ಸೈಫ್ ಅಲಿ ಖಾನ್‌ ಗೆ ಚಾಕು ಇರಿತ ಪ್ರಕರಣ : ಛತ್ತೀಸ್‌ಗಢದಲ್ಲಿ ಶಂಕಿತನ ಬಂಧನ ; ವಿಚಾರಣೆ ನಡೆಸಲಿರುವ ಮುಂಬೈ ಪೊಲೀಸರು

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಂಬೈನ ಮನೆಯೊಳಗೆ ಇರಿತಕ್ಕೆ ಒಳಗಾದ ಘಟನೆಗೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಂಧಿತ ವ್ಯಕ್ತಿಯು ಘಟನೆಯಲ್ಲಿ ಭಾಗಿಯಾಗಿರುದ್ದಾನೆಯೇ ಅಥವಾ ಈತ ಬೇರೆ ವ್ಯಕ್ತಿಯೇ ಎಂಬ ಬಗ್ಗೆ ಮುಂಬೈ ಪೊಲೀಸರು ವಿಚಾರಣೆ ನಡೆಸಿ ಖಚಿತಪಡಿಸಲಿದ್ದಾರೆ.
54 ವರ್ಷದ ಸೈಫ್ ಅಲಿ ಖಾನ್ ಅವರ ಕುತ್ತಿಗೆ ಮತ್ತು ಬೆನ್ನುಮೂಳೆಯ ಬಳಿ ಸೇರಿದಂತೆ ಆರು ಕಡೆ ಇರಿತ ಗಾಯಗಳಾಗಿವೆ. ದರೋಡೆಗೆ ಮನೆಯೊಳಗೆ ಒಳನುಗ್ಗಿದಾತ ಸೈಫ್‌ ಅಲಿ ಖಾನ್‌ ಆತನನ್ನು ತಡೆಯಲು ಮುಂದಾದಾಗ ಆತ ನಟನಿಗೆ ಚಾಕುವಿನಿಂದ ಇರಿದಿದ್ದಾನೆ.
ಬಂಧಿತ ಶಂಕಿತ ವ್ಯಕ್ತಿಯನ್ನು 31 ವರ್ಷದ ಆಕಾಶ ಕೈಲಾಶ ಕನ್ನೋಜಿಯಾ ಎಂದು ಗುರುತಿಸಲಾಗಿದ್ದು, ಆತನನ್ನು ದುರ್ಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಮತ್ತು ಮುಂಬೈ ಪೊಲೀಸರು ವಿಚಾರಣೆ ನಡೆಸುವ ನಿರೀಕ್ಷೆಯಿದೆ.

ಮುಂಬೈ ಪೊಲೀಸರ ಮಾಹಿತಿಯ ನಂತರ ಶಂಕಿತನನ್ನು ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಹೇಳಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ರೈಲು ದುರ್ಗ್ ತಲುಪಿದಾಗ ಶಂಕಿತ – ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದ. ಆತನನ್ನು ರೈಲಿನಿಂದ ಕೆಳಗಿಳಿಸಲಾಯಿತು ಮತ್ತು ತಕ್ಷಣ ವಿಚಾರಣೆಗೆ ಒಳಪಡಿಸಲಾಗಿದೆ. “ಮುಂಬೈ ಪೊಲೀಸರು ಶಂಕಿತನ ಫೋಟೋ, ರೈಲು ಸಂಖ್ಯೆ ಮತ್ತು ಸ್ಥಳವನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್)ಗೆ ಕಳುಹಿಸಿದ್ದರು, ನಂತರ ಆತನನ್ನು ವಶಕ್ಕೆ ಪಡೆಯಲಾಯಿತು. ಆತ ಆರ್‌ಪಿಎಫ್ ವಶದಲ್ಲಿದ್ದಾನೆ ಎಂದು ಅವರು ಹೇಳಿದರು.
ಶಂಕಿತ ವ್ಯಕ್ತಿಯನ್ನು ಮುಂಬೈ ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುವಂತೆ ಮಾಡಲಾಗಿದೆ. ಮುಂಬೈನಿಂದ ಪೊಲೀಸ್ ತಂಡವು ದುರ್ಗ್‌ ಅನ್ನು ತಲುಪಲಿದೆ.

ಪ್ರಮುಖ ಸುದ್ದಿ :-   ಛತ್ತೀಸ​ಗಢದಲ್ಲಿ ಎರಡು ಪ್ರತ್ಯೇಕ ಎನ್​ಕೌಂಟರ್​ ; 22 ನಕ್ಸಲರ ಹತ್ಯೆ

ಬಂಧಿತ ವ್ಯಕ್ತಿಯು ಘಟನೆಯಲ್ಲಿ ಭಾಗಿಯಾಗಿರುದ್ದಾನೆಯೇ ಅಥವಾ ಈತ ಬೇರೆ ವ್ಯಕ್ತಿಯೇ ಎಂಬ ಬಗ್ಗೆ ಮುಂಬೈ ಪೊಲೀಸರು ವಿಚಾರಣೆ ನಡೆಸಿ ಖಚಿತಪಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ.
ವಿಚಾರಣೆಗೆ ಒಳಪಡಿಸಿದಾಗ, ಆತ ಮೊದಲು ನಾಗ್ಪುರಕ್ಕೆ ಹೋಗುವುದಾಗಿ ಹೇಳಿದ, ನಂತರ ಬಿಲಾಸಪುರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ.
ಗಾಯಗೊಂಡ ಸೈಫ್‌ ಅಲಿ ಖಾನ್‌ ಅವರನ್ನು ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಅವರ ಬೆನ್ನುಮೂಳೆಯಿಂದ 2.5-ಇಂಚಿನ ಚಾಕುವಿನ ತುಂಡನ್ನು ತೆಗೆದುಹಾಕಲಾಯಿತು. ಸೈಫ್ ಅಲಿ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement