀಕಿಸಿದ್ದಾರೆ. ಈ ಕ್ರಮವು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆನಡಾದ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಕೆನಡಾ ಸರ್ಕಾರವು ʼಆಸ್ಟ್ರೇಲಿಯಾ ಟುಡೆʼಯನ್ನು ನಿಷೇಧಿಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಇದು ಪ್ರಮುಖ ಡಯಾಸ್ಪೊರಾ ಔಟ್ಲೆಟ್. ಈ ಮಾಧ್ಯಮ ಔಟ್ಲೆಟ್ ಅನ್ನು ನಿರ್ಬಂಧಿಸಲಾಗಿದೆ ಮತ್ತು ಕೆನಡಾದಲ್ಲಿ ವೀಕ್ಷಕರಿಗೆ ಇನ್ನು ಮುಂದೆ ಇದು ಲಭ್ಯವಿರುವುದಿಲ್ಲ. ಇದಕ್ಕೆ ಕಾರಣ ಈ ಮಾಧ್ಯಮವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಹಾಗೂ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಪತ್ರಿಕಾಗೋಷ್ಠಿ ಪ್ರಸಾರ ಮಾಡಿರುವುದು ಎಂದು ಅವರು ಹೇಳಿದ್ದಾರೆ.

“ಆಸ್ಟ್ರೇಲಿಯಾ ಟುಡೆʼಯ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳು, ಔಟ್‌ಲೆಟ್‌ನ ಪುಟಗಳನ್ನು ನಿರ್ಬಂಧಿಸಲಾಗಿದೆ. ಇದು ಕೆನಡಾದಲ್ಲಿ ವೀಕ್ಷಕರಿಗೆ ಲಭ್ಯವಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ವಿದೇಶಾಂಗ ಸಚಿವ ಡಾ ಎಸ್. ಜೈಶಂಕರ ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಜೊತೆಗಿನ ಮಾತುಕತೆಯ ವಿವರಗಳ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿದ ಕೇವಲ ಒಂದು ಗಂಟೆ ಅಥವಾ ಕೆಲವು ಗಂಟೆಗಳ ನಂತರ ಮಾಧ್ಯಮ ಔಟ್‌ಲೆಟ್‌ ʼಆಸ್ಟ್ರೇಲಿಯಾ ಟುಡೆʼಯನ್ನು ನಿಷೇಧಿಸಲಾಗಿದೆ. ನಮಗೆ ಆಶ್ಚರ್ಯವಾಗುವಂತಹ ಸಂಗತಿ. ಇವುಗಳು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆನಡಾದ ಬೂಟಾಟಿಕೆಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.
ವಿದೇಶಾಂಗ ಸಚಿವಾಲಯ (MEA) ವಕ್ತಾರರು ಸಚಿವ ಜೈಶಂಕರ ಅವರು ಯಾವುದೇ ಪುರಾವೆಗಳಿಲ್ಲದೆ ಆರೋಪಗಳನ್ನು ಹೊರಿಸುವ ಕೆನಡಾದ ಮಾದರಿಯನ್ನು ಒಳಗೊಂಡಿರುವ ಮೂರು ವಿಷಯಗಳ ಬಗ್ಗೆ ವಿದೇಶಾಂಗ ಸಚಿವರು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು ಎಂದು ಜೈಸ್ವಾಲ್‌ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| 10 ರೂ.ಗಳ ವಿಷಯಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಬಸ್ ಕಂಡಕ್ಟರ್...!

ವಿದೇಶಾಂಗ ಸಚಿವರಾದ ಜೈ ಶಂಕರ ಅವರು ತನ್ನ ಮಾಧ್ಯಮದವರೊಂದಿಗೆ ಮಾತನಾಡುವಾಗ ಮೂರು ವಿಷಯಗಳ ಬಗ್ಗೆ ಮಾತನಾಡಿರುವುದನ್ನು ನೀವು ನೋಡಿದ್ದೀರಿ. ಒಂದು ಕೆನಡಾ ಆರೋಪಗಳನ್ನು ಮಾಡುತ್ತಿದೆ ಮತ್ತು ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲದೆ ಮಾಡುತ್ತಿದೆ. ಎರಡನೆಯದು, ಕೆನಡಾದಲ್ಲಿ ನಡೆಯುತ್ತಿರುವ ಭಾರತೀಯ ರಾಜತಾಂತ್ರಿಕರ ಕಣ್ಗಾವಲು. ಸ್ವೀಕಾರಾರ್ಹವಲ್ಲದ ಮೂರನೇ ವಿಷಯವೆಂದರೆ ಕೆನಡಾದಲ್ಲಿ ಭಾರತ ವಿರೋಧಿ ಅಂಶಗಳಿಗೆ ನೀಡಲಾದ ರಾಜಕೀಯ ನೆಲೆ. ಈ ಮೂರು ವಿಷಯಗಳ ಬಗ್ಗೆ ಜೈಶಂಕರ ಅವರು ಮಾತನಾಡಿದ್ದಾರೆ. ಆದ್ದರಿಂದ ನೀವು ಆಸ್ಟ್ರೇಲಿಯಾ ಟುಡೆ ಚಾನೆಲ್ ಅನ್ನು ಕೆನಡಾದಲ್ಲಿಏಕೆ ನಿರ್ಬಂಧಿಸಲಾಗಿದೆ ಎಂದು ತೀರ್ಮಾನಿಸಬಹುದು ಎಂದು ಜೈಸ್ವಾಲ್‌ ಹೇಳಿದರು.

ಆಸ್ಟ್ರೇಲಿಯಕ್ಕೆ ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಜೈಶಂಕರ ಅವರು ಮಂಗಳವಾರ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಇತ್ತೀಚೆಗೆ ನಡೆದ ದಾಳಿಯ ಬಗ್ಗೆ ಕೆನಡಾವನ್ನು ತರಾಟೆಗೆ ತೆಗೆದುಕೊಂಡರು. ಕೆನಡಾ ಅಕ್ರಮವಾಗಿ ಭಾರತೀಯ ರಾಜತಾಂತ್ರಿಕರನ್ನು ಕಣ್ಗಾವಲಿನಲ್ಲಿ ಇರಿಸಿದೆ ಎಂಬ ಭಾರತದ ಆರೋಪದ ಬಗ್ಗೆಯೂ ಅವರು ಮಾತನಾಡಿದರು.
ಕೆನಡಾ ಭದ್ರತೆ ನೀಡದ ಕಾರಣ ಟೊರೊಂಟೊದಲ್ಲಿ ಕೆಲವು ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲಾಗಿದೆ ಎಂದು ಜೈಸ್ವಾಲ್ ದೃಢಪಡಿಸಿದರು. ನವೆಂಬರ್ 3 ರಂದು ಕಾನ್ಸುಲರ್ ಕ್ಯಾಂಪ್ ನಡೆಯುತ್ತಿದ್ದ ಬ್ರಾಂಪ್ಟನ್‌ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದ ಕೆಲವು ದಿನಗಳ ನಂತರ ಈ ಪ್ರಕಟಣೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ “ಹೇಡಿತನದ ಪ್ರಯತ್ನ” ಎಂದು ಟೀಕಿಸಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಕೆನಡಾ “ಆಸಕ್ತಿಯ ವ್ಯಕ್ತಿಗಳು, ಸಂಚಿನೊಂದಿಗೆ ಅವರ ನಂಟಿದೆ” ಎಂದು ಲೇಬಲ್ ಮಾಡಿದ ನಂತರ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕಳೆದ ತಿಂಗಳಿನಿಂದ ಸಾರ್ವಕಾಲಿಕ ಕಡಿಮೆಯಾಗಿದೆ.

ಪ್ರಮುಖ ಸುದ್ದಿ :-   ಈ ಬಗ್ಗೆ ಎಚ್ಚರ | ಅಂಗಡಿಗಳಲ್ಲಿದ್ದ ಕ್ಯೂಆರ್‌ (QR) ಕೋಡ್‌ ಅನ್ನು ರಾತ್ರೋರಾತ್ರಿ ಬದಲಾಯಿಸಿದ ವಂಚಕರು...! ಗ್ರಾಹಕರು ಪಾವತಿಸಿದ ಹಣ ವಂಚಕರ ಖಾತೆಗೆ..!!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement