ಫ್ರಮ್2 (Fram2) ಮಿಷನ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಸ್ಪೇಸ್‌ಎಕ್ಸ್ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಧ್ರುವ ಪ್ರದೇಶಗಳ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಿದೆ. ಫ್ರಮ್ 2 (Fram2) ಮಿಷನ್ ಸೋಮವಾರ, ಮಾರ್ಚ್ 31 ರಂದು ಪ್ರಾರಂಭವಾಯಿತು ಹಾಗೂ ನಾಲ್ವರು ಗಗನಯಾತ್ರಿಗಳನ್ನು ಭೂಮಿಯ ಧ್ರುವೀಯ ಕಕ್ಷೆಗೆ ಕಳುಹಿಸಿತು.
ಅಮೆರಿಕದ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರೆಸಿಲಿಯನ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಉಡಾವಣೆ ಮಾಡಲಾಯಿತು, ನಾಲ್ಕು ಗಗನಯಾತ್ರಿಗಳನ್ನು ಅವರ ಮೊದಲ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಾಯಿತು.
ಈ ಮಿಷ್ನ್‌ನಲ್ಲಿ ಮಾಲ್ಟೀಸ್ ಉದ್ಯಮಿ ಮತ್ತು ಕ್ರಿಪ್ಟೋಕರೆನ್ಸಿ ಮ್ಯಾಗ್ನೇಟ್ ಚುನ್ ವಾಂಗ್, ನಾರ್ವೆಯ ನೌಕೆ ಕಮಾಂಡರ್ ಜಾನ್ನಿಕ್ ಮಿಕ್ಕೆಲ್ಸೆನ್, ಜರ್ಮನಿಯ ಪೈಲಟ್ ರಾಬಿಯಾ ರೋಗ್ ಮತ್ತು ಆಸ್ಟ್ರೇಲಿಯಾದ ವೈದ್ಯಾಧಿಕಾರಿ ಎರಿಕ್ ಫಿಲಿಪ್ಸ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ.
ಫಾಲ್ಕನ್ 9 ಉಡಾವಣಾ ವಾಹನದಿಂದ ಬೇರ್ಪಟ್ಟ ನಂತರ, ಬಾಹ್ಯಾಕಾಶ ನೌಕೆ ಉದ್ದೇಶಿತ ಪ್ರಯಾಣವನ್ನು ಮುಂದುವರೆಸಿತು. ಈಗ, ಫ್ರಮ್2 (Fram2) ಬಾಹ್ಯಾಕಾಶ ನೌಕೆಯಲ್ಲಿರುವ ನಾಲ್ವರು ಅಸಾಧಾರಣ ವಾಂಟೇಜ್ ಪಾಯಿಂಟ್‌ನಿಂದ ಯಾರೂ ಅನ್ವೇಷಿಸದ ಉತ್ತರ ಹಾಗೂ ದಕ್ಷಿಣ ಧ್ರುವಗಳ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಇದು ಭೂಮಿಯ ವಿಸ್ಮಯಕಾರಿ ಸೌಂದರ್ಯದ ಒಂದು ನೋಟವನ್ನು ನೀಡುತ್ತದೆ.
ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಿಂದ ತೆಗೆದ ಬೆರಗುಗೊಳಿಸುವ ವೀಡಿಯೊ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ 90-ಡಿಗ್ರಿ ಇಳಿಜಾರಿನಲ್ಲಿ ಭೂಮಿಯನ್ನು ಸುತ್ತುತ್ತಿರುವಾಗ ರೆಕಾರ್ಡ್ ಮಾಡಲಾಗಿದೆ.
ವೀಡಿಯೋಗೆ ಪ್ರತಿಕ್ರಿಯಿಸಿದ ಬಿಲಿಯನೇರ್ ಎಲೋನ್ ಮಸ್ಕ್, “ಮಾನವರು ಭೂಮಿಯ ಧ್ರುವಗಳ ಸುತ್ತ ಕಕ್ಷೆಗೆ ಬಂದಿರುವುದು ಇದೇ ಮೊದಲು! ಎಂದು ಬರೆದಿದ್ದಾರೆ.
1800 ರ ದಶಕದಲ್ಲಿ ಭೂಮಿಯ ಧ್ರುವ ಪ್ರದೇಶಗಳನ್ನು ಮೊದಲು ತಲುಪಿದ ಮೂಲ ಫ್ರಮ್ ಹಡಗಿನ ನೆನಪಿಗಾಗಿ ಈ ಬಾಹ್ಯಾಕಾಶ ನೌಕೆಗೆ ಫ್ರಮ್ ಹೆಸರಿಡಲಾಗಿದೆ. ಗಗನಯಾತ್ರಿಗಳಾದ ಚುನ್ ವಾಂಗ್, ಜಾನ್ನಿಕ್ ಮಿಕ್ಕೆಲ್ಸೆನ್, ರಾಬಿಯಾ ರೋಗ್ ಮತ್ತು ವೈದ್ಯಾಧಿಕಾರಿ ಎರಿಕ್ ಫಿಲಿಪ್ಸ್ ಹಲವಾರು ಪ್ರಯೋಗಗಳನ್ನು ನಡೆಸುವಾಗ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಗಮನಿಸುವುದರ ಮೇಲೆ ಕೇಂದ್ರೀಕರಿಸಿದ್ದಾರೆ.
Fram2 ಮಿಷನ್ ಭೂಮಿಯ ಧ್ರುವಗಳಾದ ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಮಂಜುಗಡ್ಡೆಯ ಹೊದಿಕೆಯನ್ನು ಒಳಗೊಂಡಂತೆ ಭೂಮಿಯ ದೂರದ ಪ್ರದೇಶಗಳ ಅಭೂತಪೂರ್ವ ವೀಕ್ಷಣೆಗಳನ್ನು ಮಾಡುತ್ತದೆ. ಗಗನಯಾತ್ರಿಗಳು ಧ್ರುವೀಯ ವಿದ್ಯಮಾನಗಳ ವಿಶಿಷ್ಟ ತುಣುಕನ್ನು ಸೆರೆಹಿಡಿಯುತ್ತಾರೆ, ಇದು ಭೂಮಿಯ ಧ್ರುವಗಳ ಅರೋರಾಗಳು ಮತ್ತು ಮಂಜುಗಡ್ಡೆಯ ರಚನೆಗಳು, ಹವಾಮಾನ ಸಂಶೋಧನೆಗೆ ಅಮೂಲ್ಯವಾದ ಡೇಟಾವನ್ನು ನೀಡುತ್ತವೆ.
ಗಗನಯಾತ್ರಿಗಳು ಭೂಮಿಯ ಧ್ರುವೀಯ ಪರಿಸರವನ್ನು ಗಮನಿಸುವುದರ ಜೊತೆಗೆ, ಬಾಹ್ಯಾಕಾಶದಲ್ಲಿ ಮೊದಲ ಎಕ್ಸ್-ರೇ ಇಮೇಜಿಂಗ್ ಮತ್ತು ಮೈಕ್ರೋ ಗ್ರಾವಿಟಿಯಲ್ಲಿ ಅಣಬೆಗಳನ್ನು ಬೆಳೆಯುವ ಬಗ್ಗೆ ಅಧ್ಯಯನ ಸೇರಿದಂತೆ ಪ್ರಯೋಗಗಳನ್ನು ನಡೆಸುತ್ತಾರೆ.
ಈ ಉಪಕ್ರಮಗಳನ್ನು ಬಾಹ್ಯಾಕಾಶದಲ್ಲಿ ಮಾನವ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಭವಿಷ್ಯದ ದೀರ್ಘಾವಧಿಯ ಕಾರ್ಯಾಚರಣೆಗಳಿಗಾಗಿ ಸುಸ್ಥಿರ ಆಹಾರ ಮೂಲಗಳನ್ನು ಅನ್ವೇಷಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಮಿಷನ್ ನಾಲ್ಕು ದಿನಗಳ ಕಾಲ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, ಈ ಸಮಯದಲ್ಲಿ 22 ಪ್ರಯೋಗಗಳನ್ನು ನಡೆಸುತ್ತಾರೆ ಮತ್ತು ಹತ್ತಿರದ ಭೂಮಿಯ ಕಕ್ಷೆಯಿಂದ ಧ್ರುವ ಪ್ರದೇಶಗಳನ್ನು ವೀಕ್ಷಿಸುತ್ತಾರೆ. ತಮ್ಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ, ಬಾಹ್ಯಾಕಾಶ ನೌಕೆಯು ಪೆಸಿಫಿಕ್ ಸಾಗರದಲ್ಲಿ ಇಳಿಯುತ್ತದೆ. ಮಿಷನ್‌ನ ಹಾರಾಟದ ಕಾರ್ಯಕ್ರಮವನ್ನು 86 ಗಂಟೆಗಳ ಕಾಲ ವಿನ್ಯಾಸಗೊಳಿಸಲಾಗಿದೆ, ಏಪ್ರಿಲ್ 4 ರಂದು ಭೂಮಿಗೆ ಹಿಂತಿರುಗಲು ನಿಗದಿಪಡಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ