ವಾಷಿಂಗ್ಟನ್ : ಅಮೆರಿಕಕ್ಕೆ ಭೇಟಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಜತೆ ನಡೆಸಿದ ಮಾತುಕತೆ ವೇಳೆ ಪರಸ್ಪರ ಕಿತ್ತಾಡಿದ್ದಾರೆ. ಮಾಧ್ಯಮದ ಎದುರೇ ಕಿತ್ತಾಡಿದ ನಂತರ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಸಭೆಯಿಂದ ಹೊರನಡೆದರು.
ಶುಕ್ರವಾರ ಶ್ವೇತಭವನಕ್ಕೆ ಆಗಮಿಸಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ವೇಳೆ ಖನಿಜಗಳ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿತು. ಆದರೆ ಮಾತುಕತೆ ವೇಳೆ ಜಾಗತಿಕ ಮಾಧ್ಯಮಗಳ ಮುಂದೆ ಅದು ಅಭೂತಪೂರ್ವ ಜಟಾಪಟಿಯಾಗಿ ಮಾರ್ಪಟ್ಟಿತು. ಹೀಗಾಗಿ ಯಾವುದೇ ಒಪ್ಪಂದಕ್ಕೆ ಸಹಿ ಮಾಡಲಾಗಿಲ್ಲ, ಯಾವುದೇ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿಲ್ಲ. ಜಟಾಪಟಿ ಘಟನೆಯ ನಂತರ ಝೆಲೆನ್ಸ್ಕಿ ಅವರಿಗೆ ಶ್ವೇತಭವನವನ್ನು ತೊರೆಯುವಂತೆ ಸೂಚಿಸಲಾಯಿತು.
ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಇದು ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ನಡೆಯುತ್ತಿದ್ದ ವೇಳೆ ಝೆಲೆನ್ಸ್ಕಿ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಝೆಲೆನ್ಸ್ಕಿ ಅಮೆರಿಕದ ಬೆಂಬಲಕ್ಕೆ ಕೃತಜ್ಞತೆ ತೋರಿಸದಿರುವುದು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ರಾಜತಾಂತ್ರಿಕ ನಿಲುವನ್ನು ಚರ್ಚಿಸಲು ಪ್ರಯತ್ನಿಸಿದ್ದಕ್ಕೆ ಟ್ರಂಪ್ ಮತ್ತು ವ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದರು. ನೀವು ಇದೇ ರೀತಿ ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉಕ್ರೇನಿಯನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಅವರಿಗೆ ಮೂರನೇ ಮಹಾಯುದ್ಧದ ಜೊತೆ ಜೂಜಾಡುತ್ತಿದ್ದೀರಿ” ಎಂದು ಹೇಳಿದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಝೆಲೆನ್ಸ್ಕಿ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ ಸುಮಾರು 40 ನಿಮಿಷಗಳ ಸೌಹಾರ್ದ ಮಾತುಕತೆಗಳು ಮತ್ತು ಔಪಚಾರಿಕತೆಗಳು ನಡೆದವು. ಶಾಂತಿಯ ಹಾದಿ ಮತ್ತು ಸಮೃದ್ಧಿಯ ಹಾದಿಯೂ ರಾಜತಾಂತ್ರಿಕತೆಯ ಹಾದಿಯಲ್ಲಿ ತೊಡಗಿಕೊಂಡಿರಬಹುದು” ಎಂದು ಝೆಲೆನ್ಸ್ಕಿ ಅವರು ವ್ಯಾನ್ಸ್ ಅವರಿಗೆ ಪ್ರತಿಯಾಗಿ ವಾದಿಸಿದಾಗ ಪರಿಸ್ಥಿತಿ ಬಿಗಡಾಯಿಸಿತು. 50 ನಿಮಿಷಗಳ ಸಭೆಯಲ್ಲಿ ಉಳಿದ 10 ನಿಮಿಷಗಳ ಕಾಲ ಬಹುತೇಕ ಬಿಸಿಬಿಸಿ ಚರ್ಚೆ ನಡೆಯಿತು.
ಉಕ್ರೇನ್ ರಾಜತಾಂತ್ರಿಕತೆಯ ಮೂಲಕ ರಷ್ಯಾದ ಜೊತೆ ಶಾಂತಿ ಸ್ಥಾಪಿಸಬಹುದು ಎಂದು ವ್ಯಾನ್ಸ್ ಹೇಳಿದಾಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಹಿಂದೆ ಮಾಡಿಕೊಂಡ ಒಪ್ಪಂದಗಳನ್ನು ನಿರಂತರವಾಗಿ ಉಲ್ಲಂಘಿಸಿದ್ದಾರೆ. ಆದ್ದರಿಂದ ಅಮೆರಿಕ ರಷ್ಯಾದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಹೇಳಿದರು.
ವ್ಯಾನ್ಸ್ ಅವರ “ಶಾಂತಿಗಾಗಿ ರಾಜತಾಂತ್ರಿಕತೆ” ಹೇಳಿಕೆಗೆ ಪ್ರತ್ಯುತ್ತರ ನೀಡಿದ ಝೆಲೆನ್ಸ್ಕಿ , 2019 ರಲ್ಲಿ ವಿಫಲವಾದ ಕದನ ವಿರಾಮ ಸೇರಿದಂತೆ ಮೂರು ವರ್ಷಗಳ ಹಿಂದೆ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ಕಾರಣವಾದ ವರ್ಷಗಳಲ್ಲಿ ರಷ್ಯಾದ ಆಕ್ರಮಣಶೀಲತೆಯನ್ನು ಸೂಚಿಸಿದರು. “ಯಾರೂ ಅವರನ್ನು ತಡೆಯಲಿಲ್ಲ ಎಂದು ಅವರು ರಷ್ಯಾದ ಅಧ್ಯಕ್ಷ ಪುತಿನ್ ಅವರನ್ನು ಉಲ್ಲೇಖಿಸಿ ಹೇಳಿದರು.
“ಅವರು (ಪುತಿನ್) ನಮ್ಮ ಜನರನ್ನು ಕೊಂದರು ಮತ್ತು ಅವರು ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಿಲ್ಲ” ಎಂದು ಜೆಲೆನ್ಸ್ಕಿ ಆರೋಪಿಸಿದರು. “ಜೆಡಿ, ನೀವು ಯಾವ ರೀತಿಯ ರಾಜತಾಂತ್ರಿಕತೆಯ ಬಗ್ಗೆ ಮಾತನಾಡುತ್ತಿದ್ದೀರಿ? ನಿಮ್ಮ ಅರ್ಥವೇನು? ಎಂದು ಪ್ರಶ್ನಿಸಿದರು.
ಇದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್, “ನಿಮ್ಮ ದೇಶದ ವಿನಾಶವನ್ನು ಕೊನೆಗೊಳಿಸುವ ರೀತಿಯೇ ಎಂದು ಪ್ರಶ್ನಿಸಿದರು. ನಂತರ ವ್ಯಾನ್ಸ್ ಅವರು ಅಗೌರವ ಎಂದು ಅಮೆರಿಕನ್ ಮಾಧ್ಯಮದ ಮುಂದೆಯೇ ಆರೋಪಿಸಿದರು.
ರಾಜತಾಂತ್ರಿಕತೆ ಮೂಲಕ ಶಾಂತಿ ಒಪ್ಪಂದಕ್ಕೆ ಬರಲು ಯಾವುದೇ ಮನಸ್ಥಿತಿಯಿಲ್ಲದೆ ಝೆಲೆನ್ಸ್ಕಿ ಶ್ವೇತಭವನಕ್ಕೆ ಕಾಲಿಟ್ಟರು ಎಂಬುದು ಒಂದು ಹಂತದಲ್ಲಿ ಸ್ಪಷ್ಟವಾಯಿತು, ರಷ್ಯಾ ಸಂಪೂರ್ಣ ಯುದ್ಧಕ್ಕೆ ರಷ್ಯಾ ಬೆಲೆ ತೆರಬೇಕು ಎಂದು ಅವರು ಒತ್ತಾಯಿಸಿದರು.
ಟ್ರಂಪ್ ಮಧ್ಯಸ್ಥಿಕೆ: ದಿ ಫಾಲ್ಔಟ್
ಅಲ್ಲಿಯವರೆಗೆ ಸೀಮಿತವಾಗಿದ್ದ ಝೆಲೆನ್ಸ್ಕಿ ಮತ್ತು ಉಪಾಧ್ಯಕ್ಷರ ಮಾತುಕತೆ ವೇಳೆ ಟ್ರಂಪ್ ಮಧ್ಯಪ್ರವೇಶಿಸಿದರು. ನೀವು ಧೈರ್ಯವಂತರಿರಬಹುದು, ಆದ್ರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲಬೇಕು. ಇಲ್ಲದಿದ್ದರೆ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದರು. ಈ ವೇಳೆ ಝಲೆನ್ಸ್ಕಿ.. ಪತ್ರಕರ್ತರ ಎದುರು ನೀವು ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ ಎಂದು ಹೇಳಿದಕ್ಕೆ ಕೆಂಡವಾದ ಟ್ರಂಪ್ ನಿಮ್ಮ ನಡೆಯಿಂದ 3ನೇ ಮಹಾಯುದ್ಧ ಸಂಭವಿಸಬಹುದು. ಇದರಿಂದ ಇಡೀ ಜಗತ್ತು ಸಮಸ್ಯೆಗೆ ಸಿಲುಕಿಕೊಳ್ಳಬಹುದು ಎಂದು ಟ್ರಂಪ್ ಘರ್ಜಿಸಿದರು
ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರನ್ನು ಉಲ್ಲೇಖಿಸಿದ ಟ್ರಂಪ್, ಅಮೆರಿಕ ಉಕ್ರೇನ್‌ಗೆ $ 350 ಬಿಲಿಯನ್ ಮತ್ತು ಮಿಲಿಟರಿ ಉಪಕರಣಗಳನ್ನು “ಮೂರ್ಖ ಅಧ್ಯಕ್ಷ”ರ ಮೂಲಕ ನೀಡಿದೆ. ಅಮೆರಿಕ ಮಿಲಿಟರಿ ಬೆಂಬಲವಿಲ್ಲದೆ, ಯುದ್ಧವು ಎರಡು ವಾರಗಳಲ್ಲಿ ಕೊನೆಗೊಳ್ಳುತ್ತಿತ್ತು ಮತ್ತು ಉಕ್ರೇನ್ ದೊಡ್ಡ ತೊಂದರೆಯಲ್ಲಿರುತ್ತಿತ್ತು ಎಂದು ಹೇಳಿದರು.
“ಈ ರೀತಿಯ ವ್ಯವಹಾರ ಮಾಡುವುದು ತುಂಬಾ ಕಷ್ಟಕರವಾಗುತ್ತದೆ. ವರ್ತನೆಗಳು ಬದಲಾಗಬೇಕಾಗಿದೆ ಎಂದು ಟ್ರಂಪ್ ಹೇಳಿದರು.
ಶಾಂತಿ ಒಪ್ಪಂದದ ಭಾಗವಾಗಿ 2022 ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಒದಗಿಸಿದ ಬೆಂಬಲಕ್ಕೆ ಬದಲಾಗಿ ಉಕ್ರೇನ್‌ನ ಅಮೆರಿಕವು ಖನಿಜಗಳನ್ನು ಪಡೆಯುವ ಒಪ್ಪಂದದ ಬಗ್ಗೆ ಟ್ರಂಪ್ ಆಡಳಿತವು ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಬೇಕಿತ್ತು.
ಸಭೆಯ ನಂತರ, ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿ, “ಅವರು (ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ) ಶಾಂತಿಯನ್ನು ಬಯಸಿದ ವ್ಯಕ್ತಿಯಾಗಿರಲಿಲ್ಲ, ಮತ್ತು ಅವರು (ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ) ರಕ್ತಪಾತವನ್ನು ಕೊನೆಗೊಳಿಸಲು ಬಯಸಿದರೆ ಮಾತ್ರ ನಾನು ಮಾತುಕತೆಯಲ್ಲಿ ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು.
ಇದೇವೇಳೆ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗಿನ ಘರ್ಷಣೆಗೆ ಕ್ಷಮೆಯಾಚಿಸಲು ಪದೇ ಪದೇ ನಿರಾಕರಿಸಿದರು, ಆದರೆ ಎರಡು ದೇಶಗಳ ಸಂಬಂಧವನ್ನು “ಉಳಿಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ