ಊಟ-ತಿಂಡಿಯ ಬಗ್ಗೆ ಮಂಟಪದಲ್ಲೇ ಮುರಿದುಬಿದ್ದ ಮದುವೆ ; ನಂತ್ರ ಪೊಲೀಸ್‌ ಠಾಣೆಯಲ್ಲಿ ನಡೆಯಿತು ವಿವಾಹ…!

ಸೂರತ್: ಸೂರತ್‌ನಲ್ಲಿ ನಡೆದ ಮದುವೆ ವೇಳೆ ಊಟ ಕಡಿಮೆ ಬಿದ್ದಿದೆ ಎಂಬ ಕಾರಣದಿಂದ ಹಠಾತ್ತನೆ ಸ್ಥಗಿತಗೊಂಡಿದ್ದ ಮದುವೆಯ ವಿಧಿವಿದಾನವನ್ನು ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಸಿದ ಘಟನೆ ಭಾನುವಾರ ಸೂರತ್‌ನ ವರಾಚಾ ಪ್ರದೇಶದಲ್ಲಿ ನಡೆದಿದೆ.
ವರನ ಕುಟುಂಬವು ಮದುವೆ ಮುರಿದುಕೊಳ್ಳುವ ನಿರ್ಧಾರದ ವಿರುದ್ಧ ಪೊಲೀಸರನ್ನು ಮದುಮಗಳು ಸಂಪರ್ಕಿಸಿದ ನಂತರ ಪೊಲೀಸರು ಠಾಣೆಯಲ್ಲಿ ಮದುವೆ ಮಾಡಿಸಿದ್ದಾರೆ.
ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಅಲೋಕಕುಮಾರ ಪ್ರಕಾರ,ವರ ರಾಹುಲ್ ಪ್ರಮೋದ ಮಹ್ತೋ ಮತ್ತು ವಧು ಅಂಜಲಿಕುಮಾರಿ ಇಬ್ಬರೂ ಬಿಹಾರದವರು. ಸೂರತ್‌ನ ವರಾಚಾದ ಲಕ್ಷ್ಮಿ ಹಾಲ್‌ನಲ್ಲಿ ಅವರ ವಿವಾಹವಾಗಬೇಕಿತ್ತು.
ಮದುವೆಯ ಸಭಾಂಗಣದಲ್ಲಿ, ಸಂಬಂಧಿಕರು ಮತ್ತು ಅತಿಥಿಗಳಿಗೆ ನೀಡಲಾಗುತ್ತಿದ್ದ ಊಟ-ತಿಂಡಿಯಲ್ಲಿ ಕೊರತೆಯಾಗಿದೆ ಎಂದು ಆರೋಪಿಸಿ ವರನ ಕುಟುಂಬದವರು ವಿವಾಹ ಕಾರ್ಯಕ್ರಮವನ್ನು ಹಠಾತ್ತನೆ ಸ್ಥಗಿತಗೊಳಿಸುವ ವೇಳೆ ದಂಪತಿ ಮದುವೆ ಆಚರಣೆಗಳನ್ನು ಬಹುತೇಕ ಪೂರ್ಣಗೊಳಿಸಿದ್ದರು.

“ಹೆಚ್ಚಿನ ವಿಧಿವಿಧಾನಗಳು ಪೂರ್ಣಗೊಂಡಿವೆ. ಹೂಮಾಲೆಗಳ ವಿನಿಮಯ ಮಾತ್ರ ಉಳಿದಿದೆ. ಎರಡು ಕುಟುಂಬಗಳು ಆಹಾರ ಕಡಿಮೆ ಬಿತ್ತೆಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ವಿವಾದ ತಲೆದೋರಿದವು. ಅದರ ನಂತರ ವರನ ಕಡೆಯವರು ಮದುವೆಗೆ ಮುಂದುವರಿಸಲು ನಿರಾಕರಿಸಿದರು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.
ವರನ ಕುಟುಂಬದ ವರ್ತನೆಯಿಂದ ಅಸಮಾಧಾನಗೊಂಡ ವಧು ಮತ್ತು ಆಕೆಯ ಕುಟುಂಬದವರು ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದರು ಎಂದು ಡಿಸಿಪಿ ತಿಳಿಸಿದ್ದಾರೆ. “ವಧುವು ಮೆಹ್ತೋ ಅವರನ್ನು ವಿವಾಹವಾಗಲು ತಯಾರಿದ್ದರು. ಆದರೆ ವರನ ಕುಟುಂಬವು ಒಪ್ಪಲಿಲ್ಲ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ಪ್ರಭಾಕರ ಕಾರೇಕರ ನಿಧನ

ನಂತರ ಸಮಸ್ಯೆಯನ್ನು ಪರಿಹರಿಸಲು ವರ ಮತ್ತು ಅವರ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಸಮಸ್ಯೆಯನ್ನು ಪರಿಹರಿಸಲು ಮುಂದಾದ ನಂತರ ವರನ ಮನೆಯವರು ಮದುವೆ ನಡೆಸಲು ಒಪ್ಪಿಕೊಂಡರು. ವಧು ಅವರು ಮದುವೆ ಮಂಟಪಕ್ಕೆ ಹಿಂತಿರುಗಿದರೆ ಮತ್ತೆ ಜಗಳ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರಿಂದ ನಾವು ಅವರಿಗೆ ಠಾಣೆಯಲ್ಲಿಯೇ ವಿಧಿವಿಧಾನಗಳನ್ನು (ಮಾಲೆಗಳ ವಿನಿಮಯ) ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟೆವು ಎಂದು ಅಲೋಕಕುಮಾರ ಹೇಳಿದರು. ಯುವತಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಮಧ್ಯಪ್ರವೇಶಿಸಿದರು ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement