ಮೈ ಜುಂ ಎನ್ನುವ ವೀಡಿಯೊ | ದುಸ್ಸಾಹಸ….ದೈತ್ಯಾಕಾರದ ಮೊಸಳೆ ಬಾಯಿ ಬಳಿ ಹೋಗಿ ಬರಿಗೈಯಿಂದ ಆಹಾರ ನೀಡಿದ ವ್ಯಕ್ತಿ….!

ದೈತ್ಯಾಕಾರದ ಮೊಸಳೆಗೆ ನಿರ್ಭಯವಾಗಿ ಬರಿಗೈಯಿಂದ ಆಹಾರ ನೀಡುತ್ತಿರುವ ವ್ಯಕ್ತಿಯೊಬ್ಬರ ಮೈಜುಂ ಎನ್ನುವ ವೀಡಿಯೋ ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ.
“ನೇಚರ್ ಈಸ್ ಅಮೇಜಿಂಗ್” ಎಂಬ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಳ್ಳಲಾದ ದೃಶ್ಯಾವಳಿಯು ವ್ಯಕ್ತಿಯೊಬ್ಬರು ತರಬೇತಿ ಪಡೆದವರಂತೆ ದೈತ್ಯಾಕಾರದ ಮೊಸಳೆಗೆ ಸಾಕುಪ್ರಾಣಿಗೆ ನೀಡುವಂತೆ ಯಾವುದೇ ಭಯವಿಲ್ಲದೆ ಶಾಂತವಾಗಿ ಆಹಾರ ನೀಡುತ್ತಿರುವುದನ್ನು ತೋರಿಸಿದೆ. ಆ ವ್ಯಕ್ತಿ ಯಾವುದೇ ರಕ್ಷಣಾತ್ಮಕ ಕೈವುಸು ಇತ್ಯಾದಿ ಧರಿಸಿದ್ದು ಕಂಡುಬಂದಿಲ್ಲ.
ಸಾಮಾನ್ಯವಾಗಿ ಆಕ್ರಮಣಕಾರಿ ಪ್ರವೃತ್ತಿ ತೋರುವ ಮೊಸಳೆ ಸಹ ಆಶ್ಚರ್ಯಕರ ಎಂಬಂತೆ ಶಾಂತವಾಗಿ ವರ್ತಿಸಿರುವುದು ಸಹ ಗಮನ ಸೆಳೆದಿದೆ. ಆಹಾರ ನೀಡಿದ ನಂತರ, ಅದು ಯಾವುದೇ ಆಕ್ರಮಣಶೀಲತೆ ಪ್ರದರ್ಶಿಸದೆ ಶಾಂತವಾಗಿಯೇ ನೀರಿಗೆ ಹೋಗಿದೆ.

ಮೊಸಳೆಯ ಶಾಂತ ವರ್ತನೆಯು ಎಚ್ಚರಿಕೆಯ ತರಬೇತಿಯಿಂದ ಬಂದಿರಬಹುದು ಎಂದು ಕೆಲವರು ಹೇಳಿದರೆ ಇತರರು ಅತ್ಯಂತ ಸುಶಿಕ್ಷಿತ ಕಾಡು ಪ್ರಾಣಿಗಳು ಸಹ ಅನಿರೀಕ್ಷಿತವಾಗಿ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಏಕೆಂದರೆ ಅವುಗಳ ಪ್ರವೃತ್ತಿಯು ಯಾವುದೇ ಕ್ಷಣದಲ್ಲಿ ಕಂಡೀಷನಿಂಗ್ ಅನ್ನು ಅತಿಕ್ರಮಿಸಬಹುದು.
ಈ ವೀಡಿಯೊ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಹೆಚ್ಚಿನ ವೀಕ್ಷಕರು ಆ ವ್ಯಕ್ತಿಯನ್ನು “ಅಜಾಗರೂಕತೆಯಿಂದ ಕೂಡಿದ ಧೈರ್ಯಶಾಲಿ” ಎಂದು ಪರಿಗಣಿಸಿದ್ದಾರೆ ಮತ್ತು ಇಕೆಲವರು “ಶುದ್ಧ ಮೂರ್ಖತನ” ಎಂದು ಕರೆದಿದ್ದಾರೆ. ಒಬ್ಬ ಬಳಕೆದಾರರು “ದೈತ್ಯ ಅಮೇರಿಕನ್ ಮೊಸಳೆಗೆ ಬರಿಕಗೈಯಿಂದ ಆಹಾರ ನೀಡುವುದು ಒಂದು ಜೂಜು ಎಂದು ಬರೆದಿದ್ದಾರೆ.

ಅಮೆರಿಕನ್ ಮೊಸಳೆ (ಕ್ರೊಕೊಡೈಲಸ್ ಅಕ್ಯುಟಸ್) ಅಮೆರಿಕದ ದಕ್ಷಿಣ ಭಾಗದಿಂದ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್‌ ವರೆಗೆ ವಾಸಿಸುವ ಮೊಸಳೆಯಾಗಿದೆ. ಅಮೆರಿಕನ್ ಮೊಸಳೆಗಳು ಉಪ್ಪುನೀರಿನ ಪರಿಸರದಲ್ಲಿ ವಾಸಿಸುತ್ತವೆ, ಉದಾಹರಣೆಗೆ ನದೀಮುಖಗಳು, ಮ್ಯಾಂಗ್ರೋವ್ ಜೌಗು ಪ್ರದೇಶಗಳು ಮತ್ತು ಸಮುದ್ರ ತೀರಗಳಲ್ಲಿ ಕಂಡುಬರುತ್ತವೆ. ಕಾಡಿನಲ್ಲಿ 50-60 ವರ್ಷಗಳವರೆಗೆ ಬದುಕಬಲ್ಲವು. ಅವರು 15 ಅಡಿ (4.6 ಮೀಟರ್) ಉದ್ದದವರೆಗೆ ಬೆಳೆಯಬಹುದು ಮತ್ತು 800 ಪೌಂಡ್ (360 ಕಿಲೋಗ್ರಾಂ) ವರೆಗೆ ತೂಗಬಹುದು. ಅವರು ಮೀನು, ಸಣ್ಣಪುಟ್ಟ ಜಲಚರಗಳು, ಪಕ್ಷಿಗಳು ಮತ್ತು ಸಣ್ಣ ಸಸ್ತನಿಗಳು ಸೇರಿದಂತೆ ವಿವಿಧ ಜೀವಿಗಳನ್ನು ಬೇಟೆಯಾಡಿ ತಿನ್ನುತ್ತವೆ.
ಅವುಗಳ ಆವಾಸ ಸ್ಥಾನ ಕಡಿಮೆಯಾಗಿರುವುದು, ಅವುಗಳನ್ನು ಬೇಟೆಯಾಡುವುದು ಮತ್ತು ಮಾನವ-ಮೊಸಳೆ ಸಂಘರ್ಷದ ಕಾರಣದಿಂದಾಗಿ ಅವುಗಳನ್ನು IUCN ಕೆಂಪು ಪಟ್ಟಿಯಲ್ಲಿ ದುರ್ಬಲ ವರ್ಗ ಎಂದು ಪಟ್ಟಿಮಾಡಲಾಗಿದೆ.

ಪ್ರಮುಖ ಸುದ್ದಿ :-   ನೂತನ ಪೋಪ್ ಆಗಿ ಆಯ್ಕೆಯಾದ ರಾಬರ್ಟ್ ಪ್ರೇವೋಸ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement