ತಾನು ಪ್ರೀತಿಸಿದ ಮಹಿಳೆಯ 4 ತಿಂಗಳ ಮಗುವನ್ನು ಕೊಂದ 15 ವರ್ಷದ ಬಾಲಕ…!

ವಲ್ಸಾದ್: ಗುಜರಾತಿನ ವಲ್ಸಾದ್ ಜಿಲ್ಲೆಯಲ್ಲಿ ತಾನು ಪ್ರೀತಿಸುತ್ತಿದ್ದ ಮಹಿಳೆಯ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮುಸ್ಕಾನ್ ಅಸ್ಗರಲಿ ಎಂದು ಗುರುತಿಸಲಾದ ಮೂಲತಃ ಉತ್ತರ ಪ್ರದೇಶ ಹಾಗೂ ಹಾಲಿ ಉಮರ್ಗಾಮ್ ನಿವಾಸಿ ವಿವಾಹಿತ ಮಹಿಳೆಯ ದೂರಿನ ಮೇರೆಗೆ ಪೊಲೀಸರು 4 ತಿಂಗಳ ಮಗುವಿನ ಶವವನ್ನು ಹೊರತೆಗೆದ ನಂತರ ಹದಿಹರೆಯದವನನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಜನವರಿ 13 ರಂದು ಶಿಶುವನ್ನು ಕೊಂದು ಅದು ಅಪಘಾತದಿಂದ ಸತ್ತಿದೆ ಎಂದು ಬಾಲಕ ಸುಳ್ಳು ಹೇಳಿರುವುದಾಗಿ ಮುಸ್ಕಾನ್‌ ಅಸ್ಗರಲಿ ಪೊಲೀಸರಿಗೆ ತಿಳಿಸಿದ್ದಾಳೆ. ಘಟನೆ ನಡೆದಾಗ ಆಕೆ ಮಾರುಕಟ್ಟೆಗೆ ಹೋಗಿದ್ದಳು. ಮಗು ಹಾಸಿಗೆಯಿಂದ ಕೆಳಗೆ ಬಿದ್ದು ತಲೆಗೆ ಗಾಯವಾಗಿ ಮೃತಪಟ್ಟಿದೆ ಎಂದು ಆರೋಪಿ ಹೇಳಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

“ಮಗುವನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದ ನಂತರ ಸತ್ತಿದೆ ಎಂದು ಘೋಷಿಸಲಾಯಿತು ಮತ್ತು ಉಮರ್ಗಾಮ್ ಸ್ಮಶಾನದಲ್ಲಿ ಹೂಳಲಾಯಿತು. ಆರೋಪಿ ಜನವರಿ 14 ರಂದು ತನ್ನ ನಿವಾಸ ತೊರೆದಿದ್ದ, ಇದು ಮಹಿಳೆಗೆ ಅನುಮಾನ ಬರಲು ಕಾರಣವಾಯಿತು. ಜನವರಿ 15 ರಂದು ಆಕೆಯ ದೂರಿನ ಮೇರೆಗೆ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಹೂಳಲಾಗಿದ್ದ ಮಗುವಿನ ದೇಹವನ್ನು ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಮಗುವಿನ ತಲೆಗೆ ಗಂಭೀರ ಗಾಯಗಳಾಗಿತ್ತು.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಪೊಲೀಸ್ ತಂಡಗಳನ್ನು ಹರಿಯಾಣ, ದೆಹಲಿ ಹಾಗೂ ಆಗ್ರಾ ಮತ್ತು ಯುಪಿಯ ಪ್ರಯಾಗರಾಜ್‌ಗೆ ಕಳುಹಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
“15 ವರ್ಷದ ಆರೋಪಿಯನ್ನು ಪ್ರಯಾಗರಾಜ್‌ನಿಂದ ಬಂಧಿಸಿ ವಲ್ಸಾದ್‌ಗೆ ಕರೆತರಲಾಯಿತು. ಮಹಿಳೆಯೊಂದಿಗೆ ಮದುವೆ ಮಾಡಿಕೊಳ್ಳಲು ತನ್ನ ಕುಟುಂಬವು ಒಪ್ಪದ ಕಾರಣ ಮಗುವನ್ನು ಕೊಂದಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಹಿಂದಿನ ಮದುವೆಯಿಂದ ಮಗು ಇರುವ ಮಹಿಳೆಯನ್ನು ಮದುವೆಯಾಗಲು ಕುಟುಂಬದವರು ವಿರೋಧಿಸಿದರು ಎಂದು ಅಧಿಕಾರಿ ಮಾಹಿತಿ ನೀಡಿದರು.
ಬಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಕೊಲೆ, ಸಾಕ್ಷ್ಯಗಳನ್ನು ಮರೆಮಾಚುವಿಕೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಮತ್ತು ಪೊಲೀಸರ ಪ್ರಕಾರ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement