ಭಾರತದ ವಿರುದ್ಧ ಸೋಲಿನ ನಂತರವೂ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ 2025 ಸೆಮಿಫೈನಲ್‌ಗೆ ತಲುಪಲು ಅವಕಾಶವಿದೆಯೇ..? ಅದು ಹೇಗೆ..?

ಭಾನುವಾರ (ಫೆಬ್ರವರಿ 23) ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ರ ಎ ಗುಂಪಿನ ಪಂದ್ಯದಲ್ಲಿ ಭಾರತದ ಎದುರು ಸೋತ ನಂತರ ಪಾಕಿಸ್ತಾನದ ಸೆಮಿಫೈನಲ್‌ಗೆ ತಲುಪುವ ಆಸೆಗೆ ಭಾರಿ ಹೊಡೆತ ಬಿದ್ದಿದೆ. ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸುಲಭದ ಜಯಗಳಿಸಿತು. ದುಬೈನಲ್ಲಿ ಭಾರತದ ವಿರುದ್ಧದ ಸೋಲು ಕಂಡ ನಂತರದಲ್ಲಿ ಇದು ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಸತತ ಎರಡನೇ ಸೋಲಾಗಿದೆ, ಮತ್ತು ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಪಾಕಿಸ್ತಾನ ಭಾನುವಾರ ಬಾರತದ ವಿರುದ್ಧವೂ ಸೋತಿದೆ. ಸೆಮಿಫೈನಲ್ ಪ್ರವೇಶ ಪಾಕಿಸ್ತಾನಕ್ಕೆ ಕಷ್ಟಕರವಾಗಿ ಕಂಡರೂ, ಅವರ ಅವಕಾಶಗಳು ಸಂಪೂರ್ಣವಾಗಿ ಬಂದ್‌ ಆಗಿಲ್ಲ. ನಾಕೌಟ್ ಹಂತವನ್ನು ತಲುಪಲು ಪಾಕಿಸ್ತಾನವು ಬಾಂಗ್ಲಾದೇಶದ ವಿರುದ್ಧ ತನ್ನ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕು ಮತ್ತು ನ್ಯೂಜಿಲ್ಯಾಂಡ್‌ ಉಳಿದ ಎಲ್ಲ ಪಂದ್ಯಗಳನ್ನೂ ಸೋಲೇಬೇಕು ಈವರೆಗೆ ಆಡಿದ ಎರಡು ಪಂದ್ಯಗಳಿಂದ 0 ಅಂಕಗಳೊಂದಿಗೆ, ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನದ ತಂಡವು ಗುಂಪಿನ ಎ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಪ್ರಮುಖ ಸುದ್ದಿ :-   'ಸತ್ತಿದ್ದಾನೆ' ಎಂದು ಭಾವಿಸಲಾಗಿದ್ದ ತಮ್ಮ 35 ವರ್ಷಗಳ ಬಳಿಕ ಪತ್ತೆ : ಕುಟುಂಬ ಒಂದಾಗಿಸಿದ ಮತದಾರರ 'ಎಸ್‌ಐಆರ್‌' ಪರಿಶೀಲನೆ !

ಎಂಟು ತಂಡಗಳ ಪಂದ್ಯಾವಳಿಯಲ್ಲಿ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದ್ದರೂ, ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಆಸೆ ಜೀವಂತವಾಗಿದೆ. ರಾವಲ್ಪಿಂಡಿಯಲ್ಲಿ ಸೋಮವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025 ರ ಆರನೇ ಪಂದ್ಯದಲ್ಲಿ ಬಾಂಗ್ಲಾದೇಶವು ನ್ಯೂಜಿಲೆಂಡ್ ಅನ್ನು ಸೋಲಿಸಿದರೆ ಮೊಹಮ್ಮದ್ ರಿಜ್ವಾನ್ ತಂಡವು ಪಾಕಿಸ್ತಾನ ಗುರುವಾರ (ಫೆಬ್ರವರಿ 27) ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ ಮತ್ತು ಭಾರತವು ಭಾನುವಾರ (ಮಾರ್ಚ್ 2) ದುಬೈನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ ಪಾಕಿಸ್ತಾನಕ್ಕೆ ಸೆಮಿ ಫೈನಲಿಗೆ ಏಅವಕಾಶವಿದೆ. ಅಂತಹ ಸನ್ನಿವೇಶದಲ್ಲಿ, ಭಾರತವು ಮೂರು ಪಂದ್ಯಗಳಿಂದ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರಲಿದೆ. ಮತ್ತು ಇತರ ಮೂರು ತಂಡಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್-ಎ ಗುಂಪಿನಲ್ಲಿ ಮೂರು ಪಂದ್ಯಗಳಿಂದ ತಲಾ 2 ಅಂಕಗಳನ್ನು ಪಡೆಯಲಿವೆ.

ಅಂತಹ ಸನ್ನಿವೇಶದಲ್ಲಿ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡವು 2 ನೇ ಸ್ಥಾನ ಪಡೆಯಲಿದ್ದು, ಆಗ ಪಾಕಿಸ್ತಾನಕ್ಕೆ ಅವಕಾಶ ಸಿಗುವ ಸಾಧ್ಯತೆಯಿದೆ.
ಆದರೆ ಸೋಮವಾರ ಬಾಂಗ್ಲಾದೇಶವನ್ನು ನ್ಯೂಜಿಲೆಂಡ್ ಸೋಲಿಸಿದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡೂ ಚಾಂಪಿಯನ್ಸ್ ಟ್ರೋಫಿ 2025 ರಿಂದ ಹೊರಬೀಳಲಿವೆ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಗ್ರೂಪ್ ಎ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೂ ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯ ಆಸೆ ಅಲ್ಲಿಗೆ ಕೊನೆಗೊಳ್ಳಲಿದೆ.
ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಒಮ್ಮೆ ಮಾತ್ರ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯನ್ನು ರಿಕಿ ಪಾಂಟಿಂಗ್ ಅವರ ಆಸ್ಟ್ರೇಲಿಯನ್ ತಂಡವು ಸಾಧಿಸಿತ್ತು. ಅದು 2006 ರಲ್ಲಿ ಮತ್ತು ನಂತರ 2009 ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಪ್ರಮುಖ ಸುದ್ದಿ :-   ಎವರೆಸ್ಟ್‌ ಏರುವವರಿಂದಲೇ ಈಗ ಹಿಮನದಿಗೆ ಕಂಟಕ ; ದಿನಕ್ಕೆ 6000 ಲೀಟರ್ ಮೂತ್ರದಿಂದ ಕರಗುತ್ತಿದೆ ಹಿಮ....!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement