ಇಂದು ರಾತ್ರಿ 8 ಗಂಟೆಯೊಳಗೆ ʼಯಮುನಾ ವಿಷ ಮಿಶ್ರಣʼದ ಬಗ್ಗೆ ಪುರಾವೆ ನೀಡಿ: ಕೇಜ್ರಿವಾಲಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಬಿಜೆಪಿ ಸರ್ಕಾರವು ಯಮುನಾ ನೀರನ್ನು ವಿಷಪೂರಿತಗೊಳಿಸಿದೆ ಎಂಬ ಎಂದು ಗಂಭೀರ ಆರೋಪ ಮಾಡಿದ್ದು, ಈ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ.
ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯೊಳಗೆ ಸಾಕ್ಷ್ಯಾಧಾರಗಳನ್ನು ಪ್ರಸ್ತುಪಡಿಸುವಂತೆ ಸೂಚಿಸಿರುವ ಚುನಾವಣಾ ಆಯೋಗವು, ಇದು ರಾಜ್ಯಗಳ ನಡುವೆ ವೈಷಮ್ಯ ಮೂಡಿಸುವ ಗಂಭೀರ ಆರೋಪವಾಗಿದ್ದು, ಇದಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ನಿಬಂಧನೆ ವಿಧಿಸಲಾಗಿದೆ ಎಂದು ತನ್ನ ಪತ್ರದಲ್ಲಿ ತಿಳಿಸಿದೆ.
ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು, ಕೇಜ್ರಿವಾಲ್ ಅವರು ಸೋಮವಾರ ತಮ್ಮ ಪಕ್ಷದ ಆಡಳಿತದಲ್ಲಿ “ಅವ್ಯವಸ್ಥೆ ಸೃಷ್ಟಿಸುವ ಪ್ರಯತ್ನದಲ್ಲಿ … ನಗರದ ನೀರು ಸರಬರಾಜಿನಲ್ಲಿ “ವಿಷ ಮಿಶ್ರಣ” ಮಾಡುತ್ತಿದ್ದಾರೆ ಎಂದು ಹೇಳಿದ್ದರು.

”ದೆಹಲಿ ಜನರಿಗೆ ಹರಿಯಾಣ, ಉತ್ತರ ಪ್ರದೇಶದಿಂದ ಕುಡಿಯುವ ನೀರು ಸಿಗುತ್ತದೆ… ಆದರೆ ಹರಿಯಾಣ ಸರ್ಕಾರ ಯಮುನಾ ನದಿಯಿಂದ ದೆಹಲಿಗೆ ಬರುವ ನೀರಿನಲ್ಲಿ ವಿಷ ಬೆರೆಸಿ ಇಲ್ಲಿಗೆ ಕಳುಹಿಸಿದೆ… ನಮ್ಮ ದೆಹಲಿ ಜಲ ಮಂಡಳಿಯ ಇಂಜಿನಿಯರ್‌ಗಳ ಜಾಗರೂಕತೆಯಿಂದ ಈ ನೀರನ್ನು ನಿಲ್ಲಿಸಲಾಯಿತು, ”ಎಂದು ಅವರು ಹೇಳಿದ್ದರು. ಆದಾಗ್ಯೂ, ಈ ಹೇಳಿಕೆಗೆ ಜಲ ಮಂಡಳಿಯ ಮುಖ್ಯ ಎಂಜಿನಿಯರ್ ವಿರೋಧ ವ್ಯಕ್ತಪಡಿಸಿದ್ದಾರೆ, ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗವು ಮಾಜಿ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಇದೇ ಕಳವಳವನ್ನು ವ್ಯಕ್ತಪಡಿಸಿದೆ. “ಮತದಾರರು ತಮ್ಮ ನಾಯಕರು ಸಾರ್ವಜನಿಕವಾಗಿ ಏನು ಹೇಳಿದರೂ ನಂಬುತ್ತಾರೆ ಮತ್ತು ಆ ಅರ್ಥದಲ್ಲಿ, ಹೇಳಿಕೆಯು ನಿಜವಲ್ಲದಿದ್ದರೆ, ಪ್ರಚಾರದ ಮೇಲೆ ಪರಿಣಾಮ ಬೀರುತ್ತದೆ” ಎಂದು ಪತ್ರದಲ್ಲಿ ಹೇಳಲಾಗಿದೆ. ಆರೋಪಗಳು “ಸ್ವಭಾವದಲ್ಲಿ ಅತ್ಯಂತ ಗಂಭೀರವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ಅಂತಹ ಆರೋಪಗಳು ಪ್ರಾದೇಶಿಕ ಗುಂಪುಗಳು ಮತ್ತು ನೆರೆಯ ರಾಜ್ಯಗಳ ನಿವಾಸಿಗಳ ನಡುವೆ ದ್ವೇಷವನ್ನು ಉಂಟುಮಾಡುವ ಗಂಭೀರ ಪರಿಣಾಮಗಳನ್ನು ಹೊಂದಿವೆ ಎಂದು ಅದು ಗಮನಿಸಿದೆ.
ಇದಕ್ಕೂ ಮೊದಲು, ಹರಿಯಾಣದಿಂದ ದೆಹಲಿಗೆ ಸರಬರಾಜು ಮಾಡುವ ನೀರಿನಲ್ಲಿ ಅಮೋನಿಯಾ ಪ್ರಮಾಣ ಹೆಚ್ಚಿದೆ ಎಂಬ ಆರೋಪಗಳ ಬಗ್ಗೆ ಜನವರಿ 28 ರೊಳಗೆ ವಾಸ್ತವಿಕ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಸಮಿತಿಯು ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು.
ಜನವರಿ 27 ರಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಜನರನ್ನು ನೀರಿನಿಂದ ವಂಚಿತಗೊಳಿಸುತ್ತಿರುವ ದೊಡ್ಡ ಪಾಪ ಮತ್ತೊಂದಿಲ್ಲ. ಹರಿಯಾಣದಿಂದ ಕಳುಹಿಸಲಾಗುತ್ತಿರುವ ನೀರಿನಲ್ಲಿ ವಿಷ ಬೆರೆಸುತ್ತಿದ್ದಾರೆ’’ ಎಂದು ಆರೋಪಿಸಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement