ಸುದೀರ್ಘ ಪ್ರಯಾಣದ ನಂತರ, ಅಮೆರಿಕದ ಕಂಪನಿಯೊಂದು ಚಂದ್ರನ ಮೇಲೆ ಇಳಿಯಲು ಕೆಲವೇ ಗಂಟೆಗಳ ದೂರದಲ್ಲಿದೆ. ಅದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡುವ ಎರಡನೇ ಖಾಸಗಿ ಲ್ಯಾಂಡರ್ ಆಗಲಿದೆ.
ಫೈರ್‌ಫ್ಲೈ ಏರೋಸ್ಪೇಸ್‌ನ ಬ್ಲೂ ಘೋಸ್ಟ್ ಮಿಷನ್ 1 ಭಾನುವಾರ ಅಮೆರಿಕದ ಈಸ್ಟರ್ನ್ ಸಮಯ (0834 GMT) 3:34 ಕ್ಕಿಂತ ಮುಂಚೆಯೇ ಲ್ಯಾಂಡಿಂಗ್ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ. ಇದು ಚಂದ್ರನ ಮೇಲೆ ಮಾನ್ಸ್ ಲ್ಯಾಟ್ರೀಲ್ ಸಮೀಪವಿರುವ ಸ್ಥಳದ ಮೇಲೆ ಲ್ಯಾಂಡ್ ಮಾಡಲು ಉದ್ದೇಶಿಸಿದೆ. ಇದು ಚಂದ್ರನ ಈಶಾನ್ಯ ಸಮೀಪದಲ್ಲಿರುವ ಮೇರ್ ಕ್ರಿಸಿಯಂನಲ್ಲಿನ ಜ್ವಾಲಾಮುಖಿ ಲಕ್ಷಣ ಇರುವ ಪ್ರದೇಶವಾಗಿದೆ.
ಕಂಪನಿಯು ಈ ಬಗ್ಗೆ ಶನಿವಾರ ಸಂಜೆ X ನಲ್ಲಿ ಪೋಸ್ಟ್ ಮಾಡಿದೆ.
ಮೊದಲ ಬಾರಿಗೆ ಖಾಸಗಿ ಕಂಪನಿ ಚಂದ್ರನ ಮೇಲೆ ಲ್ಯಾಂಡಿಂಗ್ ಮಾಡಿದ ಒಂದು ವರ್ಷದ ನಂತರ”ಘೋಸ್ಟ್ ರೈಡರ್ಸ್ ಇನ್ ದಿ ಸ್ಕೈ” ಎಂಬ ಹೆಸರಿನ ಈ ಕಾರ್ಯಾಚರಣೆಯು ನಡೆಯುತ್ತಿದೆ. ಇದು ವೆಚ್ಚವನ್ನು ಕಡಿತ ಮಾಡುವ ಮತ್ತು ಗಗನಯಾತ್ರಿಗಳನ್ನು ಚಂದ್ರನ ಮೇಲೆ ಕೊಂಡೊಯ್ಯುವ ಉದ್ದೇಶ ಹೊಂದಿರುವ ಆರ್ಟೆಮಿಸ್ ಬಾಹ್ಯಾಕಾಶ ನೌಕೆಕೆ ಸಹಕಾರ ನೀಡುವ ನಾಸಾ(NASA)ದ ಸಹಭಾಗಿತ್ವದ ಭಾಗವಾಗಿದೆ.
ಸುಮಾರು ಒಂದು ಹಿಪಪಾಟಮಸ್ ಗಾತ್ರದ ಗೋಲ್ಡನ್ ಲ್ಯಾಂಡರ್ ಜನವರಿ 15 ರಂದು ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್‌ನಲ್ಲಿ ಉಡಾವಣೆಯಾಯಿತು, ಚಂದ್ರನತ್ತ ಹೋಗುವ ಮಾರ್ಗದಲ್ಲಿ ಇದು ಭೂಮಿ ಮತ್ತು ಚಂದ್ರನ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಿತು.
ಚಂದ್ರನ ಮಣ್ಣಿನ ವಿಶ್ಲೇಷಕ, ವಿಕಿರಣ-ಸಹಿಷ್ಣು ಕಂಪ್ಯೂಟರ್ ಮತ್ತು ಚಂದ್ರನನ್ನು ನ್ಯಾವಿಗೇಟ್ ಮಾಡಲು ಅಸ್ತಿತ್ವದಲ್ಲಿರುವ ಜಾಗತಿಕ ಉಪಗ್ರಹ ಸಂಚರಣೆ ವ್ಯವಸ್ಥೆಯನ್ನು ಬಳಸುವ ಕಾರ್ಯಸಾಧ್ಯತೆಯನ್ನು ಪರೀಕ್ಷಿಸುವ ಪ್ರಯೋಗ ಸೇರಿದಂತೆ ಹತ್ತು ಉಪಕರಣಗಳನ್ನು ಬ್ಲೂ ಘೋಸ್ಟ್ ಒಯ್ದಿದೆ.
ಪೂರ್ಣ ಚಂದ್ರನ ದಿನ (14 ಭೂಮಿಯ ದಿನಗಳು)ದ ವರೆಗೆ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಬ್ಲೂ ಘೋಸ್ಟ್ ಮಾರ್ಚ್ 14 ರಂದು ಗ್ರಹಣದ ಹೈ-ಡೆಫಿನಿಷನ್ ಚಿತ್ರಣವನ್ನು ಸೆರೆಹಿಡಿಯುವ ನಿರೀಕ್ಷೆಯಿದೆ.
ಮಾರ್ಚ್ 16 ರಂದು, ಇದು ಚಂದ್ರನ ಸೂರ್ಯಾಸ್ತವನ್ನು ರೆಕಾರ್ಡ್ ಮಾಡುತ್ತದೆ, ಸೌರ ಪ್ರಭಾವದ ಅಡಿಯಲ್ಲಿ ಮೇಲ್ಮೈ ಮೇಲೆ ಧೂಳು ಹೇಗೆ ಹೊರಹೊಮ್ಮುತ್ತದೆ ಎಂಬುದರ ಒಳನೋಟಗಳನ್ನು ನೀಡುತ್ತದೆ.
ಫೆಬ್ರವರಿ 2024 ರಲ್ಲಿ, ಇಂಟ್ಯೂಟಿವ್ ಮೆಷಿನ್ಸ್ ಸಾಫ್ಟ್ ಎಂಬ ಕಂಪನಿಯು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಮೊದಲ ಖಾಸಗಿ ಕಂಪನಿಯಾಗಿದೆ. 1972 ರ ಅಪೊಲೊ 17 ಮಿಷನ್ ನಂತರ ಇದು ಮೊದಲ ಅಮೆರಿಕದ ಲ್ಯಾಂಡಿಂಗ್ ಕೂಡ ಆಗಿದೆ.
ಆದಾಗ್ಯೂ, ಒಂದು ದುರ್ಘಟನೆಯಿಂದ ಇದಕ್ಕೆ ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. ಯಾಕೆಂದರೆ ಲ್ಯಾಂಡರ್ ತುಂಬಾ ವೇಗವಾಗಿ ಚಂದ್ರನ ಮೇಲೆ ಇಳಿಯಿತು.ಇದರಿಂದಾಗಿ ಇದಕ್ಕೆ ಸಾಕಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ ಮತ್ತು ಕಾರ್ಯಾಚರಣೆ ಸಾಮರ್ಥ್ಯವನ್ನು ಕಡಿಮೆಗೊಳಿಸಿತು.
ಈ ಬಾರಿ, ಕಂಪನಿಯು ಷಡ್ಭುಜಾಕೃತಿಯ ಲ್ಯಾಂಡರ್‌ಗೆ ಪ್ರಮುಖ ಸುಧಾರಣೆಗಳನ್ನು ಮಾಡಿದೆ ಎಂದು ಹೇಳುತ್ತದೆ, ಇದು ಬ್ಲೂ ಘೋಸ್ಟ್‌ಗಿಂತ ಎತ್ತರದ, ತೆಳ್ಳಗಿನ ಪ್ರೊಫೈಲ್ ಅನ್ನು ಹೊಂದಿದೆ ಮತ್ತು ವಯಸ್ಕ ಜಿರಾಫೆಯ ಎತ್ತರದಷ್ಟಿದೆ.
ಇದು ಇದುವರೆಗೆ ಪ್ರಯತ್ನಿಸದ ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ ಮಾಡಲಿದೆ. ಅದರ ಪೇಲೋಡ್‌ಗಳಲ್ಲಿ ಮೂರು ರೋವರ್‌ಗಳು, ಮಂಜುಗಡ್ಡೆಯನ್ನು ಹುಡುಕುವ ಡ್ರಿಲ್ ಮತ್ತು ಚಂದ್ರನ ಮೇಲ್ಮೈನ ಒರಟಾದ ಭೂಪ್ರದೇಶವನ್ನು ಅನ್ವೇಷಿಸಲು ವಿನ್ಯಾಸಗೊಳಿಸಲಾದ ಮೊದಲ-ರೀತಿಯ ಜಿಗಿತದ ಡ್ರೋನ್‌ಗಳನ್ನು ಒಳಗೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ