ಜಿಂಕೆ ಎಂದರೆ ಮೈ ತುಂಬಾ ಚುಕ್ಕಿ ಇರುವ ಮುದ್ದಾದ ಪ್ರಾಣಿ ಎಂದೇ ಹೆಚ್ಚಾಗಿ ಭಾವಿಸುತ್ತಾರೆ. ಆದರೆ ಅಪರೂಪದ ಬಳಿ ಬಣ್ಣದ ಅಲ್ಬಿನೋ ಜಿಂಕೆ ಹಿಮಭರಿತ ಕಾಡಿನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವೈರಲ್ ಆಗಿರುವ ವೀಡಿಯೊದಲ್ಲಿ ಹಿಮ ತುಂಬಿದ ಕಾಡಿನಲ್ಲಿ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಸಂಪೂರ್ಣವಾಗಿ ಬಿಳಿ ಬಣ್ಣದ ಜಿಂಕೆ ನಿಂತುಕೊಂಡಿತ್ತು. ನಂತರ ಸ್ವಲ್ಪ ಸಮಯದ ನಂತರ ಅದು ಕಾಡಿನೊಳಕ್ಕೆ ಹೋಗಿದೆ. ಕಾಡಿನ ಮೂಲಕ ಆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಈ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಅಪ್ಲೋಡ್ ಮಾಡಿದ್ದಾರೆ.
ವೆದರ್ ಪೇಜ್ ಅಕ್ಯೂವೆದರ್, ಈ ಅಪರೂಪದ ಜಿಂಕೆಯ ವೀಡಿಯೊವನ್ನು ರಿಪೋಸ್ಟ್ ಮಾಡಿದೆ.
ಈ ಅದ್ಭುತ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ ಮತ್ತು ಇದಕ್ಕೆ ಸಾವಿರಾರು ನೆಟ್ಟಿಗರು ಲೈಕ್ಸ್ ನೀಡಿದ್ದಾರೆ. ಅನೇಕರು ಇ ವೀಡಿಯೊಕ್ಕೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಜಿಂಕೆಯನ್ನು “ಅದ್ಭುತ, ನಂಬಲು ಅಸಾಧ್ಯ” ಎಂದು ಕೆಲವರು ಹೇಳಿದ್ದಾರೆ. ”
ಅಲ್ಬಿನೋ ಜಿಂಕೆ ಹಿಂದಿನ ವಿಜ್ಞಾನ
ಅಲ್ಬಿನೋ ಜಿಂಕೆಗಳು ಕಾಡಿನಲ್ಲಿ ಅಪರೂಪದ ದೃಶ್ಯಗಳಲ್ಲಿ ಒಂದಾಗಿದೆ, ಇದು ಪ್ರತಿ 1,00,000 ಜನಿಸಿದ ಜಿಂಕೆ ಮರಿಗಳಲ್ಲಿ ಒಂದರಲ್ಲಿ ಮಾತ್ರ ಬಿಳಿಬಣ್ಣ ಕಂಡುಬರುತ್ತದೆ. ಬಿಳಿಬಣ್ಣದ ಅಲ್ಬಿನೋ ಜಿಂಕೆಗಳಲ್ಲಿ ಸಂಪೂರ್ಣವಾಗಿ ಮೆಲನಿನ್ ಅಂಶ ಇರುವುದಿಲ್ಲ, ಇದರಿಂದಾಗಿ ಅವುಗಳ ಶುದ್ಧ ಬಿಳಿ ತುಪ್ಪಳ ಮತ್ತು ಹೊಳೆಯುವ ಗುಲಾಬಿ ಕಣ್ಣುಗಳನ್ನು ಹೊಂದಿರುತ್ತವೆ. ಅಲ್ಬಿನೋ ಜಿಂಕೆಗಳು ಸಾಮಾನ್ಯವಾಗಿ ಮಂದ ದೃಷ್ಟಿ ಹೊಂದಿರುತ್ತವೆ ಮತ್ತು ಅವುಗಳಿಗೆ ಬಣ್ಣದ ಕಾರಣದಿಂದ ಅಡಗಲು ಕಷ್ಟವಾಗುತ್ತದೆ. ಹೀಗಾಗಿ ಇದು ಪರಭಕ್ಷಕಗಳಿಗೆ ಸುಲಭವಾಗಿ ಗುರಿಯಾಗುವ ಸಾಧ್ಯತೆ ಹೆಚ್ಚು.
ನಿಮ್ಮ ಕಾಮೆಂಟ್ ಬರೆಯಿರಿ