ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ; 8 ಮಂದಿ ಸಾವು : 5 ಕಿಮೀ ದೂರದ ವರೆಗೆ ಕೇಳಿದ ಸ್ಫೋಟದ ಸದ್ದು

ಮುಂಬೈ: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ನಾಗ್ಪುರ ಬಳಿಯ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧ್ಯಾಹ್ನ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾವನ್ನು ಖಚಿತಪಡಿಸಿದ್ದಾರೆ.
“ಭಂಡಾರಾದಲ್ಲಿ, ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ, ದೊಡ್ಡ ಅನಾಹುತ ಸಂಭವಿಸಿದೆ, ಇದರ ಪರಿಣಾಮವಾಗಿ ಎಂಟು ಜನರು ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಇದು ಪ್ರಾಥಮಿಕ ಮಾಹಿತಿಯಾಗಿದೆ” ಎಂದು ಸಚಿವರು ತಿಳಿಸಿದರು. ಮೃತರಿಗೆ ಗೌರವ ಸಲ್ಲಿಸಲು ಒಂದು ನಿಮಿಷ ಮೌನವನ್ನು ಆಚರಿಸುವಂತೆ ಕೇಳಿಕೊಂಡರು.

ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ಈ ಹಿಂದೆ ತಿಳಿಸಿದ್ದರು. ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಭಾರೀ ಸ್ಫೋಟವು ಛಾವಣಿಯ ಕುಸಿತಕ್ಕೆ ಕಾರಣವಾಯಿತು ಮತ್ತು ಹನ್ನೆರಡು ಕಾರ್ಮಿಕರು ಸಿಲುಕಿಕೊಂಡರು. ಆರಂಭಿಕ ಪ್ರಯತ್ನಗಳಲ್ಲಿ, ಮೂವರನ್ನು ಜೀವಂತವಾಗಿ ರಕ್ಷಿಸಲಾಯಿತು ಮತ್ತು ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವಶೇಷಗಳನ್ನು ತೆಗೆಯಲು ಅಗೆಯುವ ಯಂತ್ರವನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಯು 5 ಕಿಮೀ ದೂರದ ವರೆಗೆ ಕೇಳಿಸಿದೆ. ಫ್ಯಾಕ್ಟರಿಯಿಂದ ದಟ್ಟ ಹೊಗೆ ಏಳುತ್ತಿರುವುದು ದೂರದಿಂದ ಸೆರೆ ಹಿಡಿದಿರುವ ವೀಡಿಯೊದಲ್ಲಿ ಕಂಡು ಬಂದಿದೆ.

ಪ್ರಮುಖ ಸುದ್ದಿ :-   ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement