ಮುಂಬೈ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಬಿಜೋಯ ದಾಸ್ ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಕಳ್ಳತನ ಯತ್ನದ ವೇಳೆ ನಟನ ಮೇಲೆ ಮತ್ತು ಅವರ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಆರೋಪಿಯ ಪತ್ತೆಗೆ ಪೊಲೀಸರು 30 ತಂಡಗಳನ್ನು ರಚಿಸಿದ್ದರು, ಅವರು ಸೈಫ್ ಅಲಿ ಖಾನ್, ಅವರ ಪತ್ನಿ ಮತ್ತು ನಟ ಕರೀನಾ ಕಪೂರ್ ಮತ್ತು ಅವರ ಪುತ್ರರು ವಾಸಿಸುವ ಬಾಂದ್ರಾದ ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದಾರೆ. ನಟ ಗಂಭೀರವಾಗಿ ಗಾಯಗೊಂಡ ದಾಳಿಯ ನಂತರ ಶಂಕಿತ ಕಟ್ಟಡದಿಂದ ಹೊರಹೋಗುವುದನ್ನು ಅವರು ಸಿಸಿಟಿವಿಯಲ್ಲಿ ಗಮನಿಸಿದ್ದಾರೆ. ನಂತರ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ನಗರದಾದ್ಯಂತ ಇರುವ ಹಲವಾರು ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದರು. ಈ ಕಠಿಣ ಪ್ರಕ್ರಿಯೆ ಸಮಯದಲ್ಲಿ, ಅವರು ಅಂಧೇರಿಯ ಡಿಎನ್ ನಗರದಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಅವರಿಗೆ ಆರೋಪಿಯ ಬಗ್ಗೆ ಸಣ್ಣ ಸುಳಿವು ನೀಡಿತು. ಇದು ಆರೋಪಿಯ ಬಂಧನಕ್ಕೂ ಕಾರಣವಾಯಿತು. ಪೊಲೀಸರು ಅನುಮಾನಾಸ್ಪದ ವ್ಯಕ್ತಿ ಬೈಕ್‌ನಿಂದ ಇಳಿಯುವುದನ್ನು ಸಿಟಿವಿಯಲ್ಲಿ ನೋಡಿದ ನಂತರ ದ್ವಿಚಕ್ರ ವಾಹನದ ನಂಬರ್ ಬಳಸಿ ಆರೋಪಿಯನ್ನು ಟ್ರ್ಯಾಕ್ ಮಾಡಿದ್ದಾರೆ.
ಅಲ್ಲದೆ,, ಸ್ಥಳೀಯ ಗುಪ್ತಚರ ಮಾಹಿತಿಯನ್ನೂ ಅನುಸರಿಸಿ, ಆರೋಪಿಯು ಇತರ ಮೂವರೊಂದಿಗೆ ವಾಸಿಸುತ್ತಿದ್ದ ವರ್ಲಿಯಲ್ಲಿರುವ ಕೋಳಿವಾಡದಲ್ಲಿ ಬಾಡಿಗೆ ಮನೆಯನ್ನು ಪೊಲೀಸರು ಪತ್ತೆ ಹಚ್ಚಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸ್ ತಂಡವು ಈ ವಸತಿಗೃಹಕ್ಕೆ ತೆರಳಿ ಅಲ್ಲಿ ವಾಸಿಸುವ ಜನರನ್ನು ವಿಚಾರಣೆ ನಡೆಸಿತು. ಶಂಕಿತನ ಹೆಸರು ಮತ್ತು ಸಂಬಂಧಿತ ಮಾಹಿತಿಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಪೊಲೀಸರು ಆತನ ಫೋನ್ ನಂಬರ್ ಕೂಡ ಪಡೆದು ಫೋನ್ ಲೊಕೇಶನ್ ಟ್ರ್ಯಾಕ್ ಮಾಡಲು ಬಳಸಿದರು.
ನಂತರ ಆರೋಪಿ ಥಾಣೆಯ ನಿರ್ಜನ ರಸ್ತೆಯ ಪೊದೆಯೊಂದರಲ್ಲಿ ತಲೆಮರೆಸಿಕೊಂಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ಮೊದಲು ಎಲ್ಲಾ ಕಡೆಯಿಂದ ಆತನನ್ನು ಸುತ್ತುವರಿದು ನಂತರ ಆತನನ್ನು ವಶಕ್ಕೆ ತೆಗೆದುಕೊಂಡರು. ಆತನಿಂದ ಯಾವುದೇ ಭಾರತೀಯ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಇದೇವೇಳೆ ಅಕ್ರಮವಾಗಿ ಭಾರತಕ್ಕೆ ಬಂದ ಬಾಂಗ್ಲಾದೇಶದ ಪ್ರಜೆ ಎಂಬುದಕ್ಕೆ ಪುರಾವೆಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಟಿವಿ ಸುದ್ದಿಗಳಲ್ಲಿ ತನ್ನ ಚಿತ್ರಗಳನ್ನು ನೋಡಿ ನಾನು ಥಾಣೆಗೆ ಓಡಿಹೋದೆ ಎಂದು ಶರೀಫುಲ್ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ಆತ ತನ್ನ ಫೋನ್ ಸ್ವಿಚ್ ಆಫ್ ಮಾಡಿ ಥಾಣೆಯ ಕಾರ್ಮಿಕ ಶಿಬಿರದ ಬಳಿ ಅಡಗಿಕೊಂಡಿದ್ದ. ಪೊಲೀಸರು ಆತನ ಫೋನಿನ ಕೊನೆಯ ಲೊಕೇಶನ್ ಅನ್ನು ಪತ್ತೆಹಚ್ಚಿದರು ಮತ್ತು ಥಾಣೆಗೆ ಹೋಗಿ ಆತನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ತಾನು ಸೈಫ್ ಅಲಿಖಾನ್ ಮನೆಗೆ ನುಗ್ಗುತ್ತಿರುವುದು ತನಗೆ ತಿಳಿದಿರಲಿಲ್ಲ ಎಂದು ಆರೋಪಿ ಶರೀಫುಲ್ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಆತ ಕೆಲಸ ಇಲ್ಲದೇ ಇದ್ದ ಹಾಗೂ ನಟನ ಮನೆಯನ್ನು ದೊಡ್ಡ ಪ್ರಮಾಣದಲ್ಲಿ ದರೋಡೆ ಮಾಡಲು ಯೋಜಿಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ಕಟ್ಟಡದ ಒಳಗೆ ಹೋಗಲು ಹಿಂಬದಿಯ ಮೆಟ್ಟಿಲು ಮತ್ತು ಹವಾನಿಯಂತ್ರಣ ಪೈಪ್‌ಗಳನ್ನು ಬಳಸಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಆತ ಕಟ್ಟಡವನ್ನು ಪ್ರವೇಶಿಸಿದ್ದು ಇದೇ ಮೊದಲ ಬಾರಿ ಎಂದು ಹೇಳಿದ್ದಾನೆ. ಆರೋಪಿ ಮಾಹಿತಿಯ ಮೇರೆಗೆ ದರೋಡೆಯ ದೃಶ್ಯವನ್ನು ಮರುಸೃಷ್ಟಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ಇರಿತದಿಂದ ಆರು ಗಾಯಗಳಾಗಿದ್ದರಿಂದ ನಟ ಸೈಫ್ ಅಲಿ ಖಾನ್ ಅವರನ್ನು ಬುಧವಾರ ತಡರಾತ್ರಿ ಲೀಲಾವತಿ ಆಸ್ಪತ್ರೆಗೆ ಒಯ್ದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಒಂದು ಗಾಯ ಬೆನ್ನುಮೂಳೆಯ ಬಳಿ ಆಗಿದೆ..
ಸೈಫ್ ಅಲಿ ಖಾನ್ ಪುತ್ರರಿಗೆ ದಾದಿಯಾಗಿ ಕೆಲಸ ಮಾಡುವ ಎಲಿಯಾಮಾ ಫಿಲಿಪ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಒಳನುಗ್ಗಿದವನನ್ನು ಮೊದಲು ಗುರುತಿಸಿದ್ದು ನಾನೇ ಎಂದು ಹೇಳಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಶಬ್ದಗಳಿಂದ ಎಚ್ಚರವಾಯಿತು ಎಂದು ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ. ದಾದಿಯು ಬಾತ್ರೂಮ್ ಬಾಗಿಲು ಹಾಕಿರುವುದನ್ನು ಮತ್ತು ದೀಪವನ್ನು ನೋಡಿದರು. ಮತ್ತು ಕರೀನಾ ಕಪೂರ್ ತಮ್ಮ ಕಿರಿಯ ಮಗ ಜೆಹ್ ನ ಜೊತೆಗಿದ್ದಾರೆ ಎಂದು ಊಹಿಸಿಕೊಂಡಿದ್ದರು.
“… ನಂತರ ನಾನು ಮತ್ತೆ ಮಲಗಲು ಹೋದೆ ಆದರೆ, ಮತ್ತೆ, ಏನೋ ತಪ್ಪಾಗಿದೆ ಎಂದು ನಾನು ಅರಿತುಕೊಂಡೆ. ಹಾಗಾಗಿ ನನಗೆ ಮತ್ತೆ ಎಚ್ಚರವಾಯಿತು ಮತ್ತು ಒಬ್ಬ ವ್ಯಕ್ತಿ ಸ್ನಾನಗೃಹದಿಂದ ಹೊರಬಂದು ಹುಡುಗನ ಕೋಣೆಗೆ ಹೋಗುವುದನ್ನು ನೋಡಿದೆ. ನಾನು ಬೇಗನೆ ಎದ್ದು ಜೆಹ್ ಕೋಣೆಗೆ ಹೋದೆ. ದಾಳಿಕೋರನು ತನ್ನ ಬೆರಳನ್ನು ನನ್ನ ಬಾಯಿಯ ಬಳಿ ಇಟ್ಟು ‘ಯಾವುದೇ ಶಬ್ದ ಮಾಡಬೇಡ, ಯಾರೂ ಹೊರಗೆ ಹೋಗುವುದಿಲ್ಲ’ ಎಂದು ಹಿಂದಿಯಲ್ಲಿ ಹೇಳಿದರು ಎಂದು ಫಿಲಿಪ್ ಹೇಳಿದ್ದಾರೆ.
“ನಾನು ಜೆಹ್ ಅನ್ನು ಎತ್ತಿಕೊಳ್ಳಲು ಧಾವಿಸಿದಾಗ, ಮರದ ಕೋಲು ಮತ್ತು ಉದ್ದನೆಯ ಹೆಕ್ಸಾ ಬ್ಲೇಡ್‌ನಿಂದ ಶಸ್ತ್ರಸಜ್ಜಿತನಾಗಿದ್ದ ಆರೋಪಿ ನನ್ನ ಕಡೆಗೆ ಓಡಿ ಬಂದು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ಎಂದು ದಾದಿ ಹೇಳಿದ್ದಾರೆ.
“ನಾನು ನನ್ನ ಕೈಯನ್ನು ಅಡ್ಡ ಹಿಡಿದು ದಾಳಿಯನ್ನು ತಡೆಯಲು ಪ್ರಯತ್ನಿಸಿದೆ, ಆದರೆ ಬ್ಲೇಡ್ ನನ್ನ ಎರಡೂ ಕೈಗಳ ಮಣಿಕಟ್ಟಿನ ಬಳಿ ಮತ್ತು ನನ್ನ ಎಡಗೈಯ ಮಧ್ಯದ ಬೆರಳಿಗೆ ತಾಗಿ ಗಾಯವಾಯಿತು ಎಂದು ಅವರು ಹೇಳಿದರು.”ಆ ಸಮಯದಲ್ಲಿ, ನಾನು ಆತನಿಗೆ “ನಿಮಗೆ ಏನು ಬೇಕು?” ಎಂದು ಕೇಳಿದೆ, ಆತ “ನನಗೆ ಹಣ ಬೇಕು” ಎಂದು ಹೇಳಿದ. ‘ನಿಮಗೆ ಎಷ್ಟು ಬೇಕು?’ ಎಂದು ಕೇಳಿದೆ. ಇಂಗ್ಲಿಷ್‌ನಲ್ಲಿ ಆತ ‘ಒಂದು ಕೋಟಿ’ ಎಂದು ಹೇಳಿದ ಎಂದು ಫಿಲಿಪ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾದಿ ಫಿಲಿಪ್ ಕಿರುಚಾಟವನ್ನು ಕೇಳಿ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಕೋಣೆಯಿಂದ ಧಾವಿಸಿದರು. ಖಾನ್ ಕಳ್ಳನಿಗೆ ಏನು ಬೇಕು ಎಂದು ಕೇಳಿದಾಗ, ಆತ ದೊಣ್ಣೆ ಮತ್ತು ಹೆಕ್ಸಾ ಬ್ಲೇಡ್‌ನಿಂದ ಆತನ ಮೇಲೆ ದಾಳಿ ಮಾಡಿದ ಎಂದು ಅವರು ಹೇಳಿದ್ದಾರೆ.
“ಸೈಫ್ ಸರ್ ಹೇಗೋ ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದರು ಮತ್ತು ನಾವೆಲ್ಲರೂ ಕೋಣೆಯಿಂದ ಹೊರಗೆ ಓಡಿ ಕೋಣೆಯ ಬಾಗಿಲು ಎಳೆದೆವು ಎಂದು ನಂತರ ಎಲ್ಲರೂ ತಮ್ಮ ಮನೆಯ ಮೇಲಿನ ಮಹಡಿಗೆ ಹೋದರು. ಒಳನುಗ್ಗಿದ ವ್ಯಕ್ತಿ ನಂತರ ಪರಾರಿಯಾಗಿದ್ದಾನೆ ಎಂದು ಎಲಿಯಾಮಾ ಫಿಲಿಪ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ