ಉತ್ತರ ಪ್ರದೇಶದ ಪಿಲಿಭಿತ್‌ನ ಹೊಲವೊಂದರಲ್ಲಿ ರೈತನೊಬ್ಬನಿಗೆ ಹುಲಿ ಎದುರಾಗಿದ್ದು, ಆತ ಕ್ಷಣಕಾಲ ಸ್ತಂಭಿಭೂತನಾಗಿದ್ದಾನೆ. ಈ ವಿಸ್ಮಯಕಾರಿಯಾಗಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊ ಕ್ಲಿಪ್‌ನಲ್ಲಿ ರೈತ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಹುಲಿ ಎದುರಾಗಿರುವುದನ್ನು ನೋಡಬಹುದು. ರೈತ ಬೈಕ್‌ನಲ್ಲಿ ಕುಳಿತಿದ್ದಾರೆಹಾಗೂ ಇನ್ನೊಬ್ಬ ವ್ಯಕ್ತಿ ಅವರ ಪಕ್ಕದಲ್ಲಿ ನಿಂತಿದ್ದಾರೆ. ಕೆಲವೇ ಹೆಜ್ಜೆಗಳ ದೂರದಲ್ಲಿ, ಹುಲಿ ಕಬ್ಬಿನ ಗದ್ದೆಯಿಂದ ಹೊರಬರುತ್ತಿರುವುದು ಕಂಡುಬಂದಿದೆ, ಮೊದಲಿಗೆ, ಹುಲಿಯನ್ನು ನೋಡಿದ ರೈತ ಒಂದು ಕ್ಷಣ ಸ್ತಂಭಿಭೂರಾಗಿದ್ದಾರೆ.
ಹುಲಿಯು ಅವರನ್ನು ನೋಡಿದಾಗ ಅವರು ಗಾಬರಿಯಾದರು. ನಂತರ ಹುಲಿ ಅವರತ್ತ ಸಾಗಲು ಪ್ರಾಋಂಭಿಸಿದಾಗ, ಅವರು ಅಲ್ಲಿಂದ ಜಾಗ ಖಾಲಿ ಮಾಡಲು ಬೈಕ್ ಅನ್ನು ತಿರುಗಿಸಿದ್ದಾರೆ. ಹುಲಿ ನಂತರ ಏನಾಯಿತೋ ಏನೋ ಅಲ್ಲಿಯೇ ನಿಂತಿತು. ಹಾಗೂ ಹುಲಿ ಇವರನ್ನು ಒಂದು ಸಲ ನೋಡಿ, ನಂತರ ಕಾಲು ದಾರಿಯಂತಿರುವ ಬೈಕ್ ಹೋಗುವ ರಸ್ತೆ ಮೇಲೆಯೇ ಮಲಗಿತು. ಸುರಕ್ಷಿತ ದೂರದಲ್ಲಿದ್ದ ರೈತ, ಅಂತಿಮವಾಗಿ ಅಲ್ಲಿಂದ ತೆರಳುವ ಮೊದಲು ಅದನ್ನೇ ದಿಟ್ಟಿಸಿ ನೋಡುತ್ತಿದ್ದ, ಅಲ್ಲಿಗೆ ವೀಡಿಯೊ ಮುಕ್ತಾಯವಾಗಿದೆ.
ಈ ಮೈಜುಂ ಎನ್ನಿಸುವ ವೀಡಿಯೊ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಗಮನ ಸೆಳೆಯುತ್ತವೆ. ಈ ಘಟನೆಯು ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಮೀಪವಿರುವ ಗ್ರಾಮದಲ್ಲಿ ನಡೆದಿದೆ.
ಪಿಲಿಭಿತ್ ಇಂತಹ ದೃಶ್ಯ ನೋಡುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2024 ರಲ್ಲಿ, ಅದೇ ಜಿಲ್ಲೆಯಲ್ಲಿ 60 ವರ್ಷದ ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಆತನನ್ನು ಕೊಂದುಹಾಕಿತ್ತು. ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ