ವೀಡಿಯೊ..| ಕುದುರೆ ಮೇಲೆ ಮೆರವಣಿಗೆಯಲ್ಲಿ ಹೊರಟಿದ್ದ ವರನ ಕೊರಳಲ್ಲಿದ್ದ ನೋಟಿನ ಹಾರ ಕದ್ದೊಯ್ದ ಮಿನಿಟ್ರಕ್‌ ಚಾಲಕ ; ಸಿನಿಮೀಯ ರೀತಿ ಬೆನ್ನಟ್ಟಿ ಹಿಡಿದ ಮದುಮಗ..!

ಸಿನೆಮಾದಲ್ಲಿ ಮಾತ್ರ ಕಾಣಬಹುದಾದ ದೃಶ್ಯದಂತೆ  ಉತ್ತರ ಪ್ರದೇಶದ ಮೀರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಕುದುರೆ ಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರನೊಬ್ಬನಿಗೆ ಹಾಕಿದ್ದ ನೋಟುಗಳ ಮಾಲೆಯನ್ನು ದೋಚಿರುವ ಘಟನೆ ವರದಿಯಾಗಿದ್ದು, ನಂತರ ಮಿನಿಟ್ರಕ್‌ನಲ್ಲಿ ಸಾಗುತ್ತಿದ್ದ ಕಳ್ಳನನ್ನು ವರನೇ ಬೆನ್ನಟ್ಟಿ ಹಿಡಿದಿದ್ದಾನೆ…! ಇದರಿಂದ ಮದುವೆ ಮೆರವಣಿಗೆಯಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು.
ಉತ್ತರ ಪ್ರದೇಶದ ಮೀರತ್‌ನಲ್ಲಿ ವರನಿಗೆ ಹಾಕಿದ್ದ ನೋಟುಗಳ ಹಾರ ಕಿತ್ತುಕೊಂಡು ಮಿನಿ ಟ್ರಕ್‌ನಲ್ಲಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಲು ವರನೇ ಮದುವೆ ಮೆರವಣಿಗೆ ಅಷ್ಟಕ್ಕೆ ಬಿಟ್ಟು ಬೈಕ್‌ನಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬೈಕ್‌ ಒಂದರ ಮೇಲೆ ಹಿಂಬಾಲಿಸಿದ್ದ ಎಂದು ವರದಿಯಾಗಿದೆ. ಸಂಪ್ರದಾಯದಂತೆ ವರನು ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾಗ ಹೆದ್ದಾರಿಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳ ಪ್ರಕಾರ, ಮದುವೆ ಮೆರವಣಿಗೆ ನಡೆಯುತ್ತಿದ್ದ ರಸ್ತೆ ಮೂಲಕ ಮಿನಿ ಟ್ರಕ್‌ ಹಾದು ಹೋಗುತ್ತಿದ್ದಾಗ ಚಾಲಕ ವರನ ಮೈಮೇಲಿದ್ದ ಹಣದ ಹಾರವನ್ನು ಹರಿದುಕೊಂಡು ಟ್ರಕ್‌ ಅನ್ನು ಓಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಮುಂದೆ ಏನು ನಡೆಯಬಹುದು ಎಂಬುದನ್ನು ಮಿನಿ ಟ್ರಕ್‌ ಚಾಲಕ ನಿರೀಕ್ಷಿಸಿರಲಿಲ್ಲ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೂದು ಬಣ್ಣದ ಸೂಟ್ ಮತ್ತು ಕೆಂಪು ಪೇಟ ಧರಿಸಿದ್ದ ವರ ದಾರಿಯಲ್ಲಿ ಹೋಗುತ್ತಿದ್ದ ಬೈಕ್‌ ಮೇಲೆ ಹೆದ್ದಾರಿಯಲ್ಲಿ ಮಿನಿ ಟ್ರಕ್ ಅನ್ನು ಹಿಂಬಾಲಿಸಿದ್ದಾನೆ. ಒಂದು ಹಂತದಲ್ಲಿ, ವರ ಬೈಕ್‌ನಿಂದ ಜಿಗಿದು ಮಿನಿ-ಟ್ರಕ್‌ಗೆ ಏರಲು ಪ್ರಯತ್ನಿಸುತ್ತಾನೆ. ವೀಡಿಯೊದಲ್ಲಿ, ವರನು ಮಿನಿ ಟ್ರಕ್‌ ಅನ್ನು ಕಿಟಕಿ ಮೂಲಕ ಪ್ರವೇಶಿಸಿ ನಂತರ ವಾಹನ ನಿಲ್ಲಿಸುವುದನ್ನು ಕಾಣಬಹುದು. ಇಂತಹ ದೃಶ್ಯಗಳನ್ನು ಸಿನೆಮಾದ ಹೊರತಾಗಿ ಬೇರೆಡೆ ಕಾಣುವುದು ಅಪರೂಪವಾಗಿದೆ.

ವರ ಮಿನಿಟ್ರಕ್‌ ಒಳಹೊಕ್ಕ ಕೆಲವು ಸೆಕೆಂಡುಗಳ ನಂತರ ಚಾಲಕನನ್ನು ವಾಹನದಿಂದ ಹೊರಕ್ಕೆ ದೂಡಿದ್ದಾನೆ. ಮತ್ತು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮತ್ತಿಬ್ಬರು ವ್ಯಕ್ತಿಗಳು ಸೇರಿ ಮೂವರು ಚಾಲಕನಿಗೆ ಥಳಿಸಿದ್ದಾರೆ. ನಂತರ ಬೈಕ್‌ನಲ್ಲಿ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಮತ್ತೊಬ್ಬ ವ್ಯಕ್ತಿಯೂ ಇವರೊಂದಿಗೆ ಸೇರಿಕೊಂಡು ಚಾಲಕನಿಗೆ ಥಳಿಸಿದ್ದಾನೆ. ಚಾಲಕನು ತನ್ನನ್ನು ಬಿಡುವಂತೆ ವರನಿಗೆ ಮನವಿ ಮಾಡುವುದನ್ನು ನೋಡಬಹುದು.
ತನಗೆ ಕಳ್ಳತನ ಮಾಡುವ ಉದ್ದೇಶವಿರಲಿಲ್ಲ, ದಾರಿಯಲ್ಲಿ ಬರುವಾಗ ಆಕಸ್ಮಾತ್‌ ಆಗಿ ನೋಟಿನ ಹಾರ ಕೈಗೆ ಬಂದಿದ್ದಾಗಿ ಚಾಲಕನು ಹೇಳಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಹಾನಿಯಾದ ತೂಗು ಸೇತುವೆ ಮೇಲೆ ಭೋರ್ಗರೆವ ನದಿ ದಾಟಲು ಹುಚ್ಚು ಸಾಹಸ ಮಾಡಿದ ವ್ಯಕ್ತಿ : ಮೈ ಜುಂ ಎನ್ನುವ ದೃಶ್ಯದ ವೀಡಿಯೊ ವೈರಲ್‌

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement