ಅದ್ಭುತ ವೀಡಿಯೊ..| ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತು ಕಾರನ್ನು ನಿಲ್ಲಿಸಿದ ಹಸುಗಳ ಗುಂಪು…!

ರಾಯಗಢ: ಛತ್ತೀಸ್‌ಗಢ ರಾಜ್ಯದ ರಾಯಗಢದ ಜನನಿಬಿಡ ರಸ್ತೆಯ ಮಧ್ಯೆ ಕಾರಿನಡಿ ಸಿಲುಕಿದ್ದ ಕರುವನ್ನು ರಕ್ಷಿಸಲು ಗೋವುಗಳ ಹಿಂಡು ಕಾರಿಗೆ ಅಡ್ಡಲಾಗಿ ನಿಂತು ಅದನ್ನು ತಡೆದು ನಿಲ್ಲಿಸಿದ ಅಸಮಾನ್ಯ ಘಟನೆ ನಡೆದಿದೆ. ಸಾಮಾನ್ಯವಾಗಿ ಸೌಮ್ಯವಾಗಿರುವ ಗೋವುಗಳ ಹಿಂಡು ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರಿಗೆ ಅಡ್ಡಲಾಗಿ ನಿಂತಿವೆ. ಕಾರು ಆಕಳು ಕರುವನ್ನು ಸುಮಾರು 200 ಮೀಟರ್ ಎಳೆದುಕೊಂಡು ಬಂದಿದೆ. ದಿನಾಂಕವಿಲ್ಲದ ಘಟನೆಯ ದೃಶ್ಯಗಳು ಈಗ ಈಗ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ.

ವೀಡಿಯೊ ಕ್ಲಿಪ್‌ನಲ್ಲಿ, ಕರುವಿಗೆ ಡಿಕ್ಕಿ ಹೊಡೆದ ನಂತರ ಕಾರೊಂದು ದನದ ಹಿಂಡು ವಾಹನ ತಡೆಯುವವರೆಗೂ ಜನನಿಬಿಡ ರಸ್ತೆಯಲ್ಲಿ ಕರುವನ್ನು ಎಳೆದೊಯ್ದಿದೆ. ನಂತರ, ನಾಲ್ಕೈದು ಹಸುಗಳು ಬೆನ್ನಟ್ಟಿ ಬಂದು ವಾಹನವನ್ನು ನಿಲ್ಲಿಸಿ ಕರುವಿನ ರಕ್ಷಣೆಗೆ ಪ್ರಯತ್ನಿಸಿವೆ. ಇದನ್ನು ಗಮನಿಸಿದ ಸ್ಥಳೀಯರು ಕರುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಕಾರು ಕರುವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಕಾರನ್ನು ಹಸುಗಳ ಹಿಂಡು ಹಿಂಬಾಲಿಸಿಕೊಂಡು ಬಂದಿದೆ. ಮತ್ತು ಅಂತಿಮವಾಗಿ ಈ ಹಿಂಡು ಕಾರಿಗೆ ಅಡ್ಡಲಾಗಿ ಬಂದು ರಸ್ತೆಯ ಮಧ್ಯದಲ್ಲಿ ಕಾರು ನಿಲ್ಲುವಂತೆ ಮಾಡಿದೆ. ನಂತರ ಕಾರನ್ನು ಸುತ್ತು ಹೊಡೆಯಲು ಆರಂಭಿಸಿವೆ.

ಹಸುಗಳು ಕಾರಿನ ಸುತ್ತಲೂ ಚಲಿಸುವುದನ್ನು ಕಂಡ ಸ್ಥಳೀಯರು ಕಾರಿನ ಸುತ್ತ ಸೇರುತ್ತಾರೆ. ಅವರು ಕಾರಿನಲ್ಲಿದ್ದವರಿಗೆ ಕೆಳಗಿಳಿಯಲು ಸೂಚಿಸಸುತ್ತಾರೆ. ನಂತರ ಕಾರಿನ ಕೆಳಗೆ ಏನಿದೆ ಎಂದು ನೋಡುತ್ತಾರೆ. ಆಗ ಅವರಿಗೆ ಕಾರಿನ ಕೆಳಗೆ ಆಕಳು ಕರು ಸಿಲುಕಿರುವುದು ಕಂಡುಬಂದಿದೆ. ಆಗ ಅಲ್ಲಿದ್ದವರೆಲ್ಲ ಸೇರಿ ಕಾರನ್ನು ಎತ್ತಿ ಕರುವನ್ನು ಪಾರು ಮಾಡಿದ್ದಾರೆ. ದೃಶ್ಯಾವಳಿಯ ಕೊನೆಯಲ್ಲಿ, ಕರು ಜೀವಂತವಾಗಿ ಕಾರಿನ ಕೆಳಗಿಂದ ಹೊರಬಂತು. ಹಾಗೂ ರಸ್ತೆಯಲ್ಲಿ ಕುಂಟುತ್ತ ಓಡಾಡಿತು. ಅದಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement