ಪತಿ ಪತ್ನಿಯರ ಜಗಳ ವಿಕೋಪಕ್ಕೆ ಹೋಗಿ ಪತ್ನಿ ನಂತರ ತನ್ನ ತವರು ಮನೆಗೆ ಹೋಗಿದ್ದಳು. ಜಗಳ ವಿಕೋಪಕ್ಕೆ ಹೋದ ನಂತರ ಅವರಿಬ್ಬರ ಸಂಬಂಧ ಹಳಸಿ ಅದು ವಿಚ್ಛೇದನದ ವರೆಗೆ ಬಂದು ನಿಂತಿತು. ವಿಚ್ಛೇದನ ಪ್ರಕರಣ ನ್ಯಾಯಾಲಯದ ಮುಂದೆ ಇದ್ದು, ಈ ವೇಳೆ ಪತಿ ಮಹಾಶಯ ತನ್ನ ಪತ್ನಿಗೆ ಕಿರುಕುಳ ನೀಡಲು ಅಸಾಮಾನ್ಯ ಮಾರ್ವನ್ನು ಅನುಸರಿಸಿದ್ದಾನೆ.
ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ಆತ ಪಾಟ್ನಾದಲ್ಲಿ ಬೈಕ್ ಸವಾರಿ ಮಾಡಿ ಉದ್ದೇಶಪೂರ್ವಕವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಬೈಕು ಪತ್ನಿಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಪೊಲೀಸರು ಹಾಕಿದ ದಂಡವನ್ನೆಲ್ಲ ಆನ್‌ಲೈನ್ ಟ್ರಾಫಿಕ್ ಚಲನ್ ಮೂಲಕ ಪತ್ನಿಯ ಫೋನ್‌ಗೆ ಕಳುಹಿಸಲಾಗುತ್ತಿದೆ. ಆರಂಭದಲ್ಲಿ, ಹೆಂಡತಿ ಈ ದಂಡವನ್ನು ಪಾವತಿಸಿದ್ದಾಳೆ, ಆದರೆ ಪದೇ ಪದೇ ದಂಡ ಬರುವುದನ್ನು ನೋಡ ಪತ್ನಿ ಗಾಬರಿಯಾದಳು.
ಇದು ಹೆಚ್ಚಾದಂತೆ ಇದು ತನಗೆ ಕಿರುಕುಳ ನೀಡಲು ತನ್ನ ಪತಿ ನಡೆಸಿರುವ ಸಂಚು ಎಂಬುದು ಗೊತ್ತಾದ ನಂತರಅವಳು ಪೊಲೀಸ್ ಠಾಣೆ ಸಂಪರ್ಕಿಸಿದ್ದಾಳೆ. .
ಬಿಹಾರದ ಮುಜಾಫರಪುರದ ಕಾಜಿ ಮೊಹಮ್ಮದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯ ವಿವಾಹ ಕಳೆದ ವರ್ಷ ಪಾಟ್ನಾದ ವ್ಯಕ್ತಿಯ ಜೊತೆ ನಡೆದಿತ್ತು. ಮದುವೆಯ ಅಂಗವಾಗಿ, ಮಹಿಳೆಯ ತಂದೆ ವರನಿಗೆ ಬೈಕು ಉಡುಗೊರೆಯಾಗಿ ನೀಡಿದ್ದರು, ಆದರೆ ಅದನ್ನು ಮಗಳ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಆದರೆ, ಮದುವೆಯ ಸುಮಾರು ಒಂದೂವರೆ ತಿಂಗಳ ನಂತರ, ದಂಪತಿ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನದ ವರೆಗೆ ಬಂದು ನಿಂತಿತು.
ನಂತರ ಹೆಂಡತಿ ತನ್ನ ಗಂಡನ ಮನೆಯನ್ನು ತೊರೆದು ತನ್ನ ತವರು ಮನೆಗೆ ಬಂದು ಉಳಿದಳು.
ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಕದ ತಟ್ಟುವ ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಿತು. ಏತನ್ಮಧ್ಯೆ, ಪತಿ ಉದ್ದೇಶಪೂರ್ವಕವಾಗಿ ಬೈಕ್ ಬಳಸಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಲು ಪ್ರಾರಂಭಿಸಿದ. ಆತನಿಗೆ ತನ್ನ ಹೆಂಡಿತಿಗೆ ಕಿರುಕುಳ ನೀಡುವುದು ಉದ್ದೇಶವಾಗಿತ್ತು. ಯಾಕೆಂದರೆ ಬೈಕ್ ಪತ್ನಿಯ ಹೆಸರಿನಲ್ಲಿ ನೋದಾಯಿತವಾಗಿದ್ದರಿಂದ ದಂಡಗಳು ಹೆಂಡತಿಯ ಹೆಸರಿನಲ್ಲಿ ಬೀಳುತ್ತಿದ್ದವು. ಮಹಿಳೆಯ ತಂದೆಯ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಟ್ರಾಫಿಕ್ ಪೊಲೀಸರು ಅನೇಕ ಚಲನ್‌ಗಳನ್ನು ಹೊರಡಿಸಿದ್ದಾರೆ, ಇವೆಲ್ಲವನ್ನೂ ಅವರ ಮಗಳ ಫೋನ್‌ಗೆ ಕಳುಹಿಸಲಾಗಿದೆ. ಆರಂಭದಲ್ಲಿ, ಅವರು ದಂಡವನ್ನು ಪಾವತಿಸಿದರು, ಆದರೆ ಅದು ಹೆಚ್ಚಾಗುತ್ತಿದ್ದಂತೆ, ಅವರು ಈ ಬಗ್ಗೆ ಪರಿಶೀಲನೆ ನಡೆಸಲು ಮುಂದಾದರು.
ಬೈಕ್ ಹಿಂತಿರುಗಿಸಲು ನಿರಾಕರಣೆ..
ವಿಚ್ಛೇದನದ ವಿಷಯದಲ್ಲಿ ಕೋಪಗೊಂಡ ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ನೋಂದಾಯಿಸಲಾದ ಬೈಕ್‌ನೊಂದಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ಮುಂದುವರಿಸಿದ. ಮಹಿಳೆ ಆತನನ್ನು ಸಂಪರ್ಕಿಸಿ ಬೈಕ್ ವಾಪಸ್ ನೀಡುವಂತೆ ಕೇಳಿದಾಗ ಅದನ್ನು ಕೊಡಲು ನಿರಾಕರಿಸಿದ್ದಾನೆ. ವಿಚ್ಛೇದನ ನೀಡುವವರೆಗೂ ವಾಪಸ್ ನೀಡುವುದಿಲ್ಲ ಎಂದು ಹೇಳಿದ್ದಾನೆ.
ಪತಿಯ ವರ್ತನೆಯಿಂದ ಹತಾಶಳಾದ ಮಹಿಳೆ ಪಾಟ್ನಾ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದು, ಅವರು ಸ್ಥಳೀಯ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ. ತನ್ನ ತಂದೆಯೊಂದಿಗೆ ಕಾಜಿ ಮೊಹಮ್ಮದ್‌ಪುರ ಪೊಲೀಸ್ ಠಾಣೆಗೆ ತಲುಪಿದ ಮಹಿಳೆಗೆ ಬೈಕ್ ಇನ್ನೂ ಆಕೆಯ ಪತಿ ಬಳಿ ಇದೆ ಎಂಬುದನ್ನು ಹೇಗೆ ಸಾಬೀತುಪಡಿಸಬಹುದು ಎಂದು ಕೇಳಿದರು.
ಆಕೆಯ ಪತಿ ವಾಹನವನ್ನು ಬಳಸುತ್ತಿರುವುದನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸಲು ಪೊಲೀಸರು ಅವರಿಗೆ ಸಲಹೆ ನೀಡಿದರು, ಇದು ಪ್ರಕರಣಕ್ಕೆ ಸಾಕ್ಷಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ