ಪವಾಡ…| 13ನೇ ಅಂತಸ್ತಿನಿಂದ ಕೆಳಗೆ ಬಿದ್ದ ಮಗುವನ್ನು ಪವಾಡಸದೃಶ ರೀತಿಯಲ್ಲಿ ಬಚಾವ್‌ ಮಾಡಿದ ಯುವಕ ; ವೀಡಿಯೊ ವೈರಲ್

ಥಾಣೆ: ಥಾಣೆಯ ಡೊಂಬಿವಲಿಯಲ್ಲಿ 13ನೇ ಮಹಡಿಯ ಫ್ಲಾಟ್‌ನಿಂದ ಎರಡು ವರ್ಷದ ಮಗುವೊಂದು ಬಿದ್ದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದು, ವ್ಯಕ್ತಿಯ ಜಾಗರೂಕತೆಯಿಂದ ಇದು ನಡೆದಿದೆ.
ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಯುವಕನ ಪ್ರಯತ್ನಕ್ಕೆ ಭಾರಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರನ್ನು ನಿಜ ಜೀವನದ ಹೀರೋ ಎಂದು ಕೊಂಡಾಡಿದ್ದಾರೆ. ಕಳೆದ ವಾರ ಡೊಂಬಿವಲಿಯ ದೇವಿಚಪದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೊದಲ್ಲಿ, ಭಾವೇಶ್ ಮ್ಹಾತ್ರೆ ಎಂಬವರು ಮಗುವನ್ನು ಹಿಡಿಯಲು ಓಡುತ್ತಿರುವುದನ್ನು ಕಾಣಬಹುದು, ಮತ್ತು ಅವರು 13ನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ಸರಿಯಾಗಿ ಹಿಡಿಯಲು ಸಾಧ್ಯವಾಗದಿದ್ದರೂ ಅವರ ತಕ್ಷಣದ ಸ್ಪಂದನೆ ಮತ್ತು ಸಮಯಪ್ರಜ್ಷೆಯು ಮಗು ನೇರವಾಗಿ ನೆಲಕ್ಕೆ ಬಲವಾಗಿ ಅಪ್ಪಳಿಸುವುದನ್ನು ತಡೆದಿದೆ. ಇದರಿಂದ ಮಗು ಅಪಾಯದಿಂದ ಪಾರಾಗಿದೆ.
ತನ್ನ 13ನೇ ಮಹಡಿಯ ಫ್ಲಾಟ್‌ನ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಮಗು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. “ಅವಳು ಜಾರಿಬಿದ್ದಳು, ಬಾಲ್ಕನಿಯ ಅಂಚಿನಲ್ಲಿ ಸ್ವಲ್ಪ ಸಮಯದವರೆಗೆ ನೇತಾಡುತ್ತಿದ್ದಳು ಮತ್ತು ನಂತರ ಬಿದ್ದಳು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಭವೇಶ ಮ್ಹಾತ್ರೆ ಅವರು ಕಟ್ಟಡದ ಸಮೀಪದಲ್ಲೇ ಹಾದು ಹೋಗುತ್ತಿದ್ದರು ಮತ್ತು ಮಗು ಬೀಳುವುದನ್ನು ಕಂಡರು. ತಕ್ಷಣವೇ ಓಡಿಹೋಗಿ ಮಗುವನ್ನು ಹಿಡಿಯಲು ಪ್ರಯತ್ನಿಸಿದರೂ. ಅವರು ಮಗುವನ್ನು ಹಿಡಲು ನೂರಕ್ಕೆ ನೂರು ಸಫಲರಾಗದಿದ್ದರೂ ಮಗು ಅವರ ಅಂಗೈ ಮೇಲೆ ಬಿದ್ದು ನೆಲಕ್ಕೆ ಬಿದ್ದಿದ್ದರಿಂದ ಅದು ನೆಲಕ್ಕೆ ಬಲವಾಗಿ ಅಪ್ಪಳಿಸದ ಕಾರಣ ಅಪಾಯದಿಂದ ಪಾರಾಗಿದೆ.
ಹಲವರು ಧೈರ್ಯ ಮತ್ತು ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ಅಧಿಕಾರಿಯೊಬ್ಬರು ಭಾವೇಶ ಮ್ಹಾತ್ರೆ ಅವರ ಕಾರ್ಯವನ್ನು ಶ್ಲಾಘಿಸಿದರು ಮತ್ತು ಸಾರ್ವಜನಿಕವಾಗಿ ಅವರನ್ನು ಅಭಿನಂದಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement