ವೀಡಿಯೊ..| ಭಾರಿ ಹಿಮ ಬಿದ್ದ ರಸ್ತೆಯಲ್ಲಿ ಟ್ರಕ್ ಸ್ಕಿಡ್ ಆಗಿ ಆಳದ ಪ್ರಪಾತಕ್ಕೆ ಬೀಳುವ ಮೊದಲು ಹಾರಿ ತಪ್ಪಿಸಿಕೊಂಡ ಚಾಲಕ…!

ನವದೆಹಲಿ: ಹಿಮಾಚಲ ಪ್ರದೇಶವು ಈ ತಿಂಗಳು ಭಾರೀ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಅದು ಈ ರಾಜ್ಯವನ್ನು ಚಳಿಗಾಲದ ಅದ್ಭುತ ಭೂಮಿಯಾಗಿ ಪರಿವರ್ತಿಸಿದೆ. ಆದರೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅನೇಕ ತೊಂದರೆಗಳನ್ನು ತಂದೊಡ್ಡಿದೆ. ಅವರ ವಾಹನಗಳು ನಿಯಂತ್ರಣ ತಪ್ಪಿ ಸ್ಕಿಡ್ ಆಗುತ್ತಿದ್ದು, ಹಿಮಾವೃತ ಪರ್ವತ ರಸ್ತೆಗಳಲ್ಲಿ ಸಿಲುಕಿ ಕಂದಕಕ್ಕೆ ಬೀಳುತ್ತಿವೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮಭರಿತ ರಸ್ತೆಯಲ್ಲಿ ಸಣ್ಣ ಟ್ರಕ್ ಉರುಳಿ ಸೋಲಾಂಗ್ ಕಣಿವೆಗೆ ಜಾರಿಬೀಳುವ ಮೊದಲು ಚಾಲಕ ಹೇಗಗೋ ಹಾರಿ ತಪ್ಪಿಸಿಕೊಂಡು ಕಣಿವೆಗೆ ಬೀಳುವುದರಿಂದ ಪಾರಾಗಿದ್ದು, ಇದು ವೀಡಿಯೊ ಕ್ಲಿಪ್‌ನಲ್ಲಿ ಸೆರೆಯಾಗಿದೆ.
ಮನಾಲಿ ಪಟ್ಟಣದಲ್ಲಿ ಭಾರಿ ಹಿಮ ಬೀಳುತ್ತಿದ್ದು, ಹಿಮದಿಂದ ತುಂಬಿದ ರಸ್ತೆಯಲ್ಲಿ ಟ್ರಕ್ ಜಾರುತ್ತ ಹೋಗಿದ್ದು, ಅದನ್ನು ನಿಯಂತ್ರ ಮಾಡಲು ಚಾಲಕನಿಗೆ ಸಾಧ್ಯವಾಗಿಲ್ಲ. ಹೀಗಾಗಿ ಚಾಲಕ ತಕ್ಷಣ ಚಲಿಸುತ್ತಿದ್ದ ಟ್ರಕ್‌ನಿಂದ ಹಾರಿಕೊಂಡು ಬಹಳ ಆಳವಾದ ಕಣಿವಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ.

ಆರಂಭದಲ್ಲಿ ಆತ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದರೆ ವಾಹನ ನಿಯಂತ್ರಣಕ್ಕೆ ಬಾರದೆ ರಸ್ತೆಯ ಮೇಲೆ ಜಾರುತ್ತ ಹೋಗುವುದನ್ನು ನೋಡದ ಆತ ಅದರಿಂದ ಹಾರಿ ತಪ್ಪಿಸಿಕೊಂಡಿದ್ದಾನೆ. ನಂತರ ಒಂದೆರಡು ಸೆಕೆಂಡುಗಳಲ್ಲಿ, ಟ್ರಕ್ ಕಣಿವೆಗೆ ಬಿದ್ದಿತು.
ಮನಾಲಿಯಿಂದ ಲಾಹೌಲ್-ಸ್ಪಿತಿ ಕಣಿವೆಗೆ ಸಂಪರ್ಕಿಸುವ ಅಟಲ್ ಸುರಂಗದ ಬಳಿ ಹಿಮದಿಂದ ಆವೃತವಾದ ರಸ್ತೆಯಿಂದ ಮಹೀಂದ್ರಾ ಥಾರ್ ಸ್ಕಿಡ್ ಆಗಿ ಈ ತಿಂಗಳ ಆರಂಭದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.
ಈ ವಾರ ಮನಾಲಿಯಲ್ಲಿ ಭಾರೀ ಹಿಮಪಾತದಿಂದ ಸೋಲಾಂಗ್ ಮತ್ತು ಅಟಲ್ ಸುರಂಗದ ನಡುವೆ ಕನಿಷ್ಠ 1,000 ವಾಹನಗಳು ಗಂಟೆಗಳ ಕಾಲ ಸಿಲುಕಿಕೊಂಡಿತ್ತು. ಕುಲು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಸುಮಾರು 5,000 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಭಾರೀ ಹಿಮಪಾತದ ನಡುವೆ ತಮ್ಮ ವಾಹನಗಳನ್ನು ನ್ಯಾವಿಗೇಟ್ ಮಾಡಲು ಪ್ರಯಾಣಿಕರಿಗೆ ಅಧಿಕಾರಿಗಳು ಸಹಾಯ ಮಾಡಿದ್ದಾರೆ.

“ತಾಜಾ ಹಿಮಪಾತದಿಂದಾಗಿ, ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿವೆ. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ವಾಹನಗಳು ಮತ್ತು ಪ್ರವಾಸಿಗರನ್ನು ಕುಲು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ. ಈ ಪೈಕಿ 123 ಶಿಮ್ಲಾದಲ್ಲಿ, 36 ಲಾಹೌಲ್ ಮತ್ತು ಸ್ಪಿತಿಯಲ್ಲಿ ಮತ್ತು 25 ಕುಲುವಿನಲ್ಲಿವೆ. ಹೆಚ್ಚುವರಿಯಾಗಿ, 170 ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ಅಡ್ಡಿಪಡಿಸಿದವು, ಹಿಮಪಾತವು ರಾಜ್ಯದಾದ್ಯಂತ ವಿದ್ಯುತ್ ಪೂರೈಕೆಯ ಮೇಲೆ ಪರಿಣಾಮ ಬೀರಿತು.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement