ಮುಂಬೈ : ಜನವರಿ 16ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ಇರಿತದ ಪ್ರಕರಣದಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸ್ಪಟ್ಟ ವ್ಯಕ್ತಿಯ ಜೀವನವೇ ಈಗ ಬರ್ಬಾದ್ ಆಗಿದೆ. ಪೊಲೀಸರು ತಪ್ಪಾಗಿ ಆತನನ್ನು ಬಂಧಿಸಿದ್ದರಿಂದ ಆತನ ಕೆಲಸವೂ ಹೋಗಿದೆ, ಜೊತೆಗೆ ಆತನ ಮದುವೆ ನಿಶ್ಚಿತಾರ್ಥವೂ ಮುರಿದುಬಿದ್ದಿದೆ ಎಂದು ವರದಿಯಾಗಿದೆ.
ಜನವರಿ 18ರಂದು ಮುಂಬೈ ಪೊಲೀಸರಿಂದ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ಮುಂಬೈ ಲೋಕಮಾನ್ಯ ತಿಲಕ ಟರ್ಮಿನಸ್-ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆಕಾಶ ಕನೋಜಿಯಾ (31) ಅವರನ್ನು ದುರ್ಗ್ ನಿಲ್ದಾಣದಲ್ಲಿ ಬಂಧಿಸಿತ್ತು. ಆದರೆ ಮಾರನೇ ದಿನ ಬೆಳಗ್ಗೆ ಮುಂಬೈ ಪೊಲೀಸರು ನೆರೆಯ ಥಾಣೆಯಿಂದ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ಬಂಧಿಸಿದರು. ಹೀಗಾಗಿ ದುರ್ಗ್ ಆರ್‌ಪಿಎಫ್ ಆಕಾಶ ಕನೋಜಿಯಾ ಅವರನ್ನು ಬಿಟ್ಟು ಕಳುಹಿಸಿದ್ದರು.
ಸೈಫ್ ಅಲಿ ಖಾನ್ ಮೇಲಿನ ದಾಳಿ ನಂತರ ಅಪಾರ್ಟ್ ಮೆಂಟ್ ನ ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವ ವ್ಯಕ್ತಿಯೋರ್ವನ ಫೋಟೋಗಳಲ್ಲಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ನಂತರ ನನ್ನನ್ನು ಪ್ರಕರಣದ ಪ್ರಮುಖ ಶಂಕಿತ ಎಂಬಂತೆ ಬಿಂಬಿಸಲಾಯಿತು. ಇದರಿಂದ ನನ್ನ ಕುಟುಂಬ ಆಘಾತಕ್ಕೊಳಗಾಗಿ ಕಣ್ಣೀರಿಟ್ಟಿತು. ಮುಂಬೈ ಪೊಲೀಸರ ಒಂದು ತಪ್ಪು ನನ್ನ ಜೀವನವನ್ನು ಹಾಳು ಮಾಡಿತು. ನನಗೆ ಮೀಸೆ ಇದೆ ಎಂದು ಅವರು ಗಮನಿಸಲಿಲ್ಲ ಮತ್ತು ಸೈಫ್ ಅಲಿ ಖಾನ್ ಇರುವ ಕಟ್ಟಡದ ಸಿಸಿಟಿವಿ ಸೆರೆಹಿಡಿಯಲಾದ ವ್ಯಕ್ತಿಯನ್ನು ಅವರು ಸರಿಯಾಗಿ ಗಮನಿಸಲಿಲ್ಲ ಎಂದು ಕನೋಜಿಯಾ ತಿಳಿಸಿದರು.
ಕನೋಜಿಯಾ ಅವರು ತಮ್ಮ ಭಾವಿ ವಧು ಹಾಗೂ ಆರೋಗ್ಯ ಸರಿಯಾಗಿಲ್ಲದ ಅಜ್ಜಿಯನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದಾಗ ಅವರು ದುರ್ಗ್‌ನಲ್ಲಿ ಅವರನ್ನು ಆರ್‌ಪಿಎಫ್ ಬಂಧಿಸಿತ್ತು. ರೈಲ್ವೆ ಪೊಲೀಸರಿಂದ ತನ್ನ ಕಸ್ಟಡಿಗೆ ತೆಗೆದುಕೊಂಡ ನಂತರ ಮುಂಬೈ ಪೊಲೀಸ್ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಯ ನಂತರ ನನ್ನನ್ನು ಕೆಲಸದಿಂದ ವಜಾಗೊಳಿಸಲಾಯಿತು, ಇದರಿಂದ ನನ್ನ ಜೀವನವು ಹಾಳಾಯಿತು ಎಂದು ಕನೋಜಿಯಾ ಹೇಳಿದ್ದಾರೆ “ನಾನು ನನ್ನ ಉದ್ಯೋಗದಾತರಿಗೆ ಕರೆ ಮಾಡಿದಾಗ, ಅವರು ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿದರು. ಅವರು ನನ್ನ ವಿವರಣೆಯನ್ನು ಕೇಳಲು ನಿರಾಕರಿಸಿದರು. ನನ್ನ ಬಂಧನದ ನಂತರ ವಧುವಿನ ಕುಟುಂಬವು ಮದುವೆ ಮಾತುಕತೆಗಳನ್ನು ಮುಂದುವರಿಸಲು ನಿರಾಕರಿಸಿತು ಎಂದು ಅವರು ಹೇಳಿದರು .
ಕಫೆ ಪರೇಡ್‌ನಲ್ಲಿ ನನ್ನ ಮೇಲೆ ಎರಡು ಪ್ರಕರಣಗಳಿವೆ ಮತ್ತು ಗುರಗಾಂವ್‌ನಲ್ಲಿ ಒಂದು ಪ್ರಕರಣಗಳಿವೆ. ಆದರೆ ನನ್ನನ್ನು ಹಾಗೆ ಶಂಕಿತನನ್ನಾಗಿ ಮಾಡಿ ನಂತರ ಬಿಡಬಹುದು ಎಂದು ಇದರ ಅರ್ಥವಲ್ಲ. ಈಗ ಸೈಫ್ ಅಲಿ ಖಾನ್ ಅವರ ಅಪಾರ್ಟ್ ಮೆಂಟ್ ಹೊರಗೆ ನಿಂತು ಕೆಲಸ ಕೆಲಸ ಎಂದು ಯೋಜಿಸುತ್ತಿದ್ದೇನೆ. ಯಾಕೆಂದರೆ ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣದ ನಂತರ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಕನೋಜಿಯಾ ಹೇಳಿದ್ದಾರೆ.
ದುರ್ಗ್ ರೈಲ್ವೆ ನಿಲ್ದಾಣದಲ್ಲಿ ನನ್ನನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಶರೀಫುಲ್ ಇಸ್ಲಾಂ ಸಿಕ್ಕಿಬಿದ್ದಿದ್ದು ದೇವರ ಕೃಪೆಯೇ ಇರಬೇಕು. ಇಲ್ಲದಿದ್ದರೆ, ನನ್ನನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ತೋರಿಸುತ್ತಿದ್ದರೆನೋ..? ಯಾರಿಗೆ ಗೊತ್ತು ಎಂದು ಕನೋಜಿಯಾ ಹೇಳಿದ್ದಾರೆ.
ಜನವರಿ 16 ರಂದು ತಮ್ಮ ನಿವಾಸಕ್ಕೆ ರಾತ್ರಿ ಕಳ್ಳತನಕ್ಕಾಗಿ ಒಳನುಗ್ಗಿದ ವ್ಯಕ್ತಿಯಿಂದ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಸೈಫ್ ಅಲಿ ಖಾನ್ ನಂತರ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟರು. ಅವರನ್ನು ಜನವರಿ 21 ರಂದು ಅವರನ್ನು ಬಿಡುಗಡೆ ಮಾಡಲಾಯಿತು. ಪೊಲೀಸರ ಪ್ರಕಾರ, ಆರೋಪಿ ಬಾಂಗ್ಲಾದೇಶಿ ಪ್ರಜೆ ಏಳು ತಿಂಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಮುಂಬೈಗೆ ತೆರಳುವ ಮೊದಲು ಸಿಮ್ ಪಡೆಯಲು ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಅನ್ನು ಬಳಸಿದ್ದಾನೆ. ಅತ ತನ್ನನ್ನು ವಿಜಯ ದಾಸ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ ಮತ್ತು ಐದು ತಿಂಗಳಿನಿಂದ ಮುಂಬೈನಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ