ವೀಡಿಯೊ | ಫಿಲಡೆಲ್ಫಿಯಾದಲ್ಲಿ ವಿಮಾನ ಪತನ; ಕನಿಷ್ಠ 6 ಮಂದಿ ಸಾವಿನ ಶಂಕೆ

ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರಯಾಣಿಕರ ಜೆಟ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ನಡುವಿನ ಡಿಕ್ಕಿಯಲ್ಲಿ 60 ಕ್ಕೂ ಹೆಚ್ಚು ಜನರು ಸಾವಿಗೀಡಾದ ಘಟನೆ ನಡೆದ ಎರಡು ದಿನಗಳ ನಂತರ, ಮತ್ತೊಂದು ಜೆಟ್ ಶುಕ್ರವಾರ ಫಿಲಡೆಲ್ಫಿಯಾದ ಹೊರ ವಲಯದಲ್ಲಿ ಪತನಗೊಂಡಿದೆ.
ವೈದ್ಯಕೀಯ ಸಾರಿಗೆ ಈ ಜೆಟ್ ಟೇಕ್-ಆಫ್ ಆದ ಸುಮಾರು 30 ಸೆಕೆಂಡುಗಳ ನಂತರ ಶಾಪಿಂಗ್ ಮಾಲ್ ಬಳಿ ಅಪಘಾತಕ್ಕೀಡಾಗಿ ದೊಡ್ಡ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು. ಇದರಿಂದ ಹಲವಾರು ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಗಾಯಗೊಂಡವರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲವಾದರೂ, ಆರು ಜನರು ಸಾವಿಗೀಡಾಗಿರುವ ಶಂಕೆ ಇದೆ. ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ 4.8 ಕಿಮೀಗಿಂತ ಕಡಿಮೆ ದೂರದಲ್ಲಿ ಅಪಘಾತ ಸಂಭವಿಸಿದೆ.

ಮಿಸ್ಸೌರಿಯ ಸ್ಪ್ರಿಂಗ್‌ಫೀಲ್ಡ್‌ಗೆ ತೆರಳುತ್ತಿದ್ದ XA-UCI, ಲಿಯರ್‌ಜೆಟ್ 55 ಎಂಬ ವಿಮಾನವು ನಾಲ್ಕು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರನ್ನು ಹೊಂದಿತ್ತು, ಅದರಲ್ಲಿ ಒಬ್ಬ “ಚಿಕ್ಕ ಹುಡುಗ” ಇದ್ದಾನೆ ಎಂದು ಹೇಳಲಾಗಿದೆ. ಬದುಕುಳಿದವರ ಸಾಧ್ಯತೆ ಕಡಿಮೆ ಎಂದು ಜೆಟ್ ರೆಸ್ಕ್ಯೂ ಏರ್ ಆಂಬ್ಯುಲೆನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ಅವೇರ್ ಪ್ರಕಾರ ಮೆಡ್ ಜೆಟ್ಸ್ ಕಂಪನಿಗೆ ನೋಂದಾಯಿಸಲಾದ ಜೆಟ್ ಸಂಜೆ 6:06 ಕ್ಕೆ ಹೊರಟು 1,600 ಅಡಿ ಎತ್ತರಕ್ಕೆ ಏರಿತು, ಆದರೆ ಶೀಘ್ರದಲ್ಲೇ ರಾಡಾರ್‌ ಗೆ ಅದರ ಸಂದೇಶ ಸಿಗಲಿಲ್ಲ.
ಜಿಮ್ ಕ್ವಿನ್‌ಗೆ ಸೇರಿದ ಡೋರ್‌ಬೆಲ್ ಕ್ಯಾಮೆರಾ, ವಿಮಾನವು ಆಕಾಶದಿಂದ ಬಿದ್ದು ಸ್ಫೋಟಗೊಳ್ಳುವುದನ್ನು ಸೆರೆಹಿಡಿದಿದೆ. ವಿಮಾನವು ರೂಸ್‌ವೆಲ್ಟ್ ಮಾಲ್ ಬಳಿಯ ಛೇದಕದಲ್ಲಿ ಅಪ್ಪಳಿಸಿತು, ಪ್ರತ್ಯಕ್ಷದರ್ಶಿಗಳು ನೆಲಕ್ಕೆ ಅಪ್ಪಳಿಸುವ ಮೊದಲು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂತಾಪ ವ್ಯಕ್ತಪಡಿಸಿದ್ದಾರೆ. “ವಿಮಾನವು ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಪತನಗೊಂಡಿರುವುದು ತುಂಬಾ ದುಃಖಕರ ಸಂಗತಿಯಾಗಿದೆ. ಹೆಚ್ಚು ಮುಗ್ಧ ಆತ್ಮಗಳನ್ನು ಕಳೆದುಕೊಂಡಿದ್ದೇವೆ….” ಎಂದು ಅವರು ಹೇಳಿದ್ದಾರೆ. ಹಲವಾರು ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ ಎಂದು ಮೇಯರ್ ಚೆರೆಲ್ಲೆ ಪಾರ್ಕರ್ ಹೇಳಿದ್ದಾರೆ.
60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳೊಂದಿಗೆ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಾಷಿಂಗ್ಟನ್, ಡಿಸಿಯಲ್ಲಿ ಮೂರು ಸೈನಿಕರನ್ನು ಹೊತ್ತ ಸೇನಾ ಹೆಲಿಕಾಪ್ಟರ್‌ನೊಂದಿಗೆ ಮಧ್ಯ ಗಾಳಿಯಲ್ಲಿ ಡಿಕ್ಕಿ ಹೊಡೆದ ಎರಡು ದಿನಗಳ ನಂತರ ಈ ಅಪಘಾತ ಸಂಭವಿಸಿದೆ. 2009ರ ನಂತರ ಅಮೆರಿಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ 67 ಜನರು ಸಾವಿಗೀಡಾಗಿದ್ದಾರೆ.

ಪ್ರಮುಖ ಸುದ್ದಿ :-   ಸರಕು ಹಡಗು -ತೈಲ ಟ್ಯಾಂಕರ್‌ ಹಡಗು ಡಿಕ್ಕಿ ; ಮತ್ತೆ ನಿಜವಾದ 'ಆಧುನಿಕ ನಾಸ್ಟ್ರಾಡಾಮಸ್' ಭವಿಷ್ಯವಾಣಿ : ಟ್ರಂಪ್‌ ಹತ್ಯೆ ಯತ್ನದ ಬಗ್ಗೆ ಹೇಳಿದ್ದ ಈತನಿಗಿದೆ ಭಾರತದ ನಂಟು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement