ವೀಡಿಯೊ…| ಸೈಫ್ ಅಲಿ ಖಾನಗೆ ಇರಿತದ ಘಟನೆ : ಹೊರಬಿದ್ದ ಆರೋಪಿಯ ಮೊದಲ ವೀಡಿಯೊ ; ವೀಕ್ಷಿಸಿ

ಮುಂಬೈ: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರು ತಮ್ಮ ಮುಂಬೈ ನಿವಾಸದಲ್ಲಿ ದರೋಡೆಕೋರನಿಂದ ಇರಿಯಲ್ಪಟ್ಟ ಕೆಲವೇ ಗಂಟೆಗಳ ನಂತರ, ಆರೋಪಿಯ ಮೊದಲ ಫೋಟೋ ಹೊರಬಿದ್ದಿದೆ.
ಬುಧವಾರ ರಾತ್ರಿ ಬಾಲಿವುಡ್ ಸೂಪರ್‌ಸ್ಟಾರ್ ಮೇಲೆ ದಾಳಿ ಮಾಡಿದ ಆರೋಪಿಯ ಸಿಸಿಟಿವಿ ವೀಡಿಯೊದಲ್ಲಿ ಆರೋಪಿಯ ಮುಖ ಸ್ಪಷ್ಟವಾಗಿ ಕಾಣುತ್ತದೆ. ವಿಡಿಯೋದಲ್ಲಿ ಆತ ಜನವರಿ 16ರ ಮುಂಜಾನೆ 2:33ಕ್ಕೆ ಕಟ್ಟಡದ ಮೆಟ್ಟಿಲ ಮೂಲಕ ಹೋಗುತ್ತಿರುವುದು ಕಂಡುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳು ನಿರ್ಣಾಯಕ ಸುಳಿವುಗಳನ್ನು ನೀಡಿರುವುದರಿಂದ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗಿನ ಜಾವ 2:33ಕ್ಕೆ ನಟನ ಕಟ್ಟಡದ ಮೆಟ್ಟಿಲ ಮೂಲಕ ದರೋಡೆಕೋರ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫೋಟೋದಲ್ಲಿ, ಆರೋಪಿ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿ ಬೆನ್ನಮೇಲೆ ಬ್ಯಾಗ್‌ ಹೊತ್ತಿರುವುದನ್ನು ಕಾಣಬಹುದು ಮತ್ತು ಭುಜದ ಮೇಲೆ ಕಿತ್ತಳೆ ಬಣ್ಣದ ಸ್ಕಾರ್ಫ್ ಕಾಣಿಸುತ್ತದೆ. ಒಂದು ಹಂತದಲ್ಲಿ ಆತ ಕ್ಯಾಮೆರಾವನ್ನು ನೇರವಾಗಿ ನೋಡಿದ್ದು ಕಂಡುಬಂದಿದೆ.

ಸೈಫ್ ಅಲಿ ಖಾನ್, ಅವರ ಪತ್ನಿ ಮತ್ತು ನಟಿ ಕರೀನಾ ಕಪೂರ್ ಮತ್ತು ಅವರ ಪುತ್ರರು ಬಾಂದ್ರಾ ವೆಸ್ಟ್‌ನಲ್ಲಿರುವ 12 ಅಂತಸ್ತಿನ ಕಟ್ಟಡದಲ್ಲಿ ನಾಲ್ಕು ಮಹಡಿಗಳಲ್ಲಿ ಹರಡಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ದಾಳಿಕೋರ ಮನೆಯನ್ನು ದರೋಡೆ ಮಾಡಲು ಯೋಜಿಸಿದ್ದ ಎಂದು ನಂಬಲಾಗಿದೆ. ಸೈಫ್‌ ಅಲಿ ಖಾನ್‌ ಕಟ್ಟಡದ ಪಕ್ಕದ ಕಾಂಪೌಂಡ್‌ಗೆ ಪ್ರವೇಶಿಸಿ ನಂತರ ಗೋಡೆಯನ್ನು ಏರಿ ಒಳಗೆ ಬಂದಿದ್ದಾನೆ ಎಂದು ಹೇಳಲಾಗಿದೆ.
ಖಾನ್‌ಗಳ ಕಟ್ಟಡದ ಒಳಕ್ಕೆ ಬಂದ ನಂತರ ಮಹಡಿಗಳಿಗೆ ಏರಲು ಹಿಂಭಾಗದಲ್ಲಿರುವ ಮೆಟ್ಟಿಲುಗಳನ್ನು ಬಳಸಿದ್ದಾನೆ. ಮನೆಯನ್ನು ಪ್ರವೇಶಿಸಲು ಅಗ್ನಿಶಾಮಕಕ್ಕೆ ಇರುವ ಪೈಪ್‌ ಬಳಿಸಿದ್ದಾನೆ ಎನ್ನಲಾಗಿದೆ. ವರದಿಯ ಪ್ರಕಾರ, ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ರಾತ್ರಿಯಿಡೀ ಮನೆಯೊಳಗೆ ಅಡಗಿಕೊಂಡಿದ್ದ. ಬೆಳಗಿನ ಜಾವ 2 ಗಂಟೆಯ ಸುಮಾರಿಗೆ, ಜೆಹ್‌ನ ಕೋಣೆಯಲ್ಲಿ ಮನೆಯ ಮಹಿಳಾ ಉದ್ಯೋಗಿ ದಾಳಿಗೊಳಗಾಗಿ ಕೂಗಿಕೊಂಡಾಗ ನಟನಿಗೆ ಶಬ್ದ ಕೇಳಿಸಿತು. ಸೈಫ್ ಅಲ್ಲಿಗೆ ಬಂದರು, ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಮತ್ತು ದಾಳಿಕೋರನು ಸೈಫ್ ಮತ್ತು ಮಹಿಳಾ ಉದ್ಯೋಗಿ ಇಬ್ಬರಿಗೂ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.

ಪ್ರಮುಖ ಸುದ್ದಿ :-   ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆಸ್ಪತ್ರೆಗೆ ದಾಖಲು

ಸೈಫ್‌ ಅಲಿ ಖಾನ್ ಅವರ ಮನೆಯಲ್ಲಿ ಸಹಾಯಕ ಸಿಬ್ಬಂದಿಯಲ್ಲಿ ಒಬ್ಬರಾದ ಎಲಿಯಾಮಾ ಫಿಲಿಪ್ಸ್ ಅಲಿಯಾಸ್ ಲಿಮಾ ಎಂಬವರು ಆ ವ್ಯಕ್ತಿಯನ್ನು ಮೊದಲು ಗುರುತಿಸಿದ್ದಾರೆ ಎಂದು ವರದಿಯಾಗಿದೆ. ಆಕೆ ಕಿರುಚುತ್ತಾ, ಒಳನುಗ್ಗುತ್ತಿದ್ದ ಆತನನ್ನು ಎದುರಿಸಿ ಆತನೊಂದಿಗೆ ಹೋರಾಡಿದ್ದಾರೆ. ಆಗ ಸೈಫ್‌ ಅಲಿ ಖಾನ್‌ ಎಚ್ಚರಿಗೊಂಡಿದ್ದಾರೆ. ನಂತರ ಖಾನ್‌ ಅವರು ಆತನನ್ನು ತಡೆಯಲು ಹೋಗಿದ್ದಾರೆ. ಆಗ ನಡೆದ ಜಗಳದಲ್ಲಿ ಆ ವ್ಯಕ್ತಿ ಸೈಫ್‌ ಅಲಿ ಖಾನ್‌ ಅವರಿಗೆ ಆರು ಬಾರಿ ಇರಿದಿದ್ದಾನೆ. ಅವರ ಎಡಗೈ ಮತ್ತು ಕುತ್ತಿಗೆಗೆ ಹಾಗೂ ಬೆನ್ನುಮೂಳೆ ಬಳಿ ಗಾಯಗಳಾಗಿವೆ. ಒಳನುಗ್ಗಿದವ 1 ಕೋಟಿ ರೂ. ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ದಾಳಿಯಲ್ಲಿ ಇಬ್ಬರು ಮನೆಯ ಸಹಾಯಕರೂ ಗಾಯಗೊಂಡಿದ್ದಾರೆ.

ಅಪಾಯದಿಂದ ಪಾರು…
ಸೈಫ್ ಅಲಿ ಖಾನ್ ಅವರನ್ನು ಅವರ ಮಗ ಇಬ್ರಾಹಿಂ ಅವರು ಅವರನ್ನು ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಸಾಗಿಸಿದ್ದು, ಅವರು ಸ್ಥಿರವಾಗಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸೈಫ್ ಅಲಿ ಖಾನ್ ಅವರು ಈಗ ಸಂಪೂರ್ಣವಾಗಿ ಸ್ಥಿರವಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ” ಎಂದು ವೈದ್ಯರು ಹೇಳಿದ್ದಾರೆ.
ಮುಂಬೈ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು 15 ತಂಡಗಳನ್ನು ರಚಿಸಿದ್ದರು. ಆದರೆ ದಿನ ಕಳೆದಂತೆ ಇನ್ನೂ ಐದು ತಂಡಗಳನ್ನು ರಚಿಸಲಾಯಿತು, ಒಟ್ಟು 20 ತಂಡಗಳನ್ನು ರಚಿಸಲಾಯಿತು. ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement