ನಟ ಸೈಫ್ ಅಲಿ ಖಾನಗೆ 6 ಕಡೆ ಇರಿತ ; ಬೆನ್ನುಮೂಳೆ ಬಳಿ ಗಾಯ

ಮುಂಬೈ : ಖ್ಯಾತ ಬಾಲಿವುಡ್‌ ನಟ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಕಳ್ಳನೊಬ್ಬ ಅವರಿಗೆ ಚಾಕುವಿನಿಂದ ಇರಿದ್ದಿದಾನೆ. ಕಳ್ಳನನ್ನು ತಡೆಯುವ ವೇಳೆ ಕಳ್ಳ ಅವರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ನಟ ಸೈಫ್ ಅಲಿ ಖಾನ್‌ಗೆ ಅನೇಕ ಇರಿತದ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗಳ್ಳತನಕ್ಕೆ ಬಂದಿದ್ದ ದುಷ್ಕರ್ಮಿ ಸೈಫ್ ಅಲಿ ಖಾನ್ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿವಾಸದಲ್ಲಿ ಕಳ್ಳತನ ಯತ್ನ ನಡೆದಿದ್ದು, ಈ ವೇಳೆ ಗಾಯಗೊಂಡಿದ್ದನ್ನು ಸೈಫ್ ಅಲಿ ಖಾನ್ ತಂಡ ಖಚಿತಪಡಿಸಿದೆ. ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ನಟನ ಪರವಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಅವರು ಸೈಫ್ ಅವರ ಸ್ಥಿತಿಯ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಕಳ್ಳತನದ ಸಮಯದಲ್ಲಿ ಸೈಫ್‌ ಅಲಿ ಖಾನ್‌ ಅವರನ್ನು ಅಪರಿಚಿತ ದುಷ್ಕರ್ಮಿಗಳು ಇರಿದಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಸೈಫ್ ಅವರಿಗೆ ಆರು ಕಡೆ ಇರಿತದ ಗಾಯಗಳಾಗಿದ್ದು, ಹೊಂದಿದ್ದು, ಅವುಗಳಲ್ಲಿ ಎರಡು ತೀವ್ರ ಅಳವಾದ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಒಂದು ಗಾಯವು ಅವರ ಬೆನ್ನುಮೂಳೆಯ ಹತ್ತಿರ ಆಗಿದೆ ಎಂದು ಹೇಳಿದ್ದಾರೆ. ಗುರುವಾರ ನಸುಕಿನ ಜಾವ 3:30ರ ಸುಮಾರಿಗೆ ಸೈಫ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ತಜ್ಞರ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಡಾ.ಉತ್ತಮನಿ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ, 10-15 ಬಾರಿ ಕಪಾಳಮೋಕ್ಷ ; ರನ್ಯಾ ರಾವ್ ಆರೋಪ

ನರಶಸ್ತ್ರಚಿಕಿತ್ಸಕ ಡಾ. ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಡಾ. ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ಡಾ. ನಿಶಾ ಗಾಂಧಿ ನೇತೃತ್ವದ ವೈದ್ಯರ ತಂಡ ಸೈಫ್ ಅಲಿ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದೆ.
ಮುಂಜಾನೆ ದಾಳಿಯ ಸಮಯದಲ್ಲಿ ಸೈಫ್ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತುವಾಗ ಯಾವುದೇ ಶಸ್ತ್ರಾಸ್ತ್ರವಿಲ್ಲದೆ ಕಳ್ಳನನ್ನು ಹೊಡೆದಿದ್ದಾನೆ ಎಂದು ನಟನಿಗೆ ಹತ್ತಿರವಿರುವ ಮೂಲವು ತಿಳಿಸಿದೆ ಎಂದು ವರದಿಯಾಗಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಸದ್ಯ ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ವರದಿಗಳನ್ನು ನಂಬುವುದಾದರೆ, ಕರೀನಾ ಮತ್ತು ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement