ಕುಮಟಾ : ಖ್ಯಾತ ವೈದ್ಯ ಡಾ.ಅನಿಲ ಹೆಗಡೆ ನಿಧನ ; ಕಣ್ಣುಗಳ ದಾನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯವರಾಗಿದ್ದ ಖ್ಯಾತ ವೈದ್ಯ ಡಾ.ಅನಿಲ ಹೆಗಡೆ (76) ಶನಿವಾರ ನಿಧನರಾಗಿದ್ದಾರೆ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರು ಪತ್ನಿ, ಭವಾನಿ, ಪುತ್ರರಾದ ಇಂಜಿಯರ್ ಆದ ವಿಜಯ  ಹಾಗೂ  ವೈದ್ಯರಾದ ಡಾ.ವಿಕ್ರಮ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅತ್ಯಂತ ಪ್ರತಿಭಾನ್ವಿತರಾಗಿದ್ದ ಡಾ. ಅನಿಲ ಹೆಗಡೆಯವರು ಹುಬ್ಬಳ್ಳಿಯಲ್ಲಿ ಎಂಬಿಬಿಎಸ್ ಮುಗಿಸಿ ಸ್ವಗ್ರಾಮಕ್ಕೆ ಬರಲು ನಿರ್ಧರಿಸಿ ಬಾಡಕ್ಕೆ ಬಂದು ಆಸ್ಪತ್ರೆ ತೆರೆದು ಜನ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಅವರು ಬಾಡದಲ್ಲಿದ್ದಾಗ ರೋಗಳಿಗಳಿಗೆ ತೊಂದರೆಯಾದಾಗ ರಾತ್ರಿ ಸಹ ಮನೆಮನೆಗೆ ಹೋಗಿ ಚಿಕಿತ್ಸೆ ನೀಡಿದ್ದರು. ಸೈಕಲ್‌ ಮೇಲೆ ಕರೆದಲ್ಲಿಗೆ ಹೋಗುತ್ತಿದ್ದರು.  ನಂತರ ಕುಮಟಾದ ನೆಲ್ಲೇಕೇರಿಯ ಬಸ್‌ ನಿಲ್ದಾಣದ ಸಮೀಪ ಆಸ್ಪತ್ರೆ ತೆರೆದಿದ್ದರು, ಈಗ ಕೆಲವು ವರ್ಷಗಳಿಂದ ಕುಮಟಾ ನಗರದ ಬಸ್ತಿಪೇಟೆಯಲ್ಲಿ ಕುಮಟಾ ನರ್ಸಿಂಗ್‌ ಹೋಂ ಹೆಸರಿನಲ್ಲಿ ಆಸ್ಪತ್ರೆ ಸ್ಥಾಪಿಸಿ ಸೇವೆ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು, ತಮ್ಮ ಮೂಲ ಮನೆಯಿರುವ ಹೊಲನಗದ್ದೆಯಲ್ಲೂ ಚಿಕಿತ್ಸಾಲಯ ತೆರೆದಿದ್ದರು.

1992ರಲ್ಲಿ ಗುಡೇಅಂಗಡಿ ಹವ್ಯಕ ಸಂಘಟನೆ ಮಾಡಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2019 ರಲ್ಲಿ ರೈತ ಸಂಘಟನೆ ಮಾಡಿ ಹೊಲನಗದ್ದೆ ರೈತ ಸಂಘಟನೆ ಕಟ್ಟಿದ್ದರು. ಕೃಷಿಯಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದು ತಮ್ಮದೇ ಹೊಲದಲ್ಲಿ ಭತ್ತ, ಕಗ್ಗ, ದ್ವಿದಾಳ ಧಾನ್ಯ ಬೆಳೆಯುತ್ತಿದ್ದರು. ಕಗ್ರಾಸ ಸೂರ್ಯ ಗ್ರಹಣದ ಸಂದರ್ಭದಲ್ಲಿ ಅರಬ್ಬಿ ಸಮುದ್ರ ತೀರಕ್ಕೆ ತೆರಳಿ ಜನರಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಪ್ರಯತ್ನಿಸುತ್ತಿದ್ದರು. ಪರಿಸರಪ್ರಿಯರಾಗಿದ್ದರು.
ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರು ಪಂ.ಡಕ್ಷರಿ ಗವಾಯಿಗಳಲ್ಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಲಿತಿದ್ದರು. ಸಂಗೀತ ಹಾಡುತ್ತಿದ್ದರು. ಸಂಗೀತ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕುಮಟಾದ ಸಾಂಸ್ಕೃತಿಕ ಸಂಘಟನೆಯದಾ ಸೌರಭದ ಅಧ್ಯಕ್ಷರೂ ಆಗಿದ್ದರು. ಹೆಗಡೆಯ ಶ್ರೀ ಲಕ್ಸ್ಮಿ ನರಸಿಂಹ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಜೇಷ್ಠಪುರ ದೇವಾಲಯದ ಜೋರ್ಣಾದ್ಧಾರ ಮಾಡಿಸಿದ್ದರು,

ಪ್ರಮುಖ ಸುದ್ದಿ :-   ರಾಜ್ಯದ ಜನತೆಗೆ `ಕರೆಂಟ್ʼ ಶಾಕ್’ : ಏಪ್ರಿಲ್ 1 ರಿಂದ ವಿದ್ಯುತ್ ದರ ಹೆಚ್ಚಳ...!

ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಉನ್ನತ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಿದ್ದರು.. ಇವರು ಹವ್ಯಕ ಸಂಘಟನೆ ಅಧ್ಯಕ್ಷರಾಗಿದ್ದಾಗ ಕೆಲವರು ಇವರ ಧನ ಸಹಾಯದ ಮೇಲೆ ಇಂಜಿಯರಿಂಗ್, ವೈದ್ಯಕೀಯ ಇನ್ನಿತರ ಪದವಿ ಪಡೆದಿದ್ದಾರೆ.
ಯುವಕರಿಗೆ ಸ್ಫೂರ್ತಿಯಾಗಿದ್ದ ಇವರು ತಮ್ಮ ಇಳಿವಯಸ್ಸಿನಲ್ಲೂ ನದಿಯಲ್ಲಿ ಈಜುವುದು ಹಾಗೂ ಗುಡ್ಡಬೆಟ್ಟಗಳಲ್ಲಿ ಚಾರಣ ಮಾಡುತ್ತಿದ್ದರು,.
ಸಂತಾಪ: ಇವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಶಾಸಕ ದಿನಕರ ಶೆಟ್ಟಿ, ಹವ್ಯಕ ವಲಯದ ಉಪಾಧ್ಯಕ್ಷರಾದ ಎನ್. ವಿ. ಹೆಗಡೆ, ಕೆನರಾ ಹೆಲ್ತ್ ಕೇರ್ ಸೆಂಟರ್ ಡಾ,.ಜಿ. ಜಿ. ಹೆಗಡೆ.ಗ್ರಾಪಂ ಅಧ್ಯಕ್ಷ ಎಂ.ಎಂ. ಹೆಗಡೆ, ಖ್ಯಾತ ಹಾರ್ಮೋನಿಯಂ ವಾದಕ ಗೌರೀಶ ಯಾಜಿ, ಕುಮಟಾದ ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷರಾದ ವಸಂತ ರಾವ್‌, ಕಾರ್ಯದರ್ಶಿ ವಿ.ಜಿ.ಹೆಗಡೆ ,ಕೂಜಳ್ಳಿ ಸ್ವರ ಸಂಗಮದ ಅಧ್ಯಕ್ಷರಾದ ಸುಬ್ರಾಯ ಭಟ್‌ ಕೂಜಳ್ಳಿ, ಕುಮಟಾದ ಸೌರಭ ಸಂಸ್ಥೆ ಸಂತಾಪ ಸೂಚಿಸಿದೆ.

ಶೇರ್ ಮಾಡಿ :

  1. Madhukar Hegde

    om shanti. PRAY ALMIGHTY TO REST HIS SOUL IN PEACE AND GIVE STRENGTH TO THE FAMILY MEMBERS TO BEAR THE LOSS.

ನಿಮ್ಮ ಕಾಮೆಂಟ್ ಬರೆಯಿರಿ

advertisement