ಕೊಲ್ಲಾಪುರ: ಅಸಾಮಾನ್ಯ ಘಟನೆಯೊಂದರಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಸಬಾ-ಬವಾಡ ನಿವಾಸಿಯೊಬ್ಬರ ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಒಯ್ಯುತ್ತಿದ್ದಾಗ ಅದು ಸ್ಪೀಡ್ ಬ್ರೇಕರ್ ಮೇಲೆ ಹಾಯ್ದುಹೋಗುವಾಗ ಹಾರಿದ್ದಕ್ಕೆ ಶವಕ್ಕೆ ಪ್ರಜ್ಞೆ ಬಂದ ಘಟನೆ ವರದಿಯಾಗಿದೆ…!
ಪಾಂಡುರಂಗ ಉಲ್ಪೆ ಎಂಬ 65 ವರ್ಷದ ವ್ಯಕ್ತಿ ಕುಟುಂಬದವರು ಆತನ ಮೃತದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದರು, ಅವರು ಪಾಂಡುರಂಗ ಉಲ್ಪೆ ಮೃತಪಟ್ಟಿದ್ದಾರೆ ಎಂದು ನಂಬಿದ್ದರು. ಯಾಕೆಂದರೆ ಇದಕ್ಕೂ ಮೊದಲು ಹೃದಯಾಘಾತವಾಗಿದ್ದ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು. ಹೀಗಾಗಿ ಕುಟುಂದವರು ಅಂಬುಲೆನ್ಸ್‌ನಲ್ಲಿ ಅವರನ್ನು ಮನೆಗೆ ಒಯ್ಯುತ್ತಿದ್ದರು. ಆದರೆ ಆಂಬುಲೆನ್ಸ್ ರೋಡ್ ಹಂಪ್ ದಾಟುವಾಗ ಪಾಂಡುರಂಗ ಉಲ್ಪೆ ಅವರಿಗೆ ಪ್ರಜ್ಞೆ ಮರಳಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಆಗಿದ್ದೇನು..?
ಡಿಸೆಂಬರ್ 16 ರಂದು ಪಾಂಡುರಂಗ ಉಲ್ಪೆ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅದರ ನಂತರ, ಅವರ ಕುಟುಂಬವು ಅವರ ಮೃತ ದೇಹವನ್ನು ಆಸ್ಪತ್ರೆಯಿಂದ ಮನೆಗೆ ಆಂಬ್ಯುಲೆನ್ಸ್‌ನಲ್ಲಿ ಒಯ್ಯುತ್ತಿತ್ತು. ಅವರ ನಿಧನದ ಸುದ್ದಿ ಕೇಳಿ ಅಕ್ಕಪಕ್ಕದವರು ಮತ್ತು ಸಂಬಂಧಿಕರು ಮನೆ ಬಳಿ ಜಮಾಯಿಸಿದ್ದರು ಮತ್ತು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆದರೆ ಮುಂದೆ ಆಗಿದ್ದು ಮಾತ್ರ ಪವಾಡ…!
“ನಾವು ಅವರ “ದೇಹ”ವನ್ನು ಆಸ್ಪತ್ರೆಯಿಂದ ಮನೆಗೆ ತರುತ್ತಿದ್ದಾಗ, ಆಂಬ್ಯುಲೆನ್ಸ್ ಸ್ಪೀಡ್ ಬ್ರೇಕರ್ ಮೇಲೆ ಹಾದುಹೋಯಿತು ಮತ್ತು ಆಗ ಅವರ ಬೆರಳುಗಳಲ್ಲಿ ಚಲನೆ ಕಂಡುಬಂದಿತು ಎಂದು ಅವರ ಪತ್ನಿ ಹೇಳಿದರು. ನಂತರ ಅವರನ್ನು ಮತ್ತೆ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಹದಿನೈದು ದಿನಗಳ ಕಾಲ ಇದ್ದರು ಮತ್ತು ಈ ಅವಧಿಯಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಉಲ್ಪೆ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ.
ಡಿಸೆಂಬರ್ 16 ರ ಘಟನೆಗಳ ಬಗ್ಗೆ ವಿವರಿಸಿದ ವಾರಕರಿ (ವಿಠ್ಠಲನ ಭಕ್ತ) ಸಂಪ್ರದಾಯದ ಉಲ್ಪೆ ಅವರು, “ನಾನು ವಾಕಿಂಗ್ ಮುಗಿಸಿ ಮನೆಗೆ ಬಂದು ಚಹಾ ಹೀರುತ್ತಾ ಕುಳಿತಿದ್ದೆ, ನನಗೆ ತಲೆತಿರುಗುವಿಕೆ ಮತ್ತು ಉಸಿರುಗಟ್ಟುವಿಕೆ ಉಂಟಾಯಿತು. ನಾನು ಸ್ನಾನಗೃಹಕ್ಕೆ ಹೋಗಿ ವಾಂತಿ ಮಾಡಿಕೊಂಡೆ. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದದ್ದು ಸೇರಿದಂತೆ ನಂತರ ಏನಾಯಿತು ಎಂದು ನನಗೆ ನೆನಪಿಲ್ಲ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ